July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ಹಳೆಪೇಟೆ ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಉಜಿರೆ : 79 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್ ಹಳೆಪೇಟೆ, ಉಜಿರೆ ಇದರ ವತಿಯಿಂದ ಟಿ. ಬಿ. ಕ್ರಾಸ್ ಜಂಕ್ಷನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಸಲೀಂ ಕುಂಟಿನಿ (ಅಧ್ಯಕ್ಷರು SDTU ಹಳೆಪೇಟೆ ಉಜಿರೆ) ಹಾಗೂ ಹಿರಿಯರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಸಲೀಂ ಕುಂಟಿನಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಂದಂತಹ ಎಲ್ಲಾ ಅಥಿತಿಗಳನ್ನು ಫಝಲ್ ಉಜಿರೆ ಸ್ವಾಗತಿಸಿ, ಅಬ್ದುಲ್ ಖಾದರ್ ಅಲ್ ಹಿಕಮಿ (ಮುದರ್ರಿಸರು ಅಲ್ ಬುಖಾರಿ ಮಸ್ಜಿದ್ ಕುಂಟಿನಿ) ಹಿತನುಡಿಗಳೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಖಾದರ್ ನಾವೂರ (ನಿರ್ದೇಶಕರು, ಇನ್ಫಾಮೇಟ್ ಫೌಂಡೇಶನ್ (ರಿ) ಹಾಗೂ ಅನುಗ್ರಹ ಟ್ರೈನಿಂಗ್ ಕಾಲೇಜು ಮುಡಿಪು ಹಾಗೂ ಬೆಳ್ತಂಗಡಿ) ಹಾಗೂ ಪ್ರಕಾಶ್ ಫೆರ್ನಾಂಡಿಸ್ (ಮಾಲಕರು ಎಸ್. ಎ ಮೆಡಿಕಲ್ ಉಜಿರೆ) ಸಂದೇಶ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ SDTU ಕಾರ್ಯದರ್ಶಿ ಖಾದರ್ ನಾಡ್ಜೆ, ಆಟೋ ಯೂನಿಯನ್ ಸದಸ್ಯರು ಸಾರ್ವಜನಿಕರು ಹಾಗೂ ಹಿರಿಯರು ಉಪಸ್ಥಿತರಿದ್ದರು.

ಸಮಾಜ ಸೇವಕರು ಹಾಗೂ ಮಾಲಕರು ಎಸ್. ಎ ಮೆಡಿಕಲ್ ಉಜಿರೆ ಪ್ರಕಾಶ್ ಫೆರ್ನಾಂಡಿಸ್ ರವರಿಗೆ ಸನ್ಮಾನಿಸಲಾಯುತು.

ಕಾರ್ಯಕ್ರಮವನ್ನು ಮರ್ಷಾದ್ ಉಜಿರೆ ನಿರೂಪಿಸಿ ಸಹಲ್ ನೀರ್ಸಾಲ್ ಧನ್ಯವಾದ ಮಾಡಿದರು.

Related posts

ಸ್ವ-ಉದ್ಯೋಗ ಅಥವಾ ಉದ್ಯೋಗ ತಯಾರಿಕಾ ತರಬೇತಿಗೆ ಅರ್ಜಿ ಆಹ್ವಾನ

Suddi Udaya

ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯ ಪ್ರೌಢ ವಿಭಾಗದ ವಿದ್ಯಾರ್ಥಿನಿಯರಿಗೆ ಹೆಚ್‌ಪಿವಿ ಲಸಿಕೆಯ ಕುರಿತ ಮಾಹಿತಿ ಕಾರ್ಯಗಾರ

Suddi Udaya

ಅ.28-29 ರಂದು ನಡೆಯಲಿರುವ “ವಿಶ್ವ ಬಂಟರ ಸಮ್ಮೇಳನದ” ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಲ್ಲೇರಿ: ಕಾರು ಮತ್ತು ಸ್ಕೂಟಿಯ ನಡುವೆ ಭೀಕರ ರಸ್ತೆ ಅಪಘಾತ: ಓರ್ವ ಮೃತ್ಯು

Suddi Udaya

ಭಾರತೀಯ ಜನತಾ ಪಾರ್ಟಿ ಕಳಿಯ – ನ್ಯಾಯತರ್ಪು ವತಿಯಿಂದ ವಿಶೇಷ ಪೂಜೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ

Suddi Udaya
error: Content is protected !!