March 7, 2026
ಸಂಘ-ಸಂಸ್ಥೆಗಳು

ಬಿಎಮ್ಎಸ್ ನ 70ನೇ ವರ್ಷದ ಕಾಯಕ್ರಮ: ಡಾ.ಮೋಹನ್ ಜೀ ಭಾಗವತ್ ಅವರ ಸಮಾರೋಪ ಭಾಷಣ ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಪಿನಾಕೆ ಸಭಾಭವನದಲ್ಲಿ ನೇರಪ್ರಸಾರ ವೀಕ್ಷಣೆ

ಬೆಳ್ತಂಗಡಿ: ಭಾರತೀಯ ಮಜ್ದೂರು ಸಂಘದ ನೇತೃತ್ವದಲ್ಲಿ ಭಾರತೀಯ ಮಜ್ದೂರು ಸಂಘ ಬೆಳ್ತಂಗಡಿ ತಾಲೂಕು ಸಮಿತಿಯ ಸಹಭಾಗಿತ್ವದಲ್ಲಿ ಬಿಎಮ್ಎಸ್ ನ 70ನೇ ವರ್ಷದ ಕಾಯಕ್ರಮಗಳ ಸಮಾರೋಪ ಸಮಾರಂಭ ದೆಹಲಿಯಲ್ಲಿ ಜು.23 ರಂದು ನಡೆಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮ ಪೂಜ್ಯನೀಯ ಸರ ಸಂಘ ಚಾಲಕ ಡಾ ಮೋಹನ್ ಜೀ ಭಾಗವತ್ ಅವರ ಸಮಾರೋಪ ಭಾಷಣವನ್ನು ಬೆಳ್ತಂಗಡಿ ತಾಲೂಕಿನ ಅನೇಕ ಗಣ್ಯರ ಸಮ್ಮುಖದಲ್ಲಿ ಶ್ರೀ ಮಂಜುನಾಥೇಶ್ವರ ಪಿನಾಕೆ ಸಭಾಭವನ ಬೆಳ್ತಂಗಡಿಯಲ್ಲಿ ವೀಕ್ಷಿಸಲಾಯಿತು. ನೇರಪ್ರಸಾರ ಕಾಯಕ್ರಮದ ಅಧ್ಯಕ್ಷೆತೆಯನ್ನು ತಾಲೂಕು ಸಮಿತಿ ಅಧ್ಯಕ್ಷರಾದ ಉದಯ ಬಿ ಕೆ ವಹಿಸಿದ್ದರು ಮುಖ್ಯ ಅಥಿತಿಗಳಾಗಿ ಬಂದಿದ್ದ RSS ಇದರ ಪುತ್ತೂರು ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಪ್ರಕಾಶ್ ಪುರೋಹಿತ ರವರು ಮಾತಾನಾಡಿ ಸಂಘಕ್ಕೆ ರಾಷ್ಟ್ರ ಚಿಂತನೆಯ ಆದ್ಯತೆ, ರಾಷ್ಟ್ರವನ್ನು ಬಿಟ್ಟು ಸಂಘಟನೆ ಇಲ್ಲ ಭಾರತೀಯ ಮಜ್ದೂರು ಸಂಘದ ದ್ಯೇಯವೇ ಶ್ರಮ. ಶ್ರಮದ ಮುಖಾಂತರ ಇಡೀ ದೇಶವನ್ನು ಕಾಮಿಕರನ್ನು ಒಟ್ಟಗೂಡಿಸಿ ಸಂಘ ಮುನ್ನಡೆಯುತ್ತಿದೆ ಎಂದರು.

