September 6, 2026
Uncategorized

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿದ ಪ್ರಕರಣ ಮತ್ತೆ 9 ಮಂದಿ ಪೊಲೀಸರು SIT ಗೆ ನೇಮಕ

ಧರ್ಮಸ್ಥಳ: ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧಿಸಿದಂತೆ ಎಸ್.ಐ.ಟಿಯ ಮೂವರು ಉನ್ನತ ಅಧಿಕಾರಿಗಳು ನೇಮಕ ಮಾಡಿದ ಬಳಿಕ 20 ಮಂದಿ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.‌ ಇದೀಗ ಮತ್ತೆ 9 ಮಂದಿ ಪೊಲೀಸರನ್ನು ನೇಮಕಗೊಳಿಸಿ ಆದೇಶ ಮಾಡಲಾಗಿದೆ.

ಉಪ್ಪಿನಂಗಡಿ ಪೊಲೀಸ್ ಠಾಣೆಯ ಪಿಎಸ್ಐ ಲಾರೆನ್ಸ್, ಸೆನ್ ಪೊಲೀಸ್‌ ಠಾಣೆಯ ಹೆಚ್.ಸಿ ಪುನೀತ್, ಉಪ್ಪಿನಂಗಡಿ ಪೊಲೀಸ್ ಠಾಣೆಯ ಹೆಚ್.ಸಿ ಮನೋಹರ, ವಿಟ್ಲ ಪೊಲೀಸ್ ಠಾಣೆಯ ಪಿ.ಸಿ ಮನೋಜ್, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿ.ಸಿ ಸಂದೀಪ್, ಉಡುಪಿ ಸಿ.ಎಸ್.ಪಿ ಪೊಲೀಸ್ ಠಾಣೆಯ ಪಿ.ಸಿ ಲೋಕೇಶ್, ಹೊನ್ನಾವರ ಪೊಲೀಸ್ ಠಾಣೆಯ ಹೆಚ್.ಸಿ ಸತೀಶ್ ನಾಯ್ಕ, ಮಂಗಳೂರು ಎಫ್.ಎಮ್.ಎಸ್ ದಳದ ಹೆಚ್.ಸಿ ಜಯರಾಮೇಗೌಡ ಮತ್ತು ಹೆಚ್.ಸಿ ಬಾಲಕೃಷ್ಣ ಗೌಡ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಎಸ್.ಐ.ಟಿ ಸಂಸ್ಥೆಗೆ ವರದಿ ಮಾಡಿಕೊಳ್ಳಲು ಡಿಜಿ&ಐಜಿಪಿ ಡಾ.ಎಂ.ಎ ಸಲೀಂ ಜು.30 ರಂದು ಆದೇಶ ಹೊರಡಿಸಿದ್ದಾರೆ.

Related posts

ಸೇವಾನಿಕೇತನಕ್ಕೆ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಭೇಟಿ

Suddi Udaya

ಯಕ್ಷದ್ರುವ ಪಟ್ಲ ಫೌಂಡೇಶನ್ ಮಂಗಳೂರು ಬೆಳ್ತಂಗಡಿ ಘಟಕದ ಸಹಯೋಗದಲ್ಲಿ ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಅಭಿಯಾನ ಉದ್ಘಾಟನೆ

Suddi Udaya

ಕೃಷಿಕ ಶೀನಪ್ಪ ಗೌಡ ಪಣಿಕ್ಕಲ್ ನಿಧನ

Suddi Udaya

ಕನ್ಯಾಡಿ: ಬೈಕ್ – ಬಸ್ಸು ನಡುವೆ ಅಪಘಾತ: ಬೈಕ್ ಸವಾರ ಗಂಭೀರ ಗಾಯ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ದಿ . ಸುಭಾಶ್ಚಂದ್ರ ಸುರ್ಯಗುತ್ತು ಇವರ ಸ್ಮರಣಾರ್ಥ ಪುಸ್ತಕ ವಿತರಣೆ

Suddi Udaya
error: Content is protected !!