March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ: ಶಾಂತಿವನದಲ್ಲಿ 79ನೇ ಸ್ವಾತಂತ್ರ‍್ಯೋತ್ಸವದ ಭಾವೈಕ್ಯ ಉತ್ಸವ

ಧರ್ಮಸ್ಥಳ: ಶಾಂತಿವನದಲ್ಲಿ 79ನೇ ಸ್ವಾತಂತ್ರ‍್ಯೋತ್ಸವವನ್ನು ಹರ್ಷೋಲ್ಲಾಸದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿರ್ಮಲ್ ಕುಮಾರ್ ಅವರು ಸ್ವಾತಂತ್ರ‍್ಯದ ಮಹತ್ವ ಹಾಗೂ ತ್ರಿವರ್ಣ ಧ್ವಜದ ಸಂಕೇತಾರ್ಥಗಳನ್ನು ಮನದಟ್ಟುಗೊಳಿಸಿದರು. ಅವರು, ಧ್ವಜದ ಪ್ರತಿಯೊಂದು ಬಣ್ಣವು ದೇಶದ ಏಕತೆ, ಶಾಂತಿ ಹಾಗೂ ಧೈರ್ಯವನ್ನು ಪ್ರತಿನಿಧಿಸುವುದಾಗಿ ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ ಶಾಂತಿವನ ಟ್ರಸ್ಟಿನ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತಾಯ ಅವರು, ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಸ್ವಾತಂತ್ರ‍್ಯಸೇನಾನಿಗಳ ತ್ಯಾಗ, ಶೌರ್ಯ ಹಾಗೂ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು. “ಸ್ವಾತಂತ್ರ‍್ಯ ನಮಗೆ ದೊರಕಿದ್ದು ಅನೇಕ ಹೋರಾಟ, ಬಲಿದಾನ ಮತ್ತು ತ್ಯಾಗಗಳ ಫಲ” ಎಂದು ಅವರು ಹೇಳಿದರು.

ಕಾರ್ಯಕ್ರಮಕ್ಕೆ ಸ್ವಾಗತ ಭಾಷಣವನ್ನು ಶಾಂತಿವನದ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಶಿವಪ್ರಸಾದ್ ಶೆಟ್ಟಿ ಅವರು ನೆರವೇರಿಸಿದರು.
ಶಾಂತಿವನದ ಸ್ಥಾನಿಕ ವೈದ್ಯಾಧಿಕಾರಿಗಳಾದ ಡಾ. ಬಿಂದು ಧನ್ಯವಾದವಿತ್ತರು

ಈ ಸಂದರ್ಭದಲ್ಲಿ ಶಾಂತಿವನದ ಆಡಳಿತಾಧಿಕಾರಿ ಜಗನ್ನಾಥ್ , ಆಸ್ಪತ್ರೆಯ ವ್ಯವಸ್ಥಾಪಕ ಸ್ವಸ್ತಿಕ್ ಅವರು ಸಿಬ್ಬಂದಿವರ್ಗದವರು, ಸಾಧಕರು, ವೈದ್ಯರು, ವೈದ್ಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮವು ದೇಶಭಕ್ತಿಯ ಹಾಡುಗಳು ಹಾಗೂ ಧ್ವಜಾರೋಹಣ ನೆರವೇರಿತು.

Related posts

ಸುಲ್ಕೇರಿ ಹಾ.ಉ. ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಪುಷ್ಪಾವತಿ ನಿತ್ಯಾನಂದ, ಉಪಾಧ್ಯಕ್ಷರಾಗಿ ವಿದ್ಯಾ ಗೋರೆ

Suddi Udaya

ಮನೋಜ್ ಕಟ್ಟೆಮಾರ್‌ರವರ ಹುಟ್ಟುಹಬ್ಬದ ಪ್ರಯುಕ್ತ ತಾಲೂಕು ಆಸ್ಪತ್ರೆಯ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜಾತ್ರಾಮಹೋತ್ಸವದ ಸಮಾಲೋಚನಾ ಸಭೆ

Suddi Udaya

ಪಿಲ್ಯ ಶಾಲಾ ಹಳೇ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಆಮಂತ್ರಣ ವಿಜಯ ಕುಮಾರ್ ಜೈನ್ ಆಯ್ಕೆ

Suddi Udaya

ಧಾರಾಕಾರವಾಗಿ ಸುರಿದ ಗಾಳಿ ಮಳೆ: ಮೇಲಂತಬೆಟ್ಟು ಕೆಲವು ಮನೆಗಳ ಮೇಲ್ಛಾವಣಿ ಕುಸಿತ

Suddi Udaya

ಟೀಂ ಅಭಯಹಸ್ತ ವತಿಯಿಂದ ಅಳದಂಗಡಿ ಸತ್ಯಸಾರಮುಪ್ಪಣ್ಯ ದೈವಸ್ಥಾನದ ಗುಳಿಗ ಸಾನಿಧ್ಯ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ

Suddi Udaya
error: Content is protected !!