September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅಳದಂಗಡಿ ಆಮಂತ್ರಣ ಪ್ರತಿಷ್ಠಾನ ಹಾಗೂ ಲಯನ್ಸ್ ಕ್ಲಬ್ ಬೆಳ್ತಂಗಡಿ ಸಹಯೋಗದೊಂದಿಗೆ ತುಳು ಸಿಂಗಾರ ಚೆನ್ನೆಮಣೆ ಸ್ಪರ್ಧೆ

ಅಳದಂಗಡಿ : ಆಮಂತ್ರಣ ಸೇವಾ ಪ್ರತಿಷ್ಠಾನ ರಿ.ಅಳದಂಗಡಿ ಸಾರಥ್ಯದಲ್ಲಿ, ಲಯನ್ಸ್ ಕ್ಲಬ್ ಬೆಳ್ತಂಗಡಿ ಸಹಯೋಗದೊಂದಿಗೆ ತುಳುನಾಡು ಒಕ್ಕೂಟ ಬೋಳ್ತೇರ್, ಲಯನ್ಸ್ ಕ್ಲಬ್ ಸುಲ್ಕೇರಿ, ಶಿವನಾಗ ಫ್ರೆಂಡ್ಸ್ ಕುದ್ಯಾಡಿ, ಸದ್ಧರ್ಮ ಯುವಕ ಮಂಡಲ ಕುದ್ಯಾಡಿ ಮತ್ತು ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಬಳಂಜ ಇವರ ಸಹಕಾರದಲ್ಲಿ ತುಳು ಸಿಂಗಾರ ಮತ್ತು ಚೆನ್ನೆಮಣೆ ಸ್ಪರ್ಧೆ ಆ. 3 ರಂದು ಅಳದಂಗಡಿ ಕೆದ್ದು ದೀಪಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ತುಳು ಸಂಪ್ರದಾಯದಂತೆ ವಿಶೇಷವಾಗಿ ಅಳದಂಗಡಿ ಶ್ರೀ ಕ್ಲಿನಿಕ್ ನ ವೈದ್ಯರಾದ ಡಾ.ಎನ್.ಎಂ.ತುಳುಪುಳೆ ನೆರವೇರಿಸಿದರು.
ಚೆನ್ನೆಮಣೆ ಸ್ಪರ್ಧೆಯ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಮುರಳಿ ಬಲಿಪ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಆಮಂತ್ರಣ ಸೇವಾ ಪ್ರತಿಷ್ಠಾನ ಗೌರವಾಧ್ಯಕ್ಷ ಶಿವಪ್ರಸಾದ್ ಅಜಿಲರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತುಳುನಾಡು ಒಕ್ಕೂಟದ ಸ್ಥಾಪಕಾಧ್ಯಕ್ಷರಾದ ಶೈಲೇಶ್ ಆರ್.ಜೆ, ಅಳದಂಗಡಿ ಗ್ರಾ.ಪಂ.ಅಧ್ಯಕ್ಷರಾದ ಸರಸ್ವತಿ, ಉಜಿರೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪಿ.ಹೆಚ್.ಪ್ರಕಾಶ್ ಶೆಟ್ಟಿ ನೊಚ್ಚ, ಅಳದಂಗಡಿ ಪ್ರಾ.ಕೃ.ಪತ್ತಿನ ಅಧ್ಯಕ್ಷ ರಾಕೇಶ್ ಹೆಗ್ಡೆ, ಉದ್ಯಮಿಗಳಾದ ಲ|ನಿತ್ಯಾನಂದ ಎನ್ ಯೋಗಕ್ಷೇಮ ನಾವರ, ಕರಂಬಾರು ಗುತ್ತು ಪ್ರಸನ್ನ ಹೆಗ್ಡೆ, ಅಳದಂಗಡಿ ವಲಯ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಮೇಲ್ವೀಚಾರಕಿ ಯಶೋಧ, ತುಳು ಸಂಧಿ ಪಾಡ್ದನ ಪರಿಣಿತರಾದ ಕರ್ಗಿ ಯಾನೆ ಶಾರದ ಶೆಟ್ಟಿ ಅಳದಂಗಡಿ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ವೀರೇಂದ್ರ ಕುಮಾರ್ ಜೈನ್ ನಾವರ, ಸುಲ್ಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ|ಪ್ರಶಾಂತ್ ಶೆಟ್ಟಿ ಬೊಳ್ಳಿಮಾರ್, ಉಪಸ್ಥಿತರಿದ್ದರು.


