29.8 C
ಪುತ್ತೂರು, ಬೆಳ್ತಂಗಡಿ
October 21, 2026
ರಾಜಕೀಯ

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ನಡೆದ ಪುದುವೆಟ್ಟು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸವರ್ಗ

ಪುದುವೆಟ್ಟು :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಆ 11 ರಂದು ನಡೆದ ಪುದುವೆಟ್ಟು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸವರ್ಗ ಸಭೆ ನಡೆಯಿತು. ಹಿರಿಯ ಕಾರ್ಯಕರ್ತರಾದ ದಿವಾಕರ ಗೌಡ ಮುಚ್ಚಾರು,ಪುಟ್ಟ ಗೌಡ ಬರಮೇಲು, ನಾರಾಯಣ ಪೂಜಾರಿ ಕಾಯರಂಡ ಇವರುಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮಂಡಲ ಉಪಾಧ್ಯಕ್ಷರು ಅಭ್ಯಾಸವರ್ಗ ಸಂಚಾಲಕರಾದ ಕೊರಗಪ್ಪ ಗೌಡ ಚಾರ್ಮಾಡಿ ಉದ್ಘಾಟನ ಭಾಷಣ ನೆರವೇರಿಸಿದರು. ಶಾಸಕರಾದ ಹರೀಶ್ ಪೂಂಜರವರು ಪಾಲ್ಗೊಂಡು ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ವಿಸ್ತ್ರುತವಾಗಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲು, ರಾಜೇಶ್ ಪೆರ್ಮುಡ, ಮಂಡಲ ಉಪಾಧ್ಯಕ್ಷರಾದ ಮೋಹನ್ ಅಂಡಿಂಜೆ, ಉಜಿರೆ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ನಿರಂಜನ್ ಶೆಟ್ಟಿ ಬೈಠಕ್ ನೀಡಿದರು, ಉಜಿರೆ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಯಶವಂತ ಗೌಡ ಡೆಚ್ಚಾರು, ನಾರಾವಿ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅಭಿಜಿತ್ ಜೈನ್, ಪುದುವೆಟ್ಟು ಪಂಚಾಯತ್ ಅಧ್ಯಕ್ಷರು, ಶಕ್ತಿ ಕೇಂದ್ರ ಪ್ರಮುಖರಾದ ಪೂರ್ಣಾಕ್ಷ, ಹಿರಿಯರಾದ ಶ್ರೀಧರ್ ನಾಯರ್, ಸಂಜೀವ ಗೌಡ ಅರಸೋಲಿಗೆ, ಅಣ್ಣು ಗೌಡ ಕೊಡಪೊಟ್ಯ, ಬೂತ್ ಅಧ್ಯಕ್ಷರುಗಳಾದ ನಿತ್ಯಾನಂದ ಗೌಡ, ಸೋಯ್ ವರ್ಗಿಸ್, ಚಂದ್ರಹಾಸ,ಬೂತ್ ಕಾರ್ಯದರ್ಶಿಗಳಾದ ಗುರುಪ್ರಸಾದ್ ಕೋಟ್ಯಾನ್, ಆನಂದ ಕಲ್ಲಾಜೆ, ಜನಪ್ರತಿನಿದಿನಗಳು ಹಾಗೂ ಅನ್ಯನ್ಯ ಜವಾಬ್ದಾರಿಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.ದಾಮೋದರ ಮುಜರ್ ದಡ್ದ್, ಭಾಸ್ಕರ ಪೂಜಾರಿ ಅಡ್ಯ ಕಾರ್ಯಕ್ರಮ ನಿರ್ವಹಿಸಿದರು.

Related posts

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ: ನಾವೂರಿನಲ್ಲಿ ಸಂಭ್ರಮಾಚರಣೆ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ನಡೆದ ಕುಕ್ಕೆಡಿ ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಸಭೆಯಲ್ಲಿ ಕಾರ್ಯಕ್ರಮ

Suddi Udaya

ಸುಹಾಸ್ ಶೆಟ್ಟಿ ಪ್ರಕರಣದೊಂದಿಗೆ ಉಳಿದ ಮೂರು ಕೊಲೆ ಪ್ರಕರಣಗಳನ್ನು ಎನ್.ಐ.ಎ (NIA) ಗೆ ಯಾಕೆ ನೀಡಿಲ್ಲ?: ಹರೀಶ್ ಕುಮಾರ್ ಪ್ರಶ್ನೆ

Suddi Udaya

ವಿಧಾನಪರಿಷತ್ ಉಪ ಚುನಾವಣೆಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಪೂಜಾರಿ ಆಯ್ಕೆ

Suddi Udaya

ಮಂಗಳೂರುನಲ್ಲಿ ಪ್ರಜಾಧ್ವನಿ ಯಾತ್ರೆ : ಬೆಳ್ತಂಗಡಿ ಯಲ್ಲಿ ಪೂರ್ವ ಸಮಾಲೋಚನಾ ಸಭೆ

Suddi Udaya

ಲೋಕಸಭಾ ಚುನಾವಣೆ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾನ ಆರಂಭ

Suddi Udaya
error: Content is protected !!