March 7, 2026
ಕ್ರೀಡಾ ಸುದ್ದಿ

ಪದವಿಪೂರ್ವ ಕಾಲೇಜಗಳ ತ್ರೋಬಲ್ ಪಂದ್ಯಾಟ

ಪೂಂಜಾಲಕಟ್ಟೆ :ಬೆಳ್ತಂಗಡಿ ತಾಲ್ಲೂಕಿನ ಪದವಿ ಪೂರ್ವ ಕಾಲೇಜುಗಳ ತ್ರೋ ಬಾಲ್ ಪಂದ್ಯಾಟ ಕೆ ಪಿ ಎಸ್ ಸರಕಾರಿ ಪದವಿ ಪೂರ್ವ ಕಾಲೇಜು ಪುಂಜಾಲಕಟ್ಟೆ ಯಲ್ಲಿ ಆ 1ರಂದು ನಡೆಯಿತು.

ಮಡಂತ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೂಪ ನವೀನ್ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವನೆ ಬದುಕಿನ ಸಮಸ್ತ ಬೆಳವಣಿಗೆಗೆ ಪೂರಕ ಎಂದರು. ಮುಖ್ಯ ಅತಿಥಿಯಾಗಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಾದ ಶ್ರೀ ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ದಿವಾಕರ್, ಕೀರ್ತಿ ಬಾಳಿಗ, ಉಪಾಪ್ರಾಂಶುಪಾಲರಾದ ಉದಯ ಕುಮಾರ್, ಪ್ರಭಾರ ಮುಖ್ಯಶಿಕ್ಷಕರಾದ ಅನಿತಾ ಬರೆಟ್ಟೋ, ಪಂದ್ಯಾಟದ ತೀರ್ಪುಗಾರರು, ದೈಹಿಕ ಶಿಕ್ಷಕರು, ಸಿ ಆರ್ ಪಿ ಚೇತನ ಉಪಸ್ಥಿತರಿದ್ದರು.

ಪ್ರಾಂಶುಪಾಲರಾದ ಡಾ. ಸರೋಜಿನಿ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕರಾದ ಧರನೇಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಅನ್ನಪೂರ್ಣ ಸ್ವಾಗತಿಸಿದರು. ಉಪನ್ಯಾಸಕಿ ಸುಪ್ರೀತ ವಂದನಾರ್ಪಣೆಗೈದರು. ಬಾಲಕರ ವಿಭಾಗದಲ್ಲಿ ಹತ್ತು ತಂಡ, ಬಾಲಕಿಯ ವಿಭಾಗದಲ್ಲಿ 12 ತಂಡ ಭಾಗವಹಿಸಿದರು. ಹುಡುಗರ ವಿಭಾಗದಲ್ಲಿ ಸಂತ ತೆರೆಜ ಪದವಿ ಪೂರ್ವ ಕಾಲೇಜು ವಿಜೇತರಾದರು. ಹುಡುಗಿಯರ ವಿಭಾಗದಲ್ಲಿ ವಾಣಿ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದರು. ಹುಡುಗರ ವಿಭಾಗದಲ್ಲಿ ದ್ವೀತಿಯ ಸ್ಥಾನ ಸರಕಾರಿ ಪದವಿ ಪೂರ್ವ ಬೆಳ್ತಂಗಡಿ ಮತ್ತು ಹುಡುಗಿಯರ ವಿಭಾಗದಲ್ಲಿ ದ್ವೀತಿಯ ಸ್ಥಾನ ಸಂತ ತೆರೆಜ ಪದವಿ ಪೂರ್ವ ಪಡೆದುಕೊಂಡಿದೆ. ಸಮಾರೋಪ ಸಮಾರಂಭದಲ್ಲಿ ಪಂಚಾಯತ್ ಸದಸ್ಯರಾದ ಶ್ರೀ ಹನೀಪ್, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ,ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ದಿವಾಕರ್, ತಾಲ್ಲೂಕು ಕೀಡಾ ಸಂಯೋಜಕರಾದ ಶ್ರೀ ಸಂದೀಪ್ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಹೋಲಿ ರಿಡೀಮರ್ ವಿದ್ಯಾರ್ಥಿಗಳ ಸಾಧನೆ

Suddi Udaya

ಬೆಳ್ತಂಗಡಿ ಜೆಪಿ ಅಟ್ಟಾಕ್ರ್ಸ್ ಪ್ರಾಯೋಜಕತ್ವದಲ್ಲಿ ತಾಲೂಕು ಮಟ್ಟದ ಅಂಡರ್ ಆರ್ಮ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

Suddi Udaya

ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ: ಮಚ್ಚಿನ ಸರಕಾರಿ ಪ್ರೌಢಶಾಲೆಯ ಬಾಲಕರು ಹಾಗೂ ಬಾಲಕಿಯರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಮಾಜಿ ಶಾಸಕ ದಿ. ಕೆ ವಸಂತ ಬಂಗೇರರವರ 78 ನೇ ಹುಟ್ಟು ಹಬ್ಬದ ಸವಿ ನೆನಪಿಗಾಗಿ, ಬಂಗೇರಾ ಬ್ರಿಗೇಡ್ ಬೆಳ್ತಂಗಡಿ ವತಿಯಿಂದ,ಬಿನುತಾ ಬಂಗೇರರ ನೇತೃತ್ವದಲ್ಲಿ ಮದ್ದಡ್ಕ ಬಂಡೀಮಠ ಮೈದಾನದಲ್ಲಿ ಹೊನಲು ಬೆಳೆಕಿನ ಮುಕ್ತ ಕಬಡ್ಡಿ ಪಂದ್ಯಕೂಟ

Suddi Udaya

ನಾಳ: ದ್ವಿತೀಯ ವರ್ಷದ ಶ್