September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಗೆ ಮಂಗಳೂರು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತಜ್ಞ ವೈದ್ಯರು ಮತ್ತು ಪ್ರೊಫೆಸರ್ ಗಳ ತಂಡ ಭೇಟಿ

ಕಕ್ಕಿಂಜೆ: ಮಂಗಳೂರಿನ (ಕೆಎಂಸಿ) ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ತಜ್ಞ ವೈದ್ಯರು ಮತ್ತು ಪ್ರೊಫೆಸರ್ ಗಳ ತಂಡ ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಗೆ ಭೇಟಿ ನೀಡಿ ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವುದರ ಬಗ್ಗೆ ಚರ್ಚಿಸಿದರು.

ಕೆಎಂಸಿ ಆಸ್ಪತ್ರೆ ಸಮುದಾಯ ವೈದ್ಯಕೀಯ ವಿಭಾಗವು(Department of Community Medicine) ಮತ್ತು ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆಯೊಂದಿಗೆ ಹೊಸ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಈ ಒಡಂಬಡಿಕೆಯು ಕೆಎಂಸಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತಜ್ಞವೈದ್ಯರ ಲಭ್ಯತೆ, ಉತ್ತಮ ವೈದ್ಯಕೀಯ ಸೇವೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಲು, ಗುಣಮಟ್ಟದ ಆರೋಗ್ಯ ಸೇವೆ ನೀಡಲು ಇನ್ನಷ್ಟು ಸಹಕಾರಿಯಾಗಲಿದೆ ಮತ್ತು ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ತಜ್ಞವೈದ್ಯರು ಪ್ರತಿದಿನ ಸಂದರ್ಶನಕ್ಕೆ ಲಭ್ಯರಿರುತ್ತಾರೆ.

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೆಶಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ, ಕೆಎಂಸಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನ ಮಿತ್ರ, ಸಮುದಾಯ ವೈದ್ಯಕೀಯ ವಿಭಾಗದ ಪ್ರೊಫೆಸರ್ ಗಳಾದ ಡಾ.ಮಿಥುನ್ ಹಾಗೂ ಡಾ.ಅಜಿತ್, ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ವಂದನಾ ಎಂ ಇರ್ವತ್ರಾಯ, ಮುಖ್ಯ ವೈದ್ಯಾಧಿಕಾರಿ ಡಾ.ಅಲ್ಬೀನ್ ಜೋಸೆಫ್, ವೈದ್ಯಾಧಿಕಾರಿ ಡಾ.ಮೌಲ್ಯ ಆಡಳಿತಾಧಿಕಾರಿ ಶ್ರೀಮತಿ ಜ್ಯೋತಿ ವಿ ಸ್ವರೂಪ್ ಉಪಸ್ಥಿತರಿದ್ದರು.

Related posts

ಶ್ರೀ ಧರ್ಮಸ್ಥಳ ದೀಪೋತ್ಸವದ ಪ್ರಯುಕ್ತ ಭಗವಾನ್ ಶಿರಡಿ ಸಾಯಿ ಸತ್ಯ ಸಾಯಿ ಸೇವಾ ಕ್ಷೇತ್ರ ಶ್ರೀ ಸಾಯಿ ನಗರ ಸದಸ್ಯರಿಂದ ಭಜನಾ ಸಂಕೀರ್ತನ್ ಕಾರ್ಯಕ್ರಮ

Suddi Udaya

ಕೂಟ ಮಹಾ ಜಗತ್ತು ಬಂಟ್ವಾಳ ಅಂಗಸಂಸ್ಥೆಯ ಮಹಿಳಾ ವೇದಿಕೆಯ ರಜತ ಸಂಭ್ರಮ

Suddi Udaya

ತುಳುಕೂಟ ಇಸ್ರೇಲ್ ವತಿಯಿಂದ ಅಶಕ್ತರಿಗೆ ಆರ್ಥಿಕ ನೆರವು: ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ ಅಜಿಲರಿಂದ ಹಸ್ತಾಂತರ

Suddi Udaya

ಮಾಲಾಡಿ ಸರ್ಕಾರಿ ಐಟಿಐ ಯಲ್ಲಿ ಕ್ಯಾಂಪಸ್ ಸಂದರ್ಶನ

Suddi Udaya

ಭಾರತ್ ಸ್ಕೌಟ್ಸ್ & ಗೈಡ್ಸ್ ವತಿಯಿಂದ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಸ್ಕಾರ್ಫ್ ದಿನಾಚರಣೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!