March 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್

ಎರಡು ತಿಂಗಳ ಹಿಂದೆ ಮದುವೆಯಾಗಿ ಹನಿಮೂನಿಗೆ ಬಂದ ದಂಪತಿಗಳುಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಪತಿ ಜೈಲುಪಾಲು

ಬೆಳ್ತಂಗಡಿ: ಎರಡು ತಿಂಗಳ ಹಿಂದೆ ಮದುವೆಯಾದ ದಂಪತಿಗಳು ಹನಿಮೂನ್ ಗೆ ಬಂದು ಉಜಿರೆಯ ಪ್ರತಿಷ್ಠಿತ ಹೊಟೇಲ್ ನಲ್ಲಿ ಉಳಿದುಕೊಂಡು ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಪತಿ ಜೈಲುಪಾಲಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಂಗಳೂರಿನ ದಕ್ಷಿಣದದ ರಾಮನಗರ ಜಿಲ್ಲೆಯ ಬಿಡದಿ ತಾಲೂಕಿನ ನಂದಗೋಕುಲ ನಿವಾಸಿಯಾಗಿರುವ ಸಿದ್ದರಾಜು ಗೌಡ ಮಗನಾದ ಮೂರನೇ ವರ್ಷದ ಕಾನೂನು ವಿದ್ಯಾರ್ಥಿಯಾಗಿರುವ ಪತಿ ವಿಶ್ವನಾಥ(24) ಮತ್ತು 22 ವರ್ಷದ ಪತ್ನಿ 22-05-2025 ರಂದು ಮದುವೆಯಾಗಿದ್ದು. ಜುಲೈ 22 ರಂದು ರಾತ್ರಿ ಬೆಳ್ತಂಗಡಿ ತಾಲೂಕಿನ ಉಜಿರೆಯ ಪ್ರತಿಷ್ಠಿತ ಹೊಟೇಲಿಗೆ ಬಂದು ರೂಂ ಪಡೆದು ತಂಗಿದ್ದರು.

ಹೊಟೇಲ್ ರೂಂ ನಲ್ಲಿ ಜುಲೈ 22 ರಂದು ರಾತ್ರಿಯೆ ಕುಡಿದ ಮತ್ತಿನಲ್ಲಿ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಪತಿಗೆ ವಿರುದ್ಧ 22 ವರ್ಷದ ಪತ್ನಿ ನೇರ ಬೆಳ್ತಂಗಡಿ ಪೊಲೀಸ್ ಠಾಣೆಗೆ ಜುಲೈ 23 ರಂದು ಸಂಜೆ ಬಂದು ಪತಿ ವಿಶ್ವನಾಥ ಎಂಬಾತನ ವಿರುದ್ಧ ದೂರು ನೀಡಿದ್ದಾಳೆ.ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪತಿ ವಿಶ್ವನಾಥ ವಿರುದ್ಧ BNS 109,115(1), 85 ,4DP (ಕೊಲೆಯತ್ನ, ಕೈಯಿಂದ ಹಲ್ಲೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಬೇಡಿಕೆ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಪತಿ ವಿಶ್ವನಾಥ್ (24) ನನ್ನು ಜುಲೈ 24 ರಂದು ಉಜಿರೆಯಲ್ಲಿ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ನೇತೃತ್ವದ ಸಿಬ್ಬಂದಿಗಳುಬಂಧಿಸಿ ಬೆಳ್ತಂಗಡಿ ಹೆಚ್ಚುವರಿ ವ್ಯವಹಾರಿಕ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್.ಕೆ ಮುಂದೆ ಹಾಜರುಪಡಿಸಿದ್ದು ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Related posts

ಮದ್ದಡ್ಕದಿಂದ ಪಲ್ಕೆ ಬಲ್ಕತ್ಯಾರು ಸಮೀಪ ಟ್ರಾನ್ಸ್‌ಫಾರ್ಮರಿಗೆ ಸುತ್ತುವರಿದ ಬಳ್ಳಿ, ಗಿಡ ಗಂಟಿಗಳು: ತೆರವಿಗೆ ಮೆಸ್ಕಾಂ ಇಲಾಖೆಗೆ ಗ್ರಾಮಸ್ಥರ ಒತ್ತಾಯ

Suddi Udaya

ತೋಟತ್ತಾಡಿ ನಿವಾಸಿ ಜಯರಾಮ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಆಡಳಿತ ವೈಫಲ್ಯ ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿದ ಸತ್ವಹೀನ ಬಜೆಟ್ : ಶಾಸಕ ಹರೀಶ್ ಪೂಂಜ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಿಂದ ದಿ. ಪಿ. ವೆಂಕಟರಮಣ ರವರಿಗೆ ನುಡಿನಮನ

Suddi Udaya

ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಸ್ಪೆಷಲ್ ಡಿಸ್ಕೌಂಟ್ ಸೇಲ್, ಸಾರಿ ಮೇಳ : ನೇರವಾಗಿ ಫ್ಯಾಕ್ಟರಿಯಿಂದ ಖರೀದಿ, ಗ್ರಾಹಕರಿಗೆ ಶೇ.20 ರಿಯಾಯಿತಿ ದರದಲ್ಲಿ ಮಾರಾಟ

Suddi Udaya
error: Content is protected !!