ಮುಂಡೂರು : ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ, ಅಕ್ಷಯ ಬಂಟರ ಗ್ರಾಮ ಸಮಿತಿ , ಮುಂಡೂರು ಇದರ ವತಿಯಿಂದ ಆಟಿದ ನೆನಪು ಕಾರ್ಯಕ್ರಮವು ಕಲ್ಲಂಡ ಶ್ರೀಮತಿ ಪುಷ್ಪ ವಸಂತ ಶೆಟ್ಟಿಯವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ನಿರ್ದೇಶಕ ನಾರಾಯಣ ಶೆಟ್ಟಿ ಯವರು ದೀಪ ಬೆಳಗಿಸಿ, ಚೆನ್ನೆ ಮಣೆ ಆಡುವುದರೊಂದಿಗೆ ಉದ್ಘಾಟಿಸಿ, ಕಳೆದ 19 ವರ್ಷಗಳಿಂದ ಕೇವಲ 16 ಬಂಟ ಸಮುದಾಯ ಮನೆ ಹೊಂದಿರುವ ಈ ಕಾರ್ಯಕ್ರಮ ಮಾಡಿರುವುದು ಬಹಳ ವಿಶೇಷವಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು, ಅಕ್ಷಯ ಬಂಟರ ಸಂಘದ ಅಧ್ಯಕ್ಷ ಕೇಶವ ಶೆಟ್ಟಿ ವಹಿಸಿದ್ದರು. ಅಕ್ಷಯ ಬಂಟರ ಸಂಘದ ಮಾಜಿ ಅಧ್ಯಕ್ಷ ಸೀತರಾಮ ಶೆಟ್ಟಿ ಮಾತನಾಡುತ್ತ, ಹಿಂದಿನ ಕಾಲದಲ್ಲಿ, ಸೊಪ್ಪು , ತರಕಾರಿ, ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದೆವು, ಇಂದಿನ ಮಕ್ಕಳು ಇದನ್ನು ಸದ್ಭಳಕೆ ಮಾಡಿದಲ್ಲಿ, ಆರೋಗ್ಯಕರವಾದ ಜೀವನ ನಡೆಸಲು ಸಾಧ‍್ಯ ಎಂದರು,
ವೇದಿಕೆಯಲ್ಲಿ, ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಸದಸ್ಯರಾದ ಶ್ರೀಮತಿ ಪುಷ್ಪ ಶೆಟ್ಟಿ, ಕೋಶಾಧಿಕಾರಿ ಸುಧಾಮಣಿ ಉಪಸ್ಥಿತರಿದ್ದರು. ಸುಮಾರು 30 ವಿಧದ , ಎಲ್ಲಾ ಮನೆಗಳಿಂದ ತಂದ ಹಳೇಯ ಕಾಲದಲ್ಲಿ ಬಳಕೆ ಮಾಡುತ್ತಿದ್ದ, ಆಹಾರ ವಸ್ತುಗಳ ಪ್ರದರ್ಶಿಸಲಾಯಿತು. ಶ್ರೀಮತಿ ಸುಷ್ಮಾ, ಹಾಗೂ, ಶ್ರೀಮತಿ ದೀಪ್ತಿ ಪ್ರಾರ್ಥಿಸಿದರು., ಕು. ವೀಕ್ಷಾರವರು ಆಟಿಯ ಹಿನ್ನಲೆಯನ್ನು ತಿಳಿಸಿದರು. ಶ್ರೀಮತಿ ವಿದ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.











