September 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿ

ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ವಿ. ದೇವಸ್ಯ, ಉಪಾಧ್ಯಕ್ಷರಾಗಿ ಸುನಿಲ್ ದೊಂಡೋಲೆ ಅವಿರೋಧ ಆಯ್ಕೆ

ಧರ್ಮಸ್ಥಳ: ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ ಟಿ.ವಿ. ದೇವಸ್ಯ, ಉಪಾಧ್ಯಕ್ಷರಾಗಿ ಸುನಿಲ್ ದೊಂಡೋಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ಡಿ.4 ರಂದು ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಟಿ.ವಿ ದೇವಸ್ಯ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಸುನಿಲ್ ದೊಂಡೋಲೆ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಿನ್ನಲೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಎಲ್ಲ 13 ಸ್ಥಾನಗಳಲ್ಲಿಯೂ ಅವಿರೋಧವಾಗಿ ಆಯ್ಕೆಯಾಗಿದ್ದರು.

ನಿರ್ದೇಶಕರುಗಳಾದ ಕರಿಯಪ್ಪ, ಸಂತೋಷ್ ಕುಮಾರ್, ವಿ.ಜಿ.ಬಾಬು, ಕೆ.ಯು.ಜೋಸೆಫ್, ಟಿ.ಟಿ.ಬೆನ್ನಿ, ಮೋನಪ್ಪ ಪೂಜಾರಿ, ಗೋಪಿ, ವೀರಪ್ಪ ಮಲೆಕುಡಿಯ, ರವೀಂದ್ರ ಗೌಡ, ಲಲಿತಾ ಮತ್ತು ಬೇಬಿ ಕೆ. ಉಪಸ್ಥಿತರಿದ್ದರು.

ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ವಿಲಾಸ್ ಚುನಾವಣಾಧಿಕಾರಿಯಾಗಿದ್ದರು

Related posts

ಮಚ್ಚಿನದಲ್ಲಿ ಗ್ರಾಮಮಟ್ಟದ ಬಾಲ ಮೇಳ ಕಾರ್ಯಕ್ರಮ

Suddi Udaya

ರಾ.ಹೆ. ಲಾಯಿಲ ಬಳಿ ತಿರುವಿನ ಸೂಚನ ಫಲಕ ಕಾಣೆ; ಸುದ್ದಿ ಉದಯ ಜನಧ್ವನಿ

Suddi Udaya

ಮೊಗ್ರು: ಸ.ಕಿ.ಪ್ರಾ. ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಛದ್ಮವೇಷ ಸ್ಪರ್ಧೆ

Suddi Udaya

ಸವಣಾಲು : ಫಲ್ಗುಣಿ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕಲ್ಮಂಜ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಜ್ಯೋತಿ ಆಸ್ಪತ್ರೆಯ ವೆಬ್‌ಸೈಟ್ ಬಿಡುಗಡೆ

Suddi Udaya
error: Content is protected !!