September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್, ಪದವಿ ಪೂರ್ವ ಹಾಗೂ ಪ್ರೌಢಶಾಲಾ ವಿಭಾಗದ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಪುಂಜಾಲಕಟ್ಟೆ: ನಮಗೆಲ್ಲರಿಗೂ ಸ್ವಾತಂತ್ರ ದೊರಕಿ 78 ವರ್ಷಗಳು ಆಗಿದೆ. ಇಂದು 79ನೇ ವರ್ಷದ ಸಂಭ್ರಮದಲ್ಲಿ ನಾವೆಲ್ಲರೂ ಪಾಲ್ಗೊಂಡಿದ್ದೇವೆ. ಪ್ರತಿಯೊಬ್ಬರೂ ಕೂಡ ಈ ಒಂದು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅಂತಹ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕಾದದ್ದು ಸರ್ವ ಭಾರತೀಯರ ಮೊದಲ ಕರ್ತವ್ಯ. ನಮಗೆ ಸ್ವಾತಂತ್ರ್ಯವನ್ನು ತಂದು ಕೊಡುವಲ್ಲಿ ಬಲಿದಾನಗೈದ ಆ ಮಹಾತ್ಮರನ್ನು ಸದಾ ಸ್ಮರಿಸೋಣ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ತನ್ನ ಪಾಲಿನ ಕರ್ತವ್ಯವನ್ನು ಮಾಡುತ್ತಾ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಬಿ ಉದಯಕುಮಾರ್ ರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪದವಿ ಪೂರ್ವ ಹಾಗೂ ಪ್ರೌಢಶಾಲಾ ವಿಭಾಗದ ಜಂಟಿ ಆಶ್ರಯದಲ್ಲಿ ನೆರವೇರಿಸಿದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಾರ್ಯಕ್ರಮವು ಎನ್ ಸಿ ಸಿ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಹಾಗೂ ಭಾರತಮಾತೆಗೆ ಗೌರವ ಸಲ್ಲಿಸಲಾಯಿತು. ಸಮಾರಂಭದಲ್ಲಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಳಗ, ಪ್ರೌಢಶಾಲಾ ವಿಭಾಗದ ಶಿಕ್ಷಕ ಹಾಗೂ ಶಿಕ್ಷಕೇತರ ಬಳಗ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು, ಪೋಷಕ ಬಂಧುಗಳ ಸಹಕಾರದೊಂದಿಗೆ ನೆರವೇರಿತು.
ಏನ್ ಸಿಸಿ ಅಧಿಕಾರಿ ವಿಜ್ಞಾನ ಶಿಕ್ಷಕ ನಿರಂಜನ್ ಜೈನ್ ಐ ಸ್ವಾಗತಿಸಿ, ಧರಣೇಂದ್ರ ಕೆ ಧನ್ಯವಾದವಿತ್ತರು.

Related posts

ಲಾಯಿಲ: ಬೆರ್ಕೆ ರಸ್ತೆಯಲ್ಲಿ ಕಸ ಎಸೆದವರಿಂದಲೇ ವಿಲೇವಾರಿ ಮಾಡಿ ದಂಡ ವಿಧಿಸಿದ ಲಾಯಿಲ ಗ್ರಾ.ಪಂ.

Suddi Udaya

ತಣ್ಣೀರುಪಂತ ಗ್ರಾ.ಪಂ. ಡಾ.ಶಿವರಾಮ ಕಾರಂತ್‌ ಪ್ರಶಸ್ತಿಗೆ ಆಯ್ಕೆ: ಫೆ.10 ರಂದು “ಹೊಳಪು-2024 ಗ್ರಾಮ ಸರ್ಕಾರದ ದಿಬ್ಬಣ” ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ

Suddi Udaya

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಉರುವಾಲುವಿನ ಸೀತಾ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ನೇತ್ರಾವತಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಆಟಿ ಕೂಟ – ಮೆರಗು ತಂದ ಆಟಿ ಕಳೆಂಜ : ರಂಗೇರಿಸಿದ ಮಹಿಳೆಯರ ಕೋರಿದ ಕಟ್ಟ ಡ್ಯಾನ್ಸ್

Suddi Udaya

ಕೋರ್ಟ್ ಆದೇಶ ಉಲ್ಲಂಘಿಸಿ ಯಾವುದೇ ಹೇಳಿಕೆ ನೀಡದಂತೆ ಮಹೇಶ್ ಶೆಟ್ಟಿಯವರಿಗೆ ಎಚ್ಚರಿಕೆ: ಪ್ರತಿಬಂಧಕಾದೇಶ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ಸರಕಾರ ಹಾಗೂ ಗೃಹ ಇಲಾಖೆಗೆ, ಉನ್ನತ ಪೊಲೀಸ್ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ

Suddi Udaya

ಸುದ್ದಿ ಉದಯ ವಾರಪತ್ರಿಕೆಯು ನವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ “ಹೇ ಶಾರದೆ” ಫೋಟೊ ಸ್ಪರ್ಧೆಯ ಫಲಿತಾಂಶ ಪ್ರಕಟ

Suddi Udaya
error: Content is protected !!