March 7, 2026
ಗ್ರಾಮಾಂತರ ಸುದ್ದಿ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕವಿ ಸಮ್ಮಿಲನ

ಬೆಳ್ತಂಗಡಿ :ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ಬೆಳ್ತಂಗಡಿ ತಾಲೂಕು ಘಟಕ ಇದರ ನೇತೃತ್ವದಲ್ಲಿ ‘ಹಸಿರೇ ನಮ್ಮ ಉಸಿರು’ ವಿಷಯದ ಕುರಿತು ಕವಿ ಸಮ್ಮಿಲನ ಕಾರ್ಯಕ್ರಮ ಬೆಳ್ತಂಗಡಿಯ ಜೇಸಿ ಭವನ ಜರುಗಿತು.

ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕವನಗಳ ಅವಲೋಕನದ ನಿರ್ವಹಣೆಯನ್ನು ಉಪನ್ಯಾಸಕಿ ಹೇಮಾವತಿ ಕೆ.ನಡೆಸಿದರು. ತಾಲೂಕು ಸಮಿತಿ ಉಪಾಧ್ಯಕ್ಷ ರಾಮಕೃಷ್ಣ ಬದನಾಜೆ, ಕಾರ್ಯದರ್ಶಿ ಸುಭಾಷಿಣಿ,ಸಹ ಕಾರ್ಯದರ್ಶಿ ಸಂತೋಷಿನಿ ಕಾರಂತ್, ಮಹಿಳಾ ಪ್ರಕಾರದ ಕೋಶಾಧಿಕಾರಿ ವನಜಾ ಜೋಷಿ,ಸದಸ್ಯರಾದ ದಿವಾಕರ್ ಕೊಕ್ಕಡ ,ಶಿವಪ್ರಸಾದ್ ಸುರ್ಯ,ಕೇಶವ ಭಟ್ ಅತ್ತಾಜೆ ಉಪಸ್ಥಿತರಿದ್ದರು.


ಅಭಾಸಪ ಮಹಿಳಾ ಪ್ರಕಾರ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷೆ ಆಶಾ ಅಡೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆಳ್ತಂಗಡಿ ಪರಿಸರದ ಕವಿಗಳಾದ ವೃಂದಾ ತಾಮನ್ಕರ್, ಉಷಾ ಶಶಿಧರ್ ಶೆಟ್ಟಿ,ಅಶ್ವಿನಿ ಹೆಬ್ಬಾರ್,ಅಶ್ವಿಜಾ ಶ್ರೀಧರ್, ಅಕ್ಷತಾ ಅಡೂರ್,ಜ್ಯೋತಿ, ಜ್ಯೋತಿ ಬಾಳಿಗ, ಸುಮತಿ ಪಿ. ಕಾರ್ಕಳ,ಧನ್ಯಾ ನಾವುಳೆ, ಆಶಾ, ತೃಷಾ, ಸೃಷ್ಟಿ, ಮೋಕ್ಷಿತ್ ಕೆ., ರಕ್ಷಾ ಎನ್., ಪುಣ್ಯಶ್ರೀ, ತ್ರಿಷಾ ಜೈನ್, ಮೋಕ್ಷಿತಾ, ಮೋಕ್ಷಾ ವರ್ಷಿತಾ, ರಶ್ಮಿ ಸ್ವರಚಿತ ಕವನ ವಾಚಿಸಿದರು.


ಮಹಿಳಾ ಪ್ರಕಾರದ ಪ್ರಮುಖ್ ವನಿತಾ ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಮೇಘನಾ ಪ್ರಶಾಂತ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.ಅಕ್ಷತಾ ಅಡೂರ್ ಸಹಕರಿಸಿದರು.

Related posts

ಸೌತಡ್ಕ ಶ್ರೀ ಮಹಾಗಣಪತಿ ದೇವರಿಗೆ ಬೆಂಗಳೂರಿನ ನಾಗೇಂದ್ರ ಶಾಸ್ತ್ರೀರವರಿಂದ 108 ಲೀಟರ್ ಹಾಲಿನಿಂದ ಅಭಿಷೇಕ

Suddi Udaya

ಉಪ್ಪಾರಪಳಿಕೆ ಸ.ಹಿ.ಪ್ರಾ. ಶಾಲೆಗೆ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಮತ್ತು ಸೌತಡ್ಕ ಸೇವಾ ಸಮಿತಿಯ ವತಿಯಿಂದ ಪುಸ್ತಕ ವಿತರಣೆ

Suddi Udaya

ಉಜಿರೆ :ಶ್ರೀ ಧ.ಮಂ. ವಸತಿ ಪ.ಪೂ. ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಭಾರೀ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ ನದಿ: ಪಜಿರಡ್ಕದಲ್ಲಿ ಗಂಗಾಪೂಜೆ

Suddi Udaya

ಚೆಕ್ ಅಮಾನ್ಯ ಪ್ರಕರಣ; ನ್ಯಾಯಾಲಯದಲ್ಲಿ ಖುಲಾಸೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಿದ ಪ್ರಕರಣ: 9 ನೇ ಗುರುತಿನಲ್ಲಿ ಪತ್ತೆಯಾಗದ ಕಳೇಬರದ ಅವಶೇಷ

Suddi Udaya
error: Content is protected !!