March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಡಿರುದ್ಯಾವರ ಶ್ರೀ ವನದುರ್ಗಾದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಎಕ್ಸೆಲ್ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಇವರಿಗೆ ಅಭಿನಂದನೆ

ಕಡಿರುದ್ಯಾವರ: ಶ್ರೀ ವನದುರ್ಗಾದೇವಿ ದೇವಸ್ಥಾನ ಟ್ರಸ್ಟ್ (ರಿ) ಇದರ ವತಿಯಿಂದ ‘ವಿಜಯರತ್ನ ಪ್ರಶಸ್ತಿ’ ಪುರಸ್ಕೃತ ಹಾಗೂ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಗುರುವಾಯನಕೆರೆ ಎಕ್ಸೆಲ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಇವರಿಗೆ ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮವು ಆ.17 ರಂದು ಕಡಿರುದ್ಯಾವರದ ಶ್ರೀ ವನದುರ್ಗಾ ದೇವಿ ದೇವಸ್ಥಾನದ ಆವರಣದಲ್ಲಿ ಜರುಗಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಮಂತ್ ಅವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ತಾನು ಬಡತನದೊಂದಿಗೆ ಬೆಳೆದು ಶಿಕ್ಷಣಕ್ಕಾಗಿ ಪಟ್ಟ ಕಷ್ಟ ಇಂದಿನ ಗ್ರಾಮೀಣ ಪ್ರದೇಶದ ಮಕ್ಕಳು ಅನುಭವಿಸಬಾರದು. ಅವರಿಗೆ ಉತ್ಕೃಷ್ಠ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಎಕ್ಸೆಲ್ ಎಂಬ ಶಿಕ್ಷಣ ಸಂಸ್ಥೆ ಸ್ಥಾಪಿಸಿದೆ ಎಂದು ಹೇಳಿದರು.
ಸನ್ಮಾನಿತರ ಶಿಕ್ಷಕಿಯಾಗಿರುವ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸರೋಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸುಮಂತ್ ಅವರ ಪ್ರಾಥಮಿಕ ಶಾಲಾ ಜೀವನದ ಬಗ್ಗೆ ನೆನಪಿಸಿಕೊಂಡರು. ಶ್ರೀ ವನದುರ್ಗಾದೇವಿ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಮಂಗಳೂರು ಮೆಸ್ಕಾಂ ಮುಖ್ಯ ಆರ್ಥಿಕ ಅಧಿಕಾರಿ ಮುರಳೀಧರ ನಾಯಕ್ ಅಭಿನಂದನಾ ಭಾಷಣ ಮಾಡಿ ಸುಮಂತ್ ಅವರ ಸಾಧನೆ ಬಗ್ಗೆ ಬೆಳಕು ಚೆಲ್ಲಿದರು.


ಸುಮಂತ್ ಅವರ ಮಾತಾ ಪಿತೃಗಳಾದ ಶ್ರೀಮತಿ ಶುಭಲತಾ ಮತ್ತು ಸತೀಶ್ ಆರಿಗ ಬೆಳ್ಳೂರುಗುತ್ತು, ಕಡಿರುದ್ಯಾವರ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರತ್ನಾವತಿ ಬಾಲಕೃಷ್ಣ , ಸಮಿತಿ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.

Related posts

ಬೆಳಾಲು ತಾರಗಂಡಿ ನಿವಾಸಿ ನೋಣಯ್ಯ ಪೂಜಾರಿ ನಿಧನ

Suddi Udaya

ಪಿಯುಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ, ಸಹನ ಭಟ್ ರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ಬ್ಲಾಕ್ ಗೆ ಜಿಲ್ಲಾ ಅಲ್ಪಸಂಖ್ಯಾತ ಘಟಕದಿಂದ ಚುನಾವಣಾ ಉಸ್ತುವಾರಿಯಾಗಿ ಮಹಮ್ಮದ್ ಹನೀಫ್ ಉಜಿರೆ ನೇಮಕ

Suddi Udaya

ಮುಗ್ಗಗುತ್ತು ದಿ | ಕೆ. ಜಿ ಬಂಗೇರರ ಪತ್ನಿ ಶ್ರೀಮತಿ ವೀರಮ್ಮ ನಿಧನ

Suddi Udaya

ಕಾಂಗ್ರೆಸ್ ಕರಪತ್ರದಲ್ಲಿ ಯಕ್ಷಗಾನ ವೇಷಧಾರಿಯ ಫೋಟೋ ಬಳಕೆ: ಜಿಲ್ಲಾ ಚುನಾವಣಾಧಿಕಾರಿಗೆ ದೂರು ದಾಖಲು

Suddi Udaya

ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ: ನಿನ್ನೆ ನಡೆದ ಸಭೆಯಲ್ಲಿ ರಾಜೀನಾಮೆ ನೀಡಲು ನಿರ್ಣಯಿಸಲಾಗಿದೆಯೇ ಹೊರತು ನಾವು ರಾಜೀನಾಮೆ ನೀಡಿಲ್ಲ: ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ಹೇಳಿಕೆ

Suddi Udaya
error: Content is protected !!