September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ಇಂಟರಾಕ್ಟ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಉಜಿರೆ: ಬೆಳ್ತಂಗಡಿ ರೋಟರಿ ಕ್ಲಬ್ ಪ್ರಾಯೋಜಿತ ಇಂಟರಾಕ್ಟ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.19ರಂದು ಉಜಿರೆಯ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.

ವಲಯದ ಸಹಾಯಕ ಗವರ್ನರ್ ರೋ| ಡಾ. ಎ.ಜೆ. ಶೆಟ್ಟಿ ಪದಗ್ರಹಣ ಸಮಾರಂಭವನ್ನು ನಡೆಸಿಕೊಟ್ಟರು.

ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ರೋ| ಪ್ರೊ. ಪ್ರಕಾಶ್ ಪ್ರಭು ಟಿ. ಅಧ್ಯಕ್ಷತೆಯನ್ನು ವಹಿಸಿದ್ದರು.

ಅತಿಥಿಗಳಾಗಿ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್, ಬೆಳ್ತಂಗಡಿ ರೋಟರಿ ಕ್ಲಬ್ ನ ಕಾರ್ಯದರ್ಶಿ ರೋ| ಡಾ. ಎಂ.ಎಂ. ಭಾಗವಹಿಸಿದರು.

ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ, ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಉಜಿರೆ, ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ, ಎಸ್.ಡಿಎಂ ಸಿಬಿಎಸ್ ಸಿ ಉಜಿರೆ, ಎಸ್ ಡಿ ಎಂ ಅನುದಾನಿತ ಸೆಕೆಂಡರಿ ಶಾಲೆ ಉಜಿರೆ,
ಎಸ್ ಡಿ ಎಂ ಪ್ರೌಢ ಶಾಲೆ ಬೆಳಾಲು, ಬದನಾಜೆ ಸರಕಾರಿ ಪ್ರೌಢ ಶಾಲೆಯ ಇಂಟರಾಕ್ಟ್ ಕ್ಲಬ್ ನ ಪದಾಧಿಕಾರಿಗಳು ಕಳೆದ ಸಾಲಿನ ವರದಿಗಳನ್ನು ನೂತನ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ರೋಟಾರಿಯನ್, ಮೇಜರ್ ಎಂವಿ ಭಟ್, ರೋ| ಸಂದೇಶ್, ರೋ| ಸೋಮಶೇಖರ್, ಇಂಟರೆಕ್ಟ್ ಕಾರ್ಡಿನೇಟರ್ ಗಳು ಉಪಸ್ಥಿತರಿದ್ದರು.

ಅನಿತಾ ದಯಾಕರ್ & ಗೀತಾ ಪ್ರಭು ನಿರೂಪಿಸಿದರು.

Related posts

ಬೆಳ್ತಂಗಡಿ ಪಾರಸ್ ಪೃಥ್ವಿ ಜುವೆಲ್ಸ್ ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ” ಪೃಥ್ವಿ ಮಹಾಪರ್ವ”

Suddi Udaya

ಅಸಹಜವಾಗಿ ಸಾವನ್ನಪ್ಪಿದ ಬಾಲಕ ಸುಮಂತ್ ಮನೆಗೆ:ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಪದಾಧಿಕಾರಿಗಳು ಭೇಟಿ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ವತಿಯಿಂದ ಕೊಕ್ಕಡ ಶ್ರೀರಾಮ ಸೇವಾ ಮಂದಿರದ ನೂತನ ಪಾಕಶಾಲೆಗೆ ಧನಸಹಾಯ

Suddi Udaya

ಪಡ್ಡಂದಡ್ಕ ನೂರುಲ್ ಹುಧಾ ಕೇಂದ್ರ ಮಸೀದಿ ಖತೀಬ್ ಜನಾಬ್ ಅಶ್ರಫ್ ಫೈಝಿ ಅರ್ಕಾನರವರಿಗೆ ಪವಿತ್ರ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ

Suddi Udaya

ಬೆಳ್ತಂಗಡಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ , ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಬಂಟ್ವಾಳ ಬ್ರಾಂಚ್ ಮತ್ತು ಜೆಸಿಐ ಸೀನಿಯರ್ ಛೇಂಬರ್ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಆಚರಣೆ

Suddi Udaya

ನಾವರ: ಯುವಶಕ್ತಿ ನಾವರ ವತಿಯಿಂದ ಅಂಡರ್ ಆರ್ಮ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

Suddi Udaya
error: Content is protected !!