March 7, 2026
ಅಪರಾಧ ಸುದ್ದಿಪೊಲೀಸ್ಪ್ರಮುಖ ಸುದ್ದಿ

ಭಗವಾನ್ ಶ್ರೀ ಕೃಷ್ಣನಿಗೆ ಅಪಹಾಸ್ಯ ಮಾಡಿದವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಳ್ತಂಗಡಿ: ಶ್ರೀ ಕೃಷ್ಣನ ವೇಷಧಾರಿಯಾದ ‘ರವಿ ರಾಮಕುಂಜ’ ಎಂಬವರು ಹಿಂದೂಗಳ ಆರಾಧ್ಯ ದೇವರಾದ ಶ್ರೀ ಕೃಷ್ಣ ಪರಮಾತ್ಮನ ವೇಷಧರಿಸಿಕೊಂಡು ಅಶ್ಲೀಲ ಭಂಗಿ ಮತ್ತು ಅಶ್ಲೀಲ ಪದ ಕೊಳಲು ಊದುವಾಗ ಶ್ರೀ ಕೃಷ್ಣನ ಇನ್ನೊಂದು ಹೆಸರಾದ ಮುರಾರಿ ಬಗ್ಗೆ ‘ಆಯೆ ಸೈತೆ’ ಅಲ್ಲದೆ ಕೃಷ್ಣ ವೇಶಧಾರಿ ಹಾಲಿಂಗನ ಮಾಡುವುದು ಅಸಂಬದ್ಧ ಶಬ್ದಗಳೊಂದಿಗೆ ಅನಾಗರಿಕವಾಗಿ ನಟಿಸಿ, ವರ್ತಿಸಿದ್ದು ಇದು ಹಿಂದುಗಳ ಧಾರ್ಮಿಕ ಭಾವನೆಗೆ ತೀವ್ರಗಾಸಿ ಉಂಟುಮಾಡುತ್ತದೆ.


ಧಾರ್ಮಿಕ ನಂಬಿಕೆ ಮತ್ತು ಆರಾಧನೆಗೆ ಧಕ್ಕೆಯಾಗದಂತೆ ಕಾನೂನಿನಲ್ಲಿ ಉಲ್ಲೇಖವಿದ್ದರೂ ಈ ರೀತಿಯ ಘಟನೆಗಳು ಮರುಕಳಿಸುವುದರಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿ ಸಮುದಾಯದ ಒಳಗೆ ಗಲಭೆಗಳು ಆಗುವ ಸಾಧ್ಯತೆ ಇರುತ್ತದೆ ಆದ್ದರಿಂದ ತಾವುಗಳು ಸದ್ರಿ ಕಲಾವಿದ ರವಿ ರಾಮಕುಂಜ’ ಮತ್ತು ನಿರ್ದೇಶಕ ಪುಷ್ಪರಾಜ್’ ಹಾಗೂ ಕಾರ್ಯಕ್ರಮದ ಆಯೋಜಕರಾದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.


ಈ ಸಂದರ್ಭದಲ್ಲಿ ಬೆಳ್ತಂಗಡಿಯ ಖ್ಯಾತ ನ್ಯಾಯವಾದಿ ಉದಯ ಕುಮಾರ್ ಬಿ.ಕೆ., ವಿಶ್ವ ಹಿಂದು ಪರಿಷತ್ತು ಬೆಳ್ತಂಗಡಿ ಪ್ರಖಂಡ ಸೇವಾಪ್ರಮುಖ್ ಮೋಹನ್ ಬೆಳ್ತಂಗಡಿ, ಸಾಮಾಜಿಕ ಹೋರಾಟಗಾರರಾದ ಕೇಶವ ಗೌಡ, ಜಗದೀಶ್, ಮೋಹನ್ ಬಂಗೇರ, ಶೇಖರ್ ಕುಲಾಲ್, ಕಮಲಾಕ್ಷ ಇನ್ನಿತರರು ಉಪಸ್ಥಿತರಿದ್ದರು.

Related posts

ಮುಡಾ ಪ್ರಕರಣ ಬಿಜೆಪಿಯ‌ ಷಡ್ಯಂತರ, ಮುಖ್ಯಮಂತ್ರಿ ವಿರುದ್ಧ ಸೇಡಿನ ರಾಜಕೀಯವಷ್ಟೇ: ರಕ್ಷಿತ್ ಶಿವರಾಂ

Suddi Udaya

ಸೌತಡ್ಕ: ಕಡೀರದಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆ : ಅಪಾರ ಕೃಷಿ ಹಾನಿ

Suddi Udaya

ಬಂದಾರುವಿನಲ್ಲಿ ಸರಿಯಾಗಿ ಬಸ್ಸು ವ್ಯವಸ್ಥೆಯಿಲ್ಲದೆ ಪ್ರಯಾಣಿಕರ ಪರದಾಟ: ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರ ಮನವಿ

Suddi Udaya

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಧತ್ತಿನಿಧಿಯಿಂದ ಪುಸ್ತಕ ವಿತರಣೆ

Suddi Udaya

ಮಾ.9: ಬೆಳ್ತಂಗಡಿ ಪಂಚ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಲು ಉಚಿತ ಬಸ್ಸು ವ್ಯವಸ್ಥೆ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಡಿ.10: ಬೆಳಾಲು ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾರ್ಯಗಳ ಹಸ್ತಾಂತರ ಕಾರ್ಯಕ್ರಮ

Suddi Udaya
error: Content is protected !!