March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕುಂಭಶ್ರೀ ಪಿಯು ಕಾಲೇಜಿನಲ್ಲಿ ಸಿಎ ಓರಿಯಂಟೇಶನ್ 2K25 ವಿಶೇಷ ಕಾರ್ಯಾಗಾರ

ವೇಣೂರು: ಕುಂಭಶ್ರೀ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವತಿಯಿಂದ ಸಿಎ ಓರಿಯಂಟೇಶನ್ 2K25 ವಿಶೇಷ ಕಾರ್ಯಾಗಾರವನ್ನು 24 ಜುಲೈ 2025 ರಂದು ವಿಜೃಂಭಣೆಯಿಂದ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಕೊಕ್ರಾಡಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ , ಕರ್ನಾಟಕ ರಾಜ್ಯ ಹೈಸ್ಕೂಲ್ ಸಹ ಶಿಕ್ಷಕರ ಸಂಘ ಜಿಲ್ಲಾ ಅಧ್ಯಕ್ಷ ರಿಯಾಸ್ ರವರು ಉದ್ಘಾಟಿಸಿ ಮಾತನಾಡಿ “ಸಿಎ ವೃತ್ತಿ ಸಾಧನೆಗೆ ಪರಿಶ್ರಮ, ಸಮರ್ಪಣೆ ಹಾಗೂ ನಿಷ್ಠೆ ಮುಖ್ಯ. ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಶ್ರಮಿಸಬೇಕು” ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.

ವಿಶೇಷ ಅತಿಥಿಗಳಾಗಿ ಕಿರಣ್ ಆನಂತ್ರಾಯ್ ವಸಂತ್ (ಚಾರ್ಟರ್ಡ್ ಅಕೌಂಟೆಂಟ್) ತಮ್ಮ ವೃತ್ತಿಜೀವನದ ಅನುಭವ ಹಂಚಿಕೊಂಡು “ಅಕೌಂಟೆಂಟ್‌ಗಳು ಕೇವಲ ಸಂಖ್ಯೆಗಳ ಲೆಕ್ಕಾಚಾರ ಮಾಡುವವರಲ್ಲ; ಅವರು ಆರ್ಥಿಕ ಕಥೆಗಾರರು. ಪ್ರಾಮಾಣಿಕತೆ, ಪರಿಶ್ರಮ ಹಾಗೂ ಸಮಯ ನಿರ್ವಹಣೆ ಈ ವೃತ್ತಿಯ ಆಧಾರಸ್ತಂಭಗಳು” ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಕುಮಾರಿ ದೀಪಿಕಾ ವಸಾನಿ (ಚಾರ್ಟರ್ಡ್ ಅಕೌಂಟೆಂಟ್) , ಕುಂಭಶ್ರೀ ವಿದ್ಯಾ ಸಂಸ್ಥೆ ಸಂಸ್ಥಾಪಕ ಗಿರೀಶ್ ಕೆ.ಹೆಚ್., ಪ್ರಾಂಶುಪಾಲೆ ಶ್ರೀಮತಿ ಓಮನಾ ಎಂ.ಎ. ಹಾಗೂ ಸಂಚಾಲಕ ಲೆಫ್ಟಿನೆಂಟ್ ಅಶ್ವಿತ್ ಕುಲಾಲ್ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶಗಳನ್ನು ನೀಡಿದರು.


ಜೀವಶಾಸ್ತ್ರ ಉಪನ್ಯಾಸಕ ಮನೋಜ್ ಅವರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಾಗಾರದ ವೇಳೆ ವಿದ್ಯಾರ್ಥಿಗಳಿಗೆ ಸಿಎ ಕೋರ್ಸ್‌ನ ಹಂತಗಳು, ಓದು ವಿಧಾನ, ಪರೀಕ್ಷಾ ತಯಾರಿ ಹಾಗೂ ವೃತ್ತಿ ಅವಕಾಶಗಳ ಕುರಿತು ಸಂಪೂರ್ಣ ವಿವರಗಳನ್ನು ನೀಡಲಾಯಿತು.

ಉಪನ್ಯಾಸಕಿ ಲಿಖಿತಾ ಎಂ. ಸ್ವಾಗತಿಸಿದರು. ಗಣಕವಿಜ್ಞಾನ ಉಪನ್ಯಾಸಕ ಅಭಿಲಾಷ್ ಕಾಮತ್ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶರಣ್ಯ ಕೆ.ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮಕ್ಕೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Related posts

ಫ್ರೆಂಡ್ಸ್ ಬದ್ಯಾರು ತಂಡ ಸದಸ್ಯರಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರಾಜೇಶ್ ರವರಿಗೆ ಧನಸಹಾಯ

Suddi Udaya

ಇಂದು(ಜ.11) ಪೆರ್ಲ -ಬೈಪಾಡಿ ಬ್ರಹ್ಮಕಲಶೋತ್ಸವಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ

Suddi Udaya

ಅರಸಿನಮಕ್ಕಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ

Suddi Udaya

ನೀತಿ ಸಂಹಿತೆ ಜಾರಿ: ಬೆಳ್ತಂಗಡಿ ಶ್ರಮಿಕ ಶಾಸಕರ ಕಚೇರಿಯ ಕಾರ್ಯಚರಣೆ ಸ್ಥಗಿತ

Suddi Udaya

ಉಜಿರೆ: ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇ.ಸಿ. ವಿಭಾಗದಿಂದ ಸರ್ಕ್ಯೂಟ್ ಎಕ್ಸ್ ಪೋ 2024

Suddi Udaya

ಮರೋಡಿ: ಉಚ್ಚೂರು ಮನೆತನದ ಹಿರಿಯರಾದ ಗೋಪು ಪೂಜಾರಿ ನಿಧನ

Suddi Udaya
error: Content is protected !!