ಬಿ.ಎಮ್.ಎಸ್ ಇದರ ಜಿಲ್ಲಾದ್ಯಕ್ಷರಾದ ಅನಿಲ್ ಕುಮಾರ್ ಯು ಮಾತನಾಡಿ ಕಾರ್ಮಿಕ ವಲಯದಲ್ಲಿ ರಾಷ್ಟ್ರೀಯ ಚಿಂತನೆಯನ್ನು ತಂದು ಅವರನ್ನು ರಾಷ್ಟ್ರೀಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಕ್ಕೋಸ್ಕರ ನಮ್ಮ ಕಾರ್ಮಿಕ ಸಂಘಟನೆಯನ್ನು ಹಿರಿಯರು ಪ್ರಾರಂಭಿಸಿದರು. ಭಾರತೀಯ ಮಜ್ದೂರು ಸಂಘ ಯಾವುದೇ ರಾಜಕೀಯ ಪಕ್ಷದ ಅಡಿಯಾಲಾಗಿ ಕೆಲಸ ಮಾಡುವ ಸಂಘಟನೆ ಅಲ್ಲ, ಆದರೇ ರಾಷ್ಟ್ರೀಯ ಚಿಂತನೆ ಇರುವ ರಾಜಕೀಯ ಪಕ್ಷದ ಜೊತೆಗೆ ಸೇರಿಕೊಂಡು ಕಾರ್ಮಿಕರಿಗೆ ನ್ಯಾಯವನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿದೆ. ಕೆಂಪು ಬಾವುಟದ ಅಡಿಯಲ್ಲಿ ಸಹಸ್ರರಾರು ಕಾರ್ಮಿಕ ಬಂಧುಗಳು ಕೆಲಸ ಮಾಡುತ್ತಿದ್ದ ಸಮಯದಲ್ಲಿ ಆ ಕೆಂಪು ಬಾವುಟವನ್ನು ಕಾರ್ಮಿಕರು ತ್ಯಜಿಸಿ ನಮ್ಮ ಕೇಸರಿ ದ್ವಜವನ್ನು ಸ್ವೀಕರಿಸಿ, ಅದರ ಮೂಲಕ ಆ ಕಾರ್ಮಿಕರನ್ನು ರಾಷ್ಟ್ರ ಚಿಂತನೆಯ ಕಡೆ ಬರುವ ಕಾರ್ಯವನ್ನು ನಮ್ಮ ಸಂಘ ಕಳೆದ 70 ವರ್ಷಗಳಿಂದ ಮಾಡುತ್ತಾ ಬಂದಿದೆ. ನಮ್ಮ ಸಂಘಟನೆ ಹಿಂಸೆಯ ರೂಪದ ಹೋರಾಟ ಮಾಡದೇ ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡುತ್ತಾ ಕಾರ್ಮಿಕರಿಗೆ ನ್ಯಾಯವನ್ನು ಒದಗಿಸಿದೆ. ನಮ್ಮ ಸಂಘಟನೆಯಲ್ಲಿ ಬೆಳೆದ ಅನೇಕ ಜನರನ್ನು ಸಮಾಜದ ಬೇರೆ ಬೇರೆ ಕ್ಷೆತ್ರಕ್ಕೆ ಕೊಟ್ಟ ಸಂಘಟನೆ ನಮ್ಮ ಸಂಘಟನೆ. ನಮ್ಮ ಸಂಘಟನೆ ಕಾರ್ಮಿಕರಿಗೆ ಅನುಕೂಲವಾಗುವ ಅನೇಕ ಕಾರ್ಯಕ್ರಮಗಳನ್ನು ಕಳೆದ 70 ವರ್ಷಗಳಿಂದ ಮಾಡುತ್ತಾ ಬಂದಿದೆ ಇನ್ನು ಮುಂದೆಯೂ ಮಾಡುತ್ತದೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.

ವೇದಿಕೆಯಲ್ಲಿ ಬೆಳ್ತಂಗಡಿ RSS ಸಂಘ ಚಾಲಕರಾದ ಗಣೇಶ್ ಕಾಂತಾಜೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರನಾಥ್ ಉಜರೆ, ಆಟೋ ರಿಕ್ಷಾ ಯೂನಿಯನ್ ತಾಲೂಕು ಅಧ್ಯಕ್ಷ ಕೃಷ್ಣ ಬೆಳಾಲು, ರಬ್ಬರ್ ಟ್ಯಾಪರ ಮಜ್ದೂರು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಾರಾಜ ಪಿ ಉಪಸ್ತಿತಿರಿದ್ದರು .

