March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ಹೊಸ ವಾಹನ , ಅತ್ಯಾಧುನಿಕ ವ್ಯವಸ್ಥೆ ಒಳಗೊಂಡ ವಾಹನ ಆಪತ್ತಿನ ಸೇವೆಗೆ ಸಜ್ಜಾಗಿದೆ

ಬೆಳ್ತಂಗಡಿ : ರಾಜ್ಯದ ನಾನಾ ಕಡೆ ಅಗ್ನಿಶಾಮಕ ವಾಹನಗಳ ಕೊರತೆ ಎದುರಾಗಿದ್ದು ಇದೀಗ ರಾಜ್ಯದಲ್ಲಿ ಮೊದಲ ಹಂತದಲ್ಲಿ ಸಿದ್ಧಗೊಂಡ 10 ವಾಹನಗಳ ಪೈಕಿ ಬೆಳ್ತಂಗಡಿ ತಾಲೂಕಿಗೆ ಅಗ್ನಿಶಾಮಕ ನೂತನ ವಾಹನ ಸೇರ್ಪಡೆಯಾಗಿದೆ.

ಬೆಳ್ತಂಗಡಿ ಅಗ್ನಿಶಾಮಕ ಠಾಣೆಯಲ್ಲಿ ಎರಡು ವಾಹನಗಳಿದ್ದವು. ಒಂದು ವಾಹನ ಒಂದೂವರೆ ವರ್ಷದ ಹಿಂದೆ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಫಿಟ್ ನೆಸ್ ಪ್ರಮಾಣ ಪತ್ರ ಸಿಗದೆ ಕಾರ್ಯಾಚರಣೆಯಿಂದ ಹಿಂದೆ ಸರಿದಿತ್ತು. ಬಳಿಕ ಒಂದೇ ವಾಹನ ಲಭ್ಯವಿದ್ದರೂ 2025 ಮಾ.2 ರಂದು 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅದೂ ರಸ್ತೆಗೆ ಇಳಿಯದಂತಾಗಿತ್ತು. ಇದರಿಂದ ತಾಲೂಕಿನ ತರಿಸುವ ಅನಿವಾರ್ಯತೆ ಎದುರಾಗಿತ್ತು.

ಅದರಂತೆ ಒಂದು ವರ್ಷಗಳ ಹಿಂದೆಯೇ ವಾಹನ ಅಗತ್ಯತೆ ಕುರಿತು ಸರಕಾರಕ್ಕೆ ಬರೆಯಲಾಗಿತ್ತು. ಇದಾದ ಬಳಿಕ ಶಾಸಕ ಹರೀಶ್ ಪೂಂಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಸತತ ಪ್ರಯತ್ನದ ನಡುವೆ ಬೆಳ್ತಂಗಡಿಗೆ ಕಡೆಗೂ ಅಗ್ನಿಶಾಮಕ ವಾಹನ ಕಳೆದ ಎರಡು ದಿನಗಳ ಹಿಂದೆ ಬೆಂಗಳೂರು ಅಗ್ನಿಶಾಮಕ ಕಾರ್ಯಾಗಾರದಿಂದ ತಂದಿದ್ದು ಜು.30 ರಿಂದ ತಾಲೂಕಿನ ಜನರ ಆಪತ್ತಿನ ಸೇವೆಗೆ ಸಜ್ಜಾಗಿ ನಿಂತಿದೆ.

ನೂತನ ವಾಹನವು 200 ಎಚ್.ಪಿ ಸಾಮರ್ಥ್ಯದ ವಾಹನ ಇದಾಗಿದ್ದು 6000 ಲೀಟರ್ ನೀರನ್ನು ತುಂಬುವ ಟ್ಯಾಂಕ್ ಹೊಂದಿದೆ. ಹಿಂದಿನ ವಾಹನ 4500 ಲೀಟರ್ ನೀರಿನ ಟ್ಯಾಂಕ್ ಹೊಂದಿತ್ತು. ಅಶೋಕ್ ಲೇಲ್ಯಾಂಡ್ ಚಾಸಿ ಮತ್ತು ಎಂಜಿನ್ ನ್ನು ವಾಹನಕ್ಕೆ ಹರಿಹಾಣದಲ್ಲಿ ಬಾಡಿ ಕೂರಿಸಲಾಗಿದೆ. ಹಿಂದಿಗಿಂತ ಚಾಸಿ ಉದ್ದವಾಗಿದ್ದು, ಹಳ್ಳಿ ಪ್ರದೇಶದ ಒಳ ರಸ್ತೆಗಳಿಗೆ ಸಾಗಲು ಹಿಂದಿಗಿಂತ ಕೊಂಚ ಸವಾಲಾಗಲಿದೆ. ಲಾರಿಯ ಮೇಲ್ಭಾಗದಲ್ಲಿ 360 ಡಿಗ್ರಿ ಸುತ್ತುವರಿದು ನೀರು ಸ್ಪ್ರೇ ಮಾಡುವಂತ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದರಿಂದ ವಿಮಾನ, ಹೆಲಿಕಾಪ್ಟರ್ ಪಥನ ವಾದಂತ ಸಂದರ್ಭ ಅಥವಾ ಬಹುಮಹಡಿ ಕಟ್ಟಡಗಳಲ್ಲಿ ಬೆಂಕಿ ಆವರಿಸಿದರೆ ನಂದಿಸುವ ಸಾಮರ್ಥ್ಯ ಇದರಲ್ಲಿದೆ.

