March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ: ನೇರ್ತನೆ ಪರಿಸರದಲ್ಲಿ ಮತ್ತೆ ತೋಟಕ್ಕೆ ನುಗ್ಗಿದ್ದ ಕಾಡಾನೆ : ಕೃಷಿಗೆ ವ್ಯಾಪಕ ಹಾನಿ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ‌ ನೇರ್ತನೆ ಪರಿಸರದಲ್ಲಿ ಕಾಡಾನೆಗಳು ಪ್ರತಿ ನಿತ್ಯ ತೋಟಗಳಿಗೆ ನುಗ್ಗುತ್ತಿದ್ದು ಕೃಷಿಗೆ ವ್ಯಾಪಕ ಹಾನಿಯುಂಟುಮಾಡುತ್ತಿದೆ.


ಕಳೆದ ಮೂರು ದಿನಗಳಿಂದ ಕಾಡಾನೆಗಳು ಇಲ್ಲಿಯೇ ಬೀಡು ಬಿಟ್ಟಿದ್ದು ಸಂಜೆಯಾದ ಕೂಡಲೇ ತೋಟಗಳಿಗೆ ನುಗ್ಗುತ್ತಿವೆ.
ಜು.18 ರಾತ್ರಿಯ ವೇಳೆ ಇಲ್ಲಿನ ನಿವಾಸಿ ಟಿ.ವಿ ದೇವಸ್ಯ ಎಂಬವರ ಮನೆಯ ಸಮೀಪಕ್ಕೆ ಬಂದ ಕಾಡಾನೆಗಳು ಇಲ್ಲಿ ಕೃಷಿ ಮಾಡಿದ್ದ ಮರಗೆಣಸಿನ ಗಿಡಗಳನ್ನು ಸಂಪೂರ್ಣ ನಾಶಗೈದಿದೆ. ಬಾಲೆ ಹಾಗೂ ಇತರ ಕೃಷಿಗೂ ಹಾನಿಯುಂಟಾಗಿದೆ.
ಸಮೀಪದ ವಿಲ್ಸನ್ ಟಿ.ವಿ ಅವರ ತೋಟಕ್ಕೂ ನುಗ್ಗಿದ್ದು ಬಾಳೆ ಹಾಗೂ ತೆಂಗಿನ ಗಿಡಗಳನ್ನು ನಾಶಗೊಳಿಸಿದೆ. ಇಲ್ಲಿನ ನಿವಾಸಿ ವಿಲ್ಸನ್ ಎಂಬವರ ಮನೆಯ ಹಿಂಬದಿಯ ಅಂಗಳದವರೆಗೂ ಕಾಡಾನೆ ಬಂದಿದ್ದು ತೋಟದಲ್ಲಿ ಸಂಪೂರ್ಣ ನಾಶಗೊಳಿಸಿದೆ. ಕ್ಸೇವಿಯರ್, ಶ್ರೀನಿವಾಸ ಅವರ ತೋಟಗಳಲ್ಲಿಯು ಕೃಷಿಗೆ ಹಾನಿಯುಂಟುಮಾಡಿದೆ. ಆನೆ ಹೋದ ದಾರಿಯಲ್ಲೆಲ್ಲ ಹಲವರ ತೋಟಗಳಲ್ಲಿ ಕೃಷಿಗಳನ್ನು ನಾಶಗೊಳಿಸುತ್ತಾ ಸಾಗಿದೆ.


ಸಂಜೆಯ ವೇಳೆಗೆ ಧರ್ಮಸ್ಥಳ ದಿಂದ ನೇರ್ತನೆಗೆ ಹೋಗುವ ರಸ್ತೆಯ ಬದಿಯಲ್ಲಿ ಕಲ್ಲೇರಿ ಸಮೀಪವೇ ಕಾಡನೆ ಕಾಣಿಸಿಕೊಳ್ಳುತ್ತಿದೆ. ಪ್ರತಿನಿತ್ಯ ಶಾಲಾ ಮಕ್ಕಳು ಸೇರಿದಂತೆ ನೂರಾರು ಜನರು ಓಡಾಡುವ ರಸ್ತೆಯ ಬದಿಯಲ್ಲಿಯೇ ಕಾಡಾನೆ ಕಾಣಿಸುತ್ತಿರುವುದು ಜನರಲ್ಲಿ ಆತಂಕ‌ಮೂಡಿಸಲು ಕಾರಣವಾಗಿದೆ.

Related posts

ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಉಜಿರೆ ವರ್ತಕರ ಕುಟುಂಬ ಮಿಲನ ಕಾರ್ಯಕ್ರಮ

Suddi Udaya

ಮಚ್ಚಿನ: ನೆತ್ತರ ಸ. ಕಿ. ಪ್ರಾ. ಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಶಿಬಿರ ಉದ್ಘಾಟನೆ

Suddi Udaya

ರಾಜ್ಯಮಟ್ಟದ ಶ್ರೀ ಭಗವದ್ಗೀತಾ ಸ್ಪರ್ಧೆ: ಉಜಿರೆಯ ಎಸ್ ಡಿಎಂ ಪ.ಪೂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ನಿರ್ದೇಶಕರ ಹಾಗೂ ವಿಶೇಷ ಆಹ್ವಾನಿತರ ಸಭೆ: ದೀಪಾವಳಿಯ ತುಡಾರು ಪರ್ಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವಲಯಾರಣ್ಯಾಧಿಕಾರಿ ತ್ಯಾಗರಾಜ್ ಅಮಾನತಿಗೆ ಕೆಎಟಿ ತಡೆ: ಕರ್ತವ್ಯಕ್ಕೆ ಹಾಜರು

Suddi Udaya

ಜು.21: ಲಾಲಿತ್ಯೋದ್ಯಾನ ಕವನ ಸಂಕಲನ ಬಿಡುಗಡೆ

Suddi Udaya
error: Content is protected !!