September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯರಾಜ್ಯ ಸುದ್ದಿವರದಿ

ಕಾಂಗ್ರೆಸ್ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಅಂತರಿಕ ಕಚ್ಚಾಟ ಬಹಿರಂಗ: ಬೂತುಗಳಲ್ಲಿ ಹಣ ಸಮರ್ಪಕವಾಗಿ ನಿರ್ವಹಣೆಯಾಗಿಲ್ಲ ಎಂದು ಹೇಳಿದ ಕಾರ್ಯಕರ್ತನನ್ನು ತಡೆದ ಬಂಗೇರ: ಬಂಗೇರ ಮಾತನ್ನು ವಿರೋಧಿಸಿ, ಸಭೆಯಿಂದ ಹೊರ ನಡೆದ ಪತ್ರಕರ್ತರು


ಬೆಳ್ತಂಗಡಿ: ಜೂ.5ರಂದು ನಡೆದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಕಾರ್ಯಕರ್ತರೋರ್ವರು ಕಾಂಗ್ರೆಸ್ ಬೂತುಗಳಿಗೆ ನೀಡಿದ ಹಣ ಸಮರ್ಪಕವಾಗಿ ನಿರ್ವಹಣೆ ಆಗಿಲ್ಲ, ಹಣ ನಾಯಕರ ಬಳಿ ಬಾಕಿಯಾಗಿದೆ ಎಂದು ಹೇಳಿದ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಾತನಾಡುವ ಸಂದರ್ಭ ಕಾರ್ಯಕರ್ತರು ಅವರ ಭಾಷಣಕ್ಕೆ ಅಡ್ಡಿ ಪಡಿಸಿ, ಅವರು ಭಾಷಣವನ್ನು ನಿಲ್ಲಿಸಿದ ಮತ್ತು ಮಾಜಿ ಶಾಸಕರು ಪತ್ರಕರ್ತರ ಮೇಲೆ ಗೂಬೆ ಕೂರಿಸಲು ಹೊರಟಾಗ ಅಸಮಾಧಾನ ವ್ಯಕ್ತಪಡಿಸಿ, ಪತ್ರಕರ್ತರು ಸಭೆಯನ್ನು ಬಹಿಷ್ಕರಿಸಿ ಹೊರನಡೆದ ಘಟನೆ ನಡೆದಿದೆ.


