ಬೆಳ್ತಂಗಡಿ : ಕಲ್ಕೂರ ಪ್ರತಿಷ್ಠಾನ, ಮಂಗಳೂರು ಇವರು ವರ್ಷಂಪ್ರತಿ ಕೊಡಮಾಡುವ ಪಠ್ಯೇತರ ಚಟುವಟಿಕೆಗಳಿಗೆ ಸಂಬAಧಿಸಿದ ಮಕ್ಕಳ ಪ್ರತಿಭಾ ಪುರಸ್ಕಾರದಲ್ಲಿ ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆ ಕೊಕ್ಕಡದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಅದಿತಿ.ಕೆ ಕೊಕ್ಕಡ ಇವರು ಆಯ್ಕೆಗೊಂಡು ನವೆಂಬರ್ 20 ರಂದು ಶಾರದಾ ವಿದ್ಯಾಲಯ ,ಮಂಗಳೂರು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರಿಂದ ಅಭಿನಂದಿಸಲ್ಪಟ್ಟಿದ್ದಾರೆ.
ಇವರು ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಹಳ್ಳಿoಗೇರಿಯ ದಿನೇಶ್ ಹಾಗೂ ಬಜತ್ತೂರು ಶಾಲಾ ಶಿಕ್ಷಕಿ ಪವಿತ್ರಾ ದಂಪತಿ ಪುತ್ರಿ.













