March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

ಬೆಳ್ತಂಗಡಿ: ರಾಷ್ಟ್ರಕ್ಕಾಗಿ ಬಲಿದಾನ ನೀಡಿದ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಹಾಗೂ ರಾಷ್ಟ್ರ ಪ್ರೇಮ ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುವಂತಿದ್ದು, ದೇಶದ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಯುವ ಜನಾಂಗ ನಿಷ್ಠೆಯಿಂದ ಪಾಲ್ಗೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಚಿಂತಕ ಲೇಖಕರಾದ ಶಿವಪ್ರಸಾದ್ ಸುರ್ಯ ಹೇಳಿದರು.

ಅವರು ವಾಣಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಭಾರತದ ಇತಿಹಾಸ ಸೋಲಿನ ಇತಿಹಾಸವಲ್ಲ: ಅದು ಸಂಘರ್ಷದ ಇತಿಹಾಸ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿ ಶಕ್ತಿಯ ತ್ಯಾಗ ಅಪರಿಮಿತವಾಗಿದೆ. ಇದರಲ್ಲಿ ಮಹಿಳಾ ಶಕ್ತಿಯೂ ಸೇರಿಕೊಂಡಿದೆ.
ಇಂದು ಅಂತ:ಶಕ್ತಿಯಿಂದ ಬೆಳೆಯುತ್ತಿರುವ ಭಾರತ ವಿದೇಶಗಳಿಗೆ ಸಡ್ಡು ಹೊಡೆದು ನಿಂತಿದೆ. ಪ್ರಸ್ತುತ ಕಾಲದಲ್ಲಿ ವಿದ್ಯಾರ್ಥಿಗಳು, ವಿಜ್ಞಾನಿಗಳು, ಚಿಂತಕರು ಭಾರತದ ಇತಿಹಾಸವನ್ನು ಚಂದ್ರಗ್ರಹದವರೆಗೂ ತಲುಪಿಸಿಬಿಟ್ಟಿದ್ದಾರೆ. ವಿದೇಶದ ತಂತ್ರಜ್ಞಾನಗಳನ್ನು ಅವಲಂಬಿಸುವುದನ್ನು ಬಿಟ್ಟು ಅದನ್ನು ನಮ್ಮಲ್ಲೇ ಅಭಿವೃದ್ಧಿಪಡಿಸಿದಾಗ ರಾಷ್ಟ್ರಾಭಿವೃದ್ದಿ ಸಾಧ್ಯವಾಗುತ್ತದೆ. ಯುವಶಕ್ತಿಯು ಮೇಧಾ ಶಕ್ತಿಯಿಂದ ಭಾರತದ ಆಕಾಶಕ್ಕೆ ಕವಿದ ಮೋಡವನ್ನು ಸರಿಸಿ ಶುಭ್ರತೆಯನ್ನು ತರುವ ಸಂಕಲ್ಪವನ್ನು ಹೊಂದಬೇಕು ಎಂದರು.


ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಣೇಶ್ ಗೌಡ, ಆಡಳಿತಾಧಿಕಾರಿ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ ಸ್ವಾಗತಿಸಿದರು. ಉಪನ್ಯಾಸಕ ಹರ್ಷಿತ್ ಧನ್ಯವಾದವಿತ್ತರು. ಉಪನ್ಯಾಸಕ ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ವರ್ತಕರ ಸಂಘದ ವತಿಯಿಂದ ಹೂವಿನ ವ್ಯಾಪಾರಿ ಶಿವರಾಮ್ ರವರಿಗೆ ಆರ್ಥಿಕ ಸಹಾಯ

Suddi Udaya

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಸವಾರನಿಗೆ ಗಂಭೀರ ಗಾಯ

Suddi Udaya

ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಆಶ್ರಯದಲ್ಲಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಇವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಇಲಾಖೆಯ ಓವರಂ ಮ್ಯಾಚ್ ‘ರಾಜೇಶ್ವರಿ ರತ್ನ ಟ್ರೋಫಿ’ ಕ್ರಿಕೆಟ್ ಪಂದ್ಯಾಟ

Suddi Udaya

ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ

Suddi Udaya

ಟೀಮ್ ದೇವರಗುಡ್ಡೆ ವತಿಯಿಂದ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಕೈತೋಟ ರಚನೆ

Suddi Udaya

ಕಬಡ್ಡಿ ಪಂದ್ಯಾಟ: ಬೆಳ್ತಂಗಡಿ ಸ. ಪ್ರೌ. ಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!