March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಾಕ೯ಳದಲ್ಲಿ ಚಾಕುವಿನಿಂದ ಇರಿದು ನವೀನ್ ಪೂಜಾರಿ ಹತ್ಯೆ : ಆರೋಪಿ ನಡ ಗ್ರಾಮದ ಪರೀಕ್ಷಿತ್ ಬಂಧನ

ಬೆಳ್ತಂಗಡಿ: ಮಹಿಳೆಯ ಗೆಳೆತನದ ವಿಚಾರವಾಗಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಲ್ಪಾಡಿ ಎಂಬಲ್ಲಿ ಆ.26ರಂದು ನಸುಕಿನ ವೇಳೆ ನಡೆದಿದೆ.

ಮೃತರನ್ನು ಮಂಗಳೂರು ಮೂಲದ ನವೀನ್‌ ಪೂಜಾರಿ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಬೆಳ್ತಂಗಡಿ ತಾಲೂಕು ನಡ ಗ್ರಾಮದ ನಿವಾಸಿ ಸಂಜೀವ ಗೌಡ ಎಂಬವರ ಪುತ್ರ ಪರೀಕ್ಷಿತ್(44ವ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಿನ ಜಾವ ನವೀನ್ ಪೂಜಾರಿ ಮೃತದೇಹವು ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು, ಇವರು ಚೂರಿ ಇರಿತರಿಂದ ಗಾಯಗೊಂಡು ಮೃತಪಟ್ಟಿರುವುದು ಕಂಡುಬಂದಿದೆ. ತನಿಖೆ ಮುಂದುವರೆಸಿ, ಸಿಸಿಟಿವಿಗಳನ್ನು ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಅವರನ್ನು ಪರೀಕ್ಷಿತ್ ಎಂಬಾತ ಕೊಲೆ ಮಾಡಿರುವುದು ತಿಳಿದುಬಂದಿದೆ. ಅದರಂತೆ ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕ‌ರ್ ತಿಳಿಸಿದ್ದಾರೆ.

ಆರೋಪಿ ಪರೀಕ್ಷಿತ್ ಮಂಗಳೂರಿನಲ್ಲಿ ಬಸ್‌ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಈತ ತನ್ನ ಪತ್ನಿಯಿಂದ ವಿಚ್ಛೇದನೆ ಪಡೆದು ಕಾರ್ಕಳದ ದೂಪದಕಟ್ಟೆ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸ ಮಾಡಿ ಕೊಂಡಿದ್ದಾನೆ. ಅದೇ ರೀತಿ ನವೀನ್ ಪೂಜಾರಿ ಪತ್ನಿ ಮಕ್ಕಳು ಮಂಗಳೂರಿನಲ್ಲಿ ವಾಸವಾಗಿದ್ದು, ಈತ ಅವರಿಂದ ನಾಲೈದು ವರ್ಷಗಳಿಂದ ದೂರು ಇದ್ದು ವಾಸ ಮಾಡಿಕೊಂಡಿದ್ದಾರೆ.ಆರೋಪಿ ಪರೀಕ್ಷಿತ್ ಮಂಗಳೂರಿನಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಈತ ತನ್ನ ಪತ್ನಿಯಿಂದ ವಿಚ್ಛೇದನೆ ಪಡೆದು ಕಾರ್ಕಳದ ದೂಪದಕಟ್ಟೆ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸ ಮಾಡಿ ಕೊಂಡಿದ್ದಾನೆ. ಅದೇ ರೀತಿ ನವೀನ್ ಪೂಜಾರಿ ಪತ್ನಿ ಮಕ್ಕಳು ಮಂಗಳೂರಿನಲ್ಲಿ ವಾಸವಾಗಿದ್ದು, ಈತ ಅವರಿಂದ ನಾಲೈದು ವರ್ಷಗಳಿಂದ ದೂರು ಇದ್ದು ವಾಸ ಮಾಡಿಕೊಂಡಿದ್ದಾರೆ.

ಪರೀಕ್ಷಿತ್‌ಗೆ ಪರಿಚಯ ಇರುವ ಮಹಿಳೆ ಜೊತೆ ನವೀನ್ ಪೂಜಾರಿ ಮಾತನಾಡುತಿದ್ದರು ಮತ್ತು ಗೆಳೆತನವನ್ನು ಬೆಳೆಸಿ ಆತ್ಮೀಯರಾಗಿದ್ದರು. ಇದು ಪರೀಕ್ಷಿತ್ ಇಷ್ಟ ಇಲ್ಲವಾಗಿತ್ತು. ಈ ವಿಚಾರದಲ್ಲಿ ಇವರ ಮಧ್ಯೆ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ನವೀನ್ ಪೂಜಾರಿಯನ್ನು ಪರೀಕ್ಷಿತ್‌ ಕೊಲೆ ಮಾಡಿದ್ದಾನೆ ಎಂಬುದಾಗಿ ತನಿಖೆಯಿಂದ ತಿಳಿದು ಬಂದಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

Related posts

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ತರಗತಿ ಕೊಠಡಿಗಳ ಸೂಚನಾ ಫಲಕದ ನಾವಿನ್ಯತೆ ಕಾರ್ಯಾಗಾರ

Suddi Udaya

ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವೀಲ್ ಚೆಯರ್ ವಿತರಣೆ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನೆ

Suddi Udaya

ಕೊಡಗಿನ ಕುಶಾಲನಗರದಲ್ಲಿ ನಡೆದ ಸಂಪತ್ ಎಂಬವರ ಕೊಲೆ ಪ್ರಕರಣ: ಗುರುವಾಯನಕೆರೆಯ ಶಕ್ತಿನಗರದ ಪಿಜಿಯಲ್ಲಿದ್ದ ಆರೋಪಿಯನ್ನು ಬಂಧಿಸಿದ ಕೊಡಗು ಪೊಲೀಸರು

Suddi Udaya

ಗಡಿಪಾರು ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಹೇಶ್ ಶೆಟ್ಟಿ ತಿಮರೋಡಿ

Suddi Udaya

ಮುಂಡ್ರುಪಾಡಿ ವಸಂತಿರವರ ಮನೆಯ ಮೇಲೆ ಬಿದ್ದ ಮರ: ಧರ್ಮಸ್ಥಳ ಘಟಕದ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ

Suddi Udaya
error: Content is protected !!