March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳಾಲು: ಉಷಾ ಎನ್ ಉಡುಪ ಹೆಸರಿನ ಶಾಶ್ವತ ದತ್ತಿ ನಿಧಿ ವಿತರಣಾ ಕಾರ್ಯಕ್ರಮ

ಬೆಳಾಲು ಶ್ರೀ ಧ.ಮಂ.ಪ್ರೌಢಶಾಲೆಯಲ್ಲಿ ಉಷಾ ಏನ್ ಉಡುಪ ಹೆಸರಿನ ಶಾಶ್ವತ ದತ್ತಿ ನಿಧಿ ವಿತರಣಾ ಕಾರ್ಯಕ್ರಮ ಆ. 19 ರಂದು ಜರಗಿತು.

ಕಾರ್ಯಕ್ರಮವನ್ನು ಊರ ಪ್ರಮುಖರಾದ ಗಿರೀಶ್ ಬಾರಿತ್ತಾಯ ಪಾರಳ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಫಲಾನುಭವಿ ವಿದ್ಯಾರ್ಥಿಗಳಿಗೆ ನಿಧಿಯನ್ನು ಸಾಂಕೇತಿಕವಾಗಿ ವಿತರಿಸಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಸಂಯೋಜಕರಾದ ಎಸ್. ಎನ್ ಕಾಕತ್ಕರ್ ಮಾತನಾಡಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ನೀಡಿದ ಈ ದತ್ತಿ ನಿಧಿ ಇತರರಿಗೂ ಪ್ರೇರಕ ಎಂದು ತಿಳಿಸಿದರು. ದತ್ತಿ ನಿಧಿಯಿಂದ ವಿದ್ಯಾರ್ಥಿಗಳ ಬಸ್ ಪಾಸ್ ಶುಲ್ಕ ಮತ್ತು ಶೈಕ್ಷಣಿಕ ಶುಲ್ಕವನ್ನು ನೀಡಲಾಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಬೆಳಾಲು ಇದರ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾಜೇಶ್ ಕುರ್ಕಿಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಶಿಧರ , ಶಿಕ್ಷಕ ವೃಂದದವರು ಉಪಸ್ಥಿತರಿದ್ದರು ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಸ್ವಾಗತಿಸಿದರು. ಶಿಕ್ಷಕರಾದ ಕಿರಣ್ ವಂದಿಸಿದರು. ಸುಮನ್ ಯು. ಎಸ್ ಕಾರ್ಯಕ್ರಮ ನಿರೂಪಿಸಿದರು

Related posts

ನಾವೂರು 25ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ: ಧಾರ್ಮಿಕ ಸಭೆ

Suddi Udaya

ಬೆಳ್ತಂಗಡಿ ಸಂತ ತೆರೇಸಾ ಪ್ರೌಢ ಶಾಲೆಗೆ ಶೇ.88.60 ಫಲಿತಾಂಶ

Suddi Udaya

ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

Suddi Udaya

ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ “ಸ್ಕ್ರ್ಯಾಚ್ ಗೇಮಿಂಗ್ ಕ್ರಾಫ್ಟಿಂಗ್ ಸ್ಪರ್ಧೆ”

Suddi Udaya

ಪರಾಮರ್ಶೆ ಸಮಿತಿಯ ಮುಖ್ಯಸ್ಥ ಮಾಜಿ ರಾಜ್ಯಸಭಾ ಸದಸ್ಯರಾದ ಬಿ ಇಬ್ರಾಹಿಂರಿಗೆ ಅಗೌರವ: ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ನಗರ ಮತ್ತು ಗ್ರಾಮೀಣ ಘಟಕದ ಖಂಡನೆ : ಆರೋಪಿತರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ

Suddi Udaya

ಸುಲ್ಕೇರಿ ಗ್ರಾ.ಪಂ. ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya
error: Content is protected !!