ಅಭಿನಂದನಾ ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ವಹಿಸಿದ್ದರು. ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವಾರಂ ಮಾತನಾಡಿ, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಿದ ಎಲ್ಲಾ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.
ಬಳಿಕ ಕಾರ್ಯಕರ್ತರಿಗೆ ಅನಿಸಿಕೆ ಹೇಳಲು ಅವಕಾಶ ನೀಡಿದಾಗ ಖಲಂದರ್ ಕೊಕ್ಕಡ ಎಂಬವರು ಮಾತನಾಡಿ, ಚುನಾವಣೆಯಲ್ಲಿ ನಾವು ಸೋತು ಗೆದ್ದಿದ್ದೇವೆ. 241 ಬೂತುಗಳಿಗೆ ಪ್ರತಿಯೊಂದು ಮನೆಗೂ ಗ್ಯಾರಂಟಿ ಕಾರ್ಡ್ ತಲುಪಿದಾ, ಇನ್ನೂ ಅನೇಕ ಮನೆಗಳಿಗೆ ಇನ್ನೂ ತಲುಪಿಲ್ಲ, ಅದರಲ್ಲದೆ 241 ಬೂತುಗಳಿಗೆ ನೀಡಿದ ಸವಲತ್ತು, ಚುನಾವಣೆ ಎಂದರೆ ಹಣಕಾಸಿನ ವ್ಯವಸ್ಥೆ ಬೇಕೇ, ಬೇಕು, ಸಮರ್ಪಕವಾಗಿ ಬಳಕೆಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ, ಪ್ರತಿಯೊಂದು ಬೂತಿನಲ್ಲಿ ಹಣ ಸದ್ಬಳಕೆ ಆಗಿಲ್ಲ, ಕೆಲವೊಂದು ನಾಯಕರು ಬಳಿ ಹಣ ಬಾಕಿಯಾಗಿ, ಸಮರ್ಪಕವಾಗಿ ನಿರ್ವಹಣೆ ಆಗಿಲ್ಲ, ಅದಲ್ಲದೆ ಜಿ.ಪಂ ಸಂಯೋಜಕರು, ತಾ.ಪಂ ಉಸ್ತುವಾರಿಗಳು ಇದ್ದಾರೆ ಎಷ್ಟು ಗ್ರಾಮಗಳಿಗೆ ಭೇಟಿ ನೀಡಿದ್ದಾರೆ ಎಂದು ಹೇಳಿ, ಜಿ.ಪಂ ಸಂಯೋಜಕರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದಾಗ ಅಲ್ಲಿಗೆ ಬಂದು ಮಾಜಿ ಶಾಸಕ ವಸಂತ ಬಂಗೇರ ಅವರನ್ನು ಗದರಿಸಿ ತಡೆದ ಘಟನೆ ಜರುಗಿತು.
ಬ್ಲಾಕ್ ಕಾಂಗ್ರೇಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಅವರು ಮಾತನಾಡಿ, ಈ ಹಿಂದೆ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡ ವಿವಿಧ ಹೋರಾಟದ ಬಗ್ಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಸಭೆಯಲ್ಲಿ ಹಿಂದಿನ ಸಾಲಿನಲ್ಲಿದ್ದ ಕಾರ್ಯಕರ್ತರು ಅವರ ಭಾಷಣಕ್ಕೆ ಅಡ್ಡಿ ಪಡಿಸಿದಾಗ ಅವರು ಅರ್ಧದಲ್ಲೇ ಭಾಷಣವನ್ನು ನಿಲ್ಲಿಸಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಕಾಂಗ್ರೆಸ್‌ನ ಕಾರ್ಯಕ್ರಮಕ್ಕೆ ಪ್ರಚಾರ ನೀಡುತ್ತಿಲ್ಲ, ಬಿಜೆಪಿ ಕಾರ್ಯಕ್ರಮಗಳನ್ನು ಹೈಲೆಟ್ ಮಾಡುತ್ತಿದ್ದೀರಿ ಎಂದು ಪ್ರತಿ ಭಾರಿಯಂತೆ ಈ ಸಭೆಯಲ್ಲಿಯೂ ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡು, ಪತ್ರಕರ್ತರನ್ನು ಕೇಳುವ ಹಕ್ಕು ನನಗಿದೆ ಎಂದು ಹೇಳಿ, ಗೂಬೆ ಕೂರಿಸಲು ಯತ್ನಿಸಿದಾಗ ಅಸಮಾಧಾನಗೊಂಡ ಪತ್ರಕರ್ತರು, ಮಾಧ್ಯಮದವರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಘಟನೆಯೂ ನಡೆಯಿತು.
ವೇದಿಕೆಯಲ್ಲಿ ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಜಿ ಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಭಗೀರಥ ಜಿ, ಜಿ.ಪಂ. ಮಾಜಿ ಸದಸ್ಯ ರಾಜಶೇಖರ್ ಅಜ್ರಿ, ವಿವಿಧ ಘಟಕಗಳ ಮುಖ್ಯಸ್ಥರಾದ ವಂದನಾ, ನಮಿತಾ, ಸಲೀಂ ಜಿ.ಕೆರೆ, ಓಬಯ್ಯ, ದಯಾನಂದ, ದಿನೇಶ್ , ಸತೀಶ್ ಶೆಟ್ಟಿ, ಅಬ್ದುಲ್ ರಹಿಮಾನ್ ಪಡ್ಪು, ಅನಿಲ್ ಪೈ, ಶೇಖರ್ ಕುಕ್ಕೇಡಿ, ಅಭಿನಂದನ್, ಆಶ್ರಫ್, ಎ.ಸಿ ಮ್ಯಾಥ್ಯು, ರಾಜು ಪೂಜಾರಿ, ಪ್ರಶಾಂತ್ ವೇಗಸ್, ಮನೋಹರ ಇಳಂತಿಲ, ಮೊದಲಾದವರಿದ್ದರು.

Related posts

ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಆಶ್ರಯದಲ್ಲಿ, ನಡೆಯುವ ಯೋಗಾಸನ, ಪ್ರಾಣಾಯಾಮ ಧ್ಯಾನ ಶಿಬಿರದ ಪೂರ್ವಭಾವಿ ಸಭೆ

Suddi Udaya

ನಿಡ್ಲೆ: ಅಕ್ರಮ ವೈನ್ ದಾಸ್ತಾನು ಸ್ಟೋರ್ ಮೇಲೆ ಬೆಳ್ತಂಗಡಿ ಅಬಕಾರಿ ದಾಳಿ ರೂ.2 ಲಕ್ಷ ಮೌಲ್ಯದ ವೈನ್ ವಶ

Suddi Udaya

ಡಾ. ಎಲ್ ಎಚ್ ಮಂಜುನಾಥರವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನ

Suddi Udaya

ರೋಟರಿ ಕ್ಲಬ್ ಮಡಂತ್ಯಾರ್ ಗೆ ಪ್ರತಿಷ್ಠಿತ ಪ್ಲಾಟಿನಂ ಕ್ಲಬ್ ಪ್ರಶಸ್ತಿ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ವಿಜ್ -ವರ್ಲ್ಡ್ 2025

Suddi Udaya

ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya
error: Content is protected !!