September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಚ್ಚಿನದಲ್ಲಿ 1250 ಬಿದಿರು ಗಿಡ ವಿತರಣಾ ಕಾರ್ಯಕ್ರಮ

ಮಚ್ಚಿನ: ಬ್ಯಾಂಬೂ ಸೊಸೈಟಿ ಆಪ್ ಇಂಡಿಯಾ ಬಿದಿರು ಗ್ರಾಮಗಳ ಕ್ಲಸ್ಟರ್ ಯೋಜನೆ ಹಾಗೂ ಬೆಳ್ತಂಗಡಿ ರಬ್ಬರ್ ಸೊಸೈಟಿ ಹಾಗೂ ಶ್ರೀ ಕ್ಷೇ ಧ. ಗ್ರಾ. ಯೋ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ಸಹಕಾರದೊಂದಿಗೆ 1250 ಬಿದಿರು ಗಿಡ ವಿತರಣೆ ಕಾರ್ಯಕ್ರಮ ನಡೆಯಿತು.

ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಹರ್ಷ ಸಂಪಿಗೆತ್ತಾಯ, ದೇವಸ್ಥಾನ ಗುಮಾಸ್ತ ಬಾಲಕೃಷ್ಣ ಭಟ್ ಹಾಗೂ ಸುಧೀರ್ ಕುಮಾರ್ ಶೆಟ್ಟಿ (ಕೋರ ಬಿಟ್ಟು ಮನೆ) ಅವರಿಗೆ ಬಿದಿರು ಗಿಡವನ್ನು ಕೃಷಿ ವಿಭಾಗದ ಯೋಜನಾಧಿಕಾರಿ ಬಾಲಕೃಷ್ಣ ರವರು ವಿತರಣೆ ಮಾಡಿದರು.

ಬಿದಿರು ಬ್ಯಾಂಬೂ ಸೊಸೈಟಿಯ ಮೇಲ್ವಿಚಾರಕ ಕುಮಾರನಾಥ್ ಬಿದಿರು ಕೃಷಿ ಬಗ್ಗೆ ಮಾತನಾಡಿ ಬಿದಿರು ವೇಗವಾಗಿ ಬೆಳೆಯುವ ಕೃಷಿಯಾಗಿದೆ ಬಿದಿರಿನ ಬಹುಮುಖ ಉಪಯೋಗಗಳು ನಿರ್ಮಾಣ ಕಟ್ಟಡದ ಒಳಾಂಗಣ ಅಲಂಕಾರಕ್ಕಾಗಿ, ಪೀಠೋಪಕರಣಗಳ ತಯಾರಿಕೆಗಾಗಿ ಅಗರಬತ್ತಿ ತಯಾರಿಕೆಗೆ ಕಾಗದ ತಯಾರಿಕೆಗೆ ಅತಿ ಹೆಚ್ಚು ಉಪಯೋಗವಾಗುತ್ತದೆ ಬಿದಿರು ಗಿಡ ನಾಟಿ ಮಾಡುವ ವಿಧಾನ ಬಳಸಬೇಕಾದ ಗೊಬ್ಬರದ ಬಗ್ಗೆ ಮಾಹಿತಿಯನ್ನು ನೀಡಲಾಯಿತು

ಕಾರ್ಯಕ್ರಮದಲ್ಲಿ ಮಡಂತ್ಯಾರ್ ವಲಯದ ಮೇಲ್ವಿಚಾರಕ ಕೇಶವ ನಾಯ್ಕ, ಒಕ್ಕೂಟದ ಅಧ್ಯಕ್ಷವಿಜಯ್ ಮಡಕ್ಕಿಲ, ಮಚ್ಚಿನ ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಸುಧಾ, ಕೃಷಿ ಮೇಲ್ವಿಚಾರಕ ಕೃಷ್ಣ, ಮಚ್ಚಿನ ಸೇವಾ ಪ್ರತಿನಿಧಿ ಪರಮೇಶ್ವರ, ಕುದ್ರಡ್ಕ ಸೇವಾ ಪ್ರತಿನಿಧಿ ಶ್ರೀಮತಿ ನಂದಿನಿ, ಶೌರ್ಯ ಘಟಕದ ಪ್ರತಿನಿಧಿ ಪ್ರಭಾಕರ ಉಪಸ್ಥಿತರಿದ್ದರು.

Related posts

ಬೆಳಾಲು: ಎರಡು ಗುಂಪುಗಳ ನಡುವೆ ಗಲಾಟೆ: ಪರಸ್ಪರ ಆರೋಪ ಹೊರಿಸಿ ಪೊಲೀಸರಿಗೆ ದೂರು

Suddi Udaya

ಕಡಿತಗೊಂಡಿದ್ದ ಅಂಬಡಬೆಟ್ಟು ತಾತ್ಕಾಲಿಕ ರಸ್ತೆಗೆ ಶಾಸಕ ಹರೀಶ್ ಪೂಂಜರ ಸ್ಪಂದನೆ

Suddi Udaya

ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದಿಂದ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ

Suddi Udaya

ಬೆಳ್ತಂಗಡಿ ಕೋಟಕ್ ಲೈಫ್ 3 ನೇ ವರ್ಷದ ಪಾದರ್ಪಣೆಯ ಸಂಭ್ರಮಾಚರಣೆ

Suddi Udaya

ತ್ಯಾಜ್ಯಗಳ ಡಂಪಿಂಗ್ ಯಾರ್ಡ್ ಆಗುತ್ತಿರುವ ಕೈಕಂಬ ಸೇತುವೆ…!!!

Suddi Udaya

ಮುಂಡಾಜೆ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಮಾದಕ ವ್ಯಸನ ಮುಕ್ತ ಹಾಗೂ ಆರೋಗ್ಯ ನೈರ್ಮಲ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!