September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಬೃಹತ್ ಉಚಿತ ಆರೋಗ್ಯ ಹಾಗೂ ಮಹಿಳೆಯರ ಕ್ಯಾನ್ಸ‌ರ್ ತಪಾಸಣಾ ಶಿಬಿರ

ಮಡಂತ್ಯಾರು:ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೇತೃತ್ವದಲ್ಲಿ,ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು ಫಾ | ಎಲ್. ಎಂ. ಪಿಂಟೋ ಆಸ್ಪತ್ರೆ, ಬದ್ಯಾರು ಮತ್ತು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯೂತ್ ರೆಡ್ ಕ್ರಾಸ್,ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ಹಾಗೂ ಮಹಿಳೆಯರ ಕ್ಯಾನ್ಸ‌ರ್ ತಪಾಸಣಾ ಶಿಬಿರವು ವಾರ್ಷಿಕ ಮಹಾಸಭೆಯ ಮೊದಲ ಅಂಗವಾಗಿ ಜು. 13ರಂದು ನಡೆಯಿತು.

ಶಾಸಕ ಹರೀಶ್ ಪೂಂಜರವರು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಆರ್ಥಿಕ ಸ್ವಾಸ್ಥ್ಯ ಕಾಪಾಡುವ ಜೊತೆಗೆ ಸಮಾಜದ ಆರೋಗ್ಯ ಕಾಪಾಡುವ ಕೆಲಸವನ್ನು ಮಾಡುತ್ತಿರುವ ಮಡಂತ್ಯಾರು ಸಿಎ ಬ್ಯಾಂಕ್ ಸಮಾಜಕ್ಕೆ ಮಾದರಿಯಾಗಿದೆ ಎಂದರು.ಧರ್ಮಗುರುಗಳು ಹಾಗೂ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಮಚಾಲಕರಾದ ವಂ.ಸ್ವಾಮಿ ಡಾ.ಸ್ಟಾನಿ ಗೋವಿಯಸ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಅತಿಥಿಗಳಾಗಿ ಎಂಎಲ್ಸಿ ಕೆ.ಪ್ರತಾಪಸಿಂಹ ನಾಯಕ್,ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ನಿರ್ದೇಶಕರಾದ ಕುಶಾಲಪ್ಪ ಗೌಡ ಪೂವಾಜೆ,ಮಂಗಳೂರು ಇಂಡಿಯನ್ ಕ್ಯಾನ್ಸರ್ ಸೊಸೈಟಿ ರಿಜಿನಲ್ ಸಂಯೋಜಕರಾದ ರಂಜನ್ ಎ.ವಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಜೋಯೆಲ್ ಮೆಂಡೋನ್ಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಘದ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.ವೇದಿಕೆಯಲ್ಲಿ ಬದ್ಯಾರು ಪಾ.ಎಲ್.ಎಂ ಪಿಂಟೋ ಆಸ್ಪತ್ರೆಯ ಮುಖ್ಯಸ್ಥರಾದ ಸಿಸ್ಟರ್ ಜಾನೆಟ್ ರೇಗೋ,ಡಾ.ವಿಲ್ಬರ್,ಸಂಘದ ಉಪಾಧ್ಯಕ್ಷ ಕಾಂತಪ್ಪ ಗೌಡ,ನಿರ್ದೇಶಕರಾದ ಶ್ರೀಮತಿ ಧನಲಕ್ಷ್ಮಿ,ಶ್ರೀಮತಿ ಅಮಿತಾ ಪ್ರಿಯಾ ಲೋಬೋ,ಸುರೇಶ್ ಎಸ್,ಮಹಾಬಲ ಕೆ,ಗಣೇಶ್ ಮೂಲ್ಯ,ಗೋಪಾಲಕೃಷ್ಣ ಕೆ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೋಕಿಂ ಡಿಸೋಜ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಜೋಯೆಲ್ ಮೆಂಡೋನ್ಸಾ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು. ಪ್ರಾನ್ಸಿಸ್ ವಿವಿ ಕಾರ್ಯಕ್ರಮ ನಿರೂಪಿಸಿದರು. ಕಾಂತಪ್ಪ ಗೌಡ ವಂದಿಸಿದರು. ಪೂರ್ಣಿಮಾ ಪ್ರಾರ್ಥನೆ ಹಾಡಿದರು.

Related posts

ಮತ್ತೆ ಬಂದಿದೆ ಮುಳಿಯ ಜ್ಯುವೆಲ್ಸ್ ಚಿನ್ನೋತ್ಸವ, ನ.10ರಿಂದ 30ರ ವರೆಗೆ: ಪುತ್ತೂರು ಮತ್ತು ಬೆಳ್ತಂಗಡಿಯ ಮುಳಿಯ ಜ್ಯುವೆಲ್ಸ್‌ನಲ್ಲಿ ಮಳಿಗೆಗಳಲ್ಲಿ ಚಿನ್ನದ ಹಬ್ಬ

Suddi Udaya

ಸುಲ್ಕೇರಿ ಕುಲಾಲ ಕುಂಭಶ್ರೀ ಸಂಘದ ಅಧ್ಯಕ್ಷರಾಗಿ ಜಯ ಮೂಲ್ಯ , ಕಾರ್ಯದರ್ಶಿಯಾಗಿ ರಾಕೇಶ್ ಕುಲಾಲ್ ಆಯ್ಕೆ

Suddi Udaya

ನೆರಿಯ: ಅಣಿಯೂರು ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ: ಕಾಟಾಜೆ ರಸ್ತೆಗೆ ನೀರು ಪ್ರವೇಶಿಸಿ ಮುಳುಗಿದ ಕಾರು

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ಓಡಿಲ್ನಾಳ ಶ್ರೀ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 3ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ, ಧಾರ್ಮಿಕ ಸಭೆ

Suddi Udaya

ಸುಲ್ಕೇರಿ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ವತಿಯಿಂದ ಆರೋಗ್ಯ ವಿಮೆಯ ಮಂಜೂರಾತಿ ಪತ್ರ ವಿತರಣೆ

Suddi Udaya
error: Content is protected !!