ಹಿಂದಿನ 4500 ಟ್ಯಾಂಕ್ 5 ನಿಮಚದಲ್ಲಿ ಭರ್ತಿಯಾಗುವ ಸಾಮರ್ಥ್ಯ ಇದ್ದರೆ, ಈಗಿನ 6000 ಟ್ಯಾಂಕ್ 8 ನಿಮಿಷದಲ್ಲಿ ಭರ್ತಿಯಾಗುವಂತ ಸಾಮರ್ಥ್ಯವಿದೆ. ಜತೆಗೆ ಹಿಂದೆ ಪಂಪ್ ಮೂಲಕ ನೀರನ್ನು ಲಿಫ್ಟ್ ಮಾಡಬೇಕಿತ್ತು, ಆದರೆ ಈಗ ನೇರವಾಗಿ ಅಗ್ನಿಶಾಮಕ ವಾಹನದ ಟ್ಯಾಂಕ್ ಗೆ ಕೆರೆ, ಬಾವಿ, ನದಿಯಿಂದ ಲಿಫ್ಟ್ ಮಾಡುವ ವ್ಯವಸ್ಥೆಯೂ ಇದೆ. 6 ಸಾವಿರ ಟ್ಯಾಂಕ್ ಕೇವಲ 25 ರಿಂದ 30 ನಿಮಷದಲ್ಲಿ ತುಂಬುವ ಉನ್ನತ ಮಟ್ಟದ ತಂತ್ರಜ್ಞಾನ ಅಳವಡಿಸಲಾಗಿದೆ. ಜತೆಗೆ ಹೊಸ ಇಂದನ ಪರಿಸರ ಸ್ನೇಹಿಯಾಗಿದ್ದು ಆ್ಯಡ್ ಬ್ಲೂ ಆಯಿಲ್ ಬಳಸಿ ಕಡಿಮೆ ಮಾಲಿನ್ಯ (ಕಾರ್ಬನ್ ಡೈಆಕ್ಸೈಡ್) ಹೊರಬಿಡಲು ಸಹಕರಿಸಲಿದೆ. ಅಧಿಕ ಒತ್ತಡದಲ್ಲಿ ನೀರನ್ನು ಹಾಯಿಸಿದಲ್ಲಿ 6 ಸಾವಿರ ಲೀಟರ್ 8 ನಿಮಿಷದಲ್ಲಿ ಕಾಲಿಯಾಗುವ ತಂತ್ರಜ್ಞಾನ ಹೊಂದಿದೆ.

ಬೆಂಕಿ ನಂದಿಸಲು ನೀರಿನ ಜತೆಗೆ ನೊರೆ ದ್ರಾವಣ ಬಳಸುವುದರಿಂದ ಬೆಂಕಿ ಬೇಗ ನಂದಿಸಬಹುದು. ಹಾಗಾಗಿ ಇದನ್ನು ನೀರಿ‌ಲ್ಲಿ ಬೆರೆಸಿ ನೊರೆ ದ್ರಾವಣವನ್ನು ನಿಮಿಷಕ್ಕೆ 2270 ಲೀಟರ್ ಹೊರಬಿಡುವ ಸಾಮರ್ಥ್ಯ ಈ‌ ಹೊಸ ವಾಹನದ ವಿಶೇಷವಾಗಿದೆ. ಈ ಮೂಲಕ ಬೆಳ್ತಂಗಡಿ ತಾಲೂಕಲ್ಲದೆ ಮಾತ್ರವಲ್ಲದೆ, ಅಗತ್ಯಬಿದ್ದಲ್ಲಿ ಪುತ್ತೂರು, ಕಾರ್ಕಳ, ಬಂಟ್ವಾಳ, ಮೂಡುಬಿದ್ರೆ ತಾಲೂಕುಗಳಿಗೂ ಇದನ್ನು ಬಳಸಿಕೊಳ್ಳಬಹುದಾಗಿದೆ.

ಬೆಳ್ತಂಗಡಿ ಅಗ್ನಿಶಾಮಕ ದಳಕ್ಕೆ ವಾಹನವೇ ಇಲ್ಲ ಎಂದು ಸುದ್ದಿ ಉದಯ ವಾರ ಪತ್ರಿಕೆ ವರದಿ ಪ್ರಕಟಿಸಿ ಬೆಳಕು ಚೆಲ್ಲಿತ್ತು.

✍🏻ವರದಿ : ಮನೀಶ್

Related posts

ಜ.7 : ಧರ್ಮಸ್ಥಳದಲ್ಲಿ ನೂತನ ಸಂಕೀರ್ಣ ಶ್ರೀ ಸಾನ್ನಿಧ್ಯ ಉದ್ಘಾಟನೆ ಹಾಗೂ ಜ್ಞಾನ ದೀಪ ಕಾರ್ಯಕ್ರಮ

Suddi Udaya

ಕೊಯ್ಯೂರು ಸ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಸಂಘ ರಚನೆ

Suddi Udaya

ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ: ಮಿತ್ತಬಾಗಿಲು ನಿವಾಸಿ ಕಬೀರ್ ಬಂಧನ

Suddi Udaya

ಸುಳ್ಳೋಡಿ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯೋತ್ಸವ

Suddi Udaya

ಗುರುವಾಯನಕೆರೆ ಶ್ರೀ ಕ್ಷೇತ್ರಮಂಚಕಲ್ಲಿನಲ್ಲಿ ದೈವಗಳಿಗೆ ಪರ್ವ ಸೇವೆ

Suddi Udaya

ಜೂ.27 : ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ಹಾಗೂ ತೋಟದ ಸಮಗ್ರ ನಿರ್ವಹಣೆ ಕುರಿತು ಸಾಂಸ್ಥಿಕ ತರಬೇತಿ

Suddi Udaya
error: Content is protected !!