ಈ ಕಾರ್ಯಕ್ರಮದಲ್ಲಿ ಸಂಘದ ಪ್ರಮುಖರಾದ ಲಕ್ಷಣದಾಸ್ ಚಿರನ್, ರಾಜರಾಮ್, ಶಿವಪ್ರಸಾದ್, ವಿಜಯ ಆರಳಿ. ಶ್ರೇಷ್ಠ ಪಡೀವಲ್, ಬಿಜೆಪಿ ಪ್ರಮುಖರಾದ ಶ್ರೀನಿವಾಸ ರಾವ್, ಜಯಾನಂದ ಗೌಡ ಗಣೇಶ್ ಗೌಡ, ಜಯಂತ್ ಗೌಡ, ವಿಜಯ ಗೌಡ ವೇಣೂರು ಸುಧಿರ್ ಸುವರ್ಣ, ಮಮತಾ ಶೆಟ್ಟಿ, ಗಣೇಶ್ ಲಾಯಿಲ, ಗಿರಿಶ್ ಡೋಂಗ್ರೆ , ಶರತ್ ಶೆಟ್ಟಿ, ಪ್ರಕಾಶ ಆಚಾರ್ಯ, ನೇಮಯ್ಯ ಕುಲಾಲ್, ಮಾದವ ಶಿರ್ಲಾಲ್, ಆನಂದ ಸಾಲ್ಯಾನ್, ಮೋಹನ್ ಅಂಡಿಜೆ ವಿ. ಹೆಚ್.ಪಿ ಯ ನವೀನ ನೆರಿಯ , ವಿಷ್ಣು ಮರಾಟೆ, ದಿನೇಶ್ ಚಾರ್ಮಾಡಿ, ಸಂತೋಷ ಅತ್ತಾಜೆ ನಿರಂಜನ ಕುಕ್ಕೆಡಿ, ರಕ್ಷಿತ ಸಾವ್ಯ ಪ್ರಭಾಕರ ಉಪ್ಪಡ್ಕ ಹಾಗೂ ಬೆಳ್ತಂಗಡಿ ತಾಲೂಕಿನ ಬಿ.ಎಮ್.ಎಸ್ ಸಂಘಟನೆಯ ಕಾರ್ಯಕರ್ತರು, ಕಾರ್ಮಿಕ ಬಂಧುಗಳು, ರಾಷ್ಟ್ರ ಚಿಂತನೆಯ ಸಂಘ ಪರಿವಾರದ ಸಂಘಟನೆಯ ಎಲ್ಲಾ ಹಿರಿಯರು ಪ್ರಮುಖರು ಬಾಗವಹಿಸಿದ್ದರು.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಜಿಲ್ಲಾ ಪ್ರಥಮ ಪ್ರಶಸ್ತಿ

Suddi Udaya

ರಾಜಕೇಸರಿ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಉಚಿತ ನೇತ್ರ ತಪಾಸಣೆ ಶಿಬಿರ

Suddi Udaya

ಇಂದಬೆಟ್ಟು ಗ್ರಾ.ಪಂ.ನಲ್ಲಿ ಆರೋಗ್ಯ ಕಾರ್ಯಪಡೆಯ ಸದಸ್ಯರಿಗೆ ತರಬೇತಿ ಕಾರ್ಯಾಗಾರ ಹಾಗೂ ಸ್ವಚ್ಛತಾ ಹಿ ಸೇವಾ ಆಂದೋಲನ

Suddi Udaya

ಬಳಂಜ ಶಿಕ್ಷಕರ ಸಹಕಾರಿ ಬ್ಯಾಂಕ್‌ನ ನಿವೃತ್ತ ಅಧಿಕಾರಿ ರವೀಂದ್ರ ಶೆಟ್ಟಿ ರವರಿಗೆ “ಚುಟುಕು ಚಿನ್ಮಯಿ” ಗೌರವ ಪ್ರಶಸ್ತಿ

Suddi Udaya

ನ.9: ಎಸ್.ಕೆ. ಗೋಲ್ಡ್‌ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ವಿಶ್ವಸೌಧ ಕಟ್ಟಡ ಉದ್ಘಾಟನೆ ಮತ್ತು ವಜ್ರಮಹೋತ್ಸವದ ಸಮಾರೋಪ ಸಮಾರಂಭ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಪ್ರಾಕೃತಿಕ ವಿಕೋಪದಿಂದ ಮನೆ ಬಿರುಕುಗೊಂಡ ಕುಟುಂಬಕ್ಕೆ ಸಹಾಯಧನ ಹಸ್ತಾಂತರ

Suddi Udaya
error: Content is protected !!