September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಗುರುದೇವ ಕಾಲೇಜಿನಲ್ಲಿ ಪ.ಪೂ. ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ

ಬೆಳ್ತಂಗಡಿ : ‘ಕ್ರೀಡೆ ಮನಸ್ಸು ಮತ್ತು ದೇಹಕ್ಕೆ ಆರೋಗ್ಯ ನೀಡುವಂತಹುದು. ಶಾಲಾ ಕಾಲೇಜಿನ ಅವಧಿಯಲ್ಲಿ ಸಿಗುವ ಕ್ರೀಡೆಯ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ವಿದ್ಯಾರ್ಥಿ ದೆಸೆಯಲ್ಲಿಯೇ ಬದುಕನ್ನು ಬೆಳಗಿಸಿಕೊಳ್ಳಬೇಕು’ ಎಂದು ನಗರ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಕೆ ಹೇಳಿದರು.


ಅವರು ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಟೇಬಲ್ ಟೆನ್ನಿಸ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.


ತಾಲೂಕು ಕ್ರೀಡಾ ಸಂಯೋಜಕ ಸಂದೀಪ್ ಕುಮಾರ್ ಶೆಟ್ಟಿ ಮಾತನಾಡಿ, ಶ್ರೀ ಗುರುದೇವ ಸಂಸ್ಥೆಯ ಸ್ಥಾಪಕರಾದ ಕೀರ್ತಿಶೇಷ ಕೆ. ವಸಂತ ಬಂಗೇರರು ಹೃದಯ ವೈಶಾಲ್ಯತೆ ಉಳ್ಳವರಾಗಿದ್ದು, ಕ್ರೀಡೆಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದವರು ಎಂದರು.
ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಎಸ್.ಡಿ.ಎಂ. ವಸತಿ ಕಾಲೇಜಿನ ಉಪಪ್ರಾಂಶುಪಾಲ ಮನೀಶ್, ಕ್ರೀಡಾ ನಿರ್ದೇಶಕ ಲಕ್ಷ್ಮಣ ಗೌಡ, ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ, ಕ್ರೀಡಾ ನಿರ್ದೇಶಕ ರವಿರಾಮ್ ಶೆಟ್ಟಿ, ಕ್ರೀಡಾ ಸಂಯೋಜಕಿ ಅನನ್ಯ ಉಪಸ್ಥಿತರಿದ್ದರು.
ಕಾಲೇಜಿನ ಉಪ ಪ್ರಾಂಶುಪಾಲ ಬಿ. ಎ. ಶಮೀವುಲ್ಲಾ ಪ್ರಸ್ತಾವಿಸಿ ಸ್ವಾಗತಿಸಿದರು. ಕನ್ನಡ ಭಾಷಾ ಉಪನ್ಯಾಸಕ ರಾಕೇಶ್ ಕುಮಾರ್ ನಿರೂಪಿಸಿದರು. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಶುಭಲಕ್ಷ್ಮಿ ವಂದಿಸಿದರು.

Related posts

ಫೆ 27- ಮಾ 2, ಗುರುವಾಯನಕೆರೆ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ ರತ್ನಗಿರಿ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾ ಮಹೋತ್ಸವ

Suddi Udaya

ಶೃಂಗಾರ್ ಜ್ಯುವೆಲ್ಲರ್ಸ್ ಗೆ 25 ರ ಸಂಭ್ರಮ-ಆಕರ್ಷಕ ಆಫರ್: ಇನ್ನೂ ಕೇವಲ 2 ದಿನ ಮಾತ್ರ:

Suddi Udaya

ಬೆಳ್ತಂಗಡಿ : ಉಚಿತ ನೇತ್ರ ತಪಾಸಣೆ, ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ

Suddi Udaya

ಬೆಳ್ತಂಗಡಿ ತಹಶೀಲ್ದಾರ್ ಟಿ.ಸುರೇಶ್ ಕುಮಾರ್ ವರ್ಗಾವಣೆ

Suddi Udaya

ಕಾಶಿಪಟ್ಣ ಗ್ರಾ.ಪಂ. ಗೆ ಗಾಂಧೀ ಗ್ರಾಮ ಪುರಸ್ಕಾರ ಪ್ರಶಸ್ತಿ ಪ್ರದಾನ: ಸತೀಶ್. ಕೆ ಕಾಶಿಪಟ್ಣ ಮತ್ತು ಪಂ.ಅ.ಅ. ರಾಘವೇಂದ್ರ ಪಟೇಲ್ ರಿಂದ ಪ್ರಶಸ್ತಿ ಸ್ವೀಕಾರ

Suddi Udaya

ಬೆಳ್ತಂಗಡಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ: ಎಚ್ಚರ ವಹಿಸುವಂತೆ ಶಾಸಕ ಹರೀಶ್ ಪೂಂಜ‌ ಮನವಿ: ತುರ್ತು ಸಂದರ್ಭಗಳಲ್ಲಿ‌ ಸಹಾಯವಾಣಿ ಸಂಪರ್ಕಿಸಲು ಸೂಚನೆ

Suddi Udaya
error: Content is protected !!