ನಿವೃತ್ತಿ ಹೊಂದಿದ ಶಿಕ್ಷಕಿ ಸರೋಜ ಇವರಿಗೆ ಸನ್ಮಾನ:
ಬಡಗಕಾರಂದೂರು ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ಹನ್ನೊಂದು ವರ್ಷಗಳ ಕಾಲ ಸೇವೆ ಹಾಗೂ ವೃತ್ತಿ ಜೀವನದ ಶಿಕ್ಷಕರ ನಿವೃತ್ತಿಗೆ ಆಮಂತ್ರಣ ಪ್ರತಿಷ್ಠಾನದ ವತಿಯಿಂದ ಗೌರವ ಸನ್ಮಾನ ನೆರವೇರಿಸಲಾಯಿತು.
ಅದೇ ರೀತಿ ಅಳದಂಗಡಿ ಪರಿಸರದಲ್ಲಿ ಕಲಾ ಸರಸ್ವತಿ ನಾಟ್ಯ ಕೇಂದ್ರವನ್ನು ಪ್ರಾರಂಭಿಸಿ ಹಲವಾರು ಮಕ್ಕಳಿಗೆ ನೃತ್ಯಕಲಿಸಿದ ಗುರುಗಳಾದ ಆತ್ಮ ಕಮಲೇಶ್ ಇವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತುಳು ಒಕ್ಕೂಟ ತಾಲೂಕು ಅಧ್ಯಕ್ಷ ರಾಜೇಶ್ ಕುಲಾಲ್ ಬೈರೊಟ್ಟು, ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಹರೀಶ್ ವೈ.ಚಂದ್ರಮ, ಮಾಜಿ ಗ್ರಾ.ಪಂ.ಅಧ್ಯಕ್ಷೆ ಹರಿಣಾಕ್ಷಿ.ಕೆ.ಶೆಟ್ಟಿ, ಬಂಟ್ವಾಳ ಆಮಂತ್ರಣ ವೇದಿಕೆ ಅಧ್ಯಕ್ಷೆ ರಶ್ಮಿತಾ ಸುರೇಶ್ ಜೋಗಿಬೆಟ್ಟು, ಶಿಕ್ಷಕಿ ಸರ್ವಾಣಿ, ಐಸಿರಿ ಆರ್ಟ್ಸ್ ದರ್ಶನ್ ಶೆಟ್ಟಿ, ಶಿವಕುಲಾಲ್, ವಿಕಾಸ್ ಜೈನ್,ಯಕ್ಷಗಾನ ಗುರು ಪ್ರಭಾಕರ ಶೆಟ್ಟಿ, ಸೇವಾ ಪ್ರತಿನಿಧಿ ಶುಭಲತ ರೈ, ಶಾರದಾ ಶೆಟ್ಟಿ ಅರುವ ಭಾಗವಹಿಸಿದ್ದರು.

ತುಳು ಸಿಂಗಾರ ಕಾರ್ಯಕ್ರಮದಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ದೆ , ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯವರಿಂದ ಕುಣಿತಾ ಭಜನೆ, ಅಳದಂಗಡಿ ಕಲಾ ಸರಸ್ವತಿ ತಂಡದಿಂದ ತುಳು ಸಂಸ್ಕೃತಿ ನೃತ್ಯ, ಚೆನ್ನೆಮಣೆ ಸ್ಪರ್ಧೆ, ಹಾಡು, ನೃತ್ಯ ಕಾರ್ಯಕ್ರಮಗಳು ಜರುಗಿದವು.

ಸಮೃದ್ಧಿ ಪ್ರಾರ್ಥಿಸಿದರು. ಆಮಂತ್ರಣ ಸೇವಾ ಪ್ರತಿಷ್ಠಾನ ಅಧ್ಯಕ್ಷ ವಿಜಯ ಕುಮಾರ್ ಜೈನ್ ಪ್ರಸ್ತಾವಿಸಿ ಸ್ವಾಗತಿಸಿದರು, ಟ್ರಸ್ಟಿ ಸದಾನಂದ ಬಿ.ಕುದ್ಯಾಡಿ ಸಹಕರಿಸಿದರು. ಹೆಚ್ಚೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಅರುಣ್ ಅರುವ ಧನ್ಯವಾದ ಸಲ್ಲಿಸಿದರು.

Related posts

ಧರ್ಮಸ್ಥಳ: ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಯಶೋ ನಮನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ : ತ್ರಿ ಸ್ಟಾರ್ ವೈನ್ಸ್ ಶಾಪ್ ಕಳ್ಳತನ ಪ್ರಕರಣ: ಪ್ರಮುಖ ಆರೋಪಿ ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ

Suddi Udaya

ಯಕ್ಷಭಾರತಿ ಕನ್ಯಾಡಿ ಸಂಸ್ಥೆಯು ಪುರಸ್ಕರಿಸುವ ಯಕ್ಷಭಾರತಿ ಪ್ರಶಸ್ತಿಗೆ ಮೂಡಬಿದರೆಯ ಕೆ ಶ್ರೀಪತಿ ಭಟ್ ಆಯ್ಕೆ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ನಾರಾವಿ ಸಿಎ ಬ್ಯಾಂಕಿನ ಅಧ್ಯಕ್ಷ ಎನ್ ಸುಧಾಕರ ಭಂಡಾರಿ ಬೆಂಬಲ

Suddi Udaya

ಅಯೋಧ್ಯೆ ಪ್ರಭು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಹೆಗ್ಗಡೆ ಭಾಗಿ

Suddi Udaya

ಓಡಿಲ್ನಾಳ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಥಮ ವರ್ಷದ ಶಾರದೋತ್ಸವ ವಿಸರ್ಜನಾ ಕಾರ್ಯಕ್ರಮ

Suddi Udaya
error: Content is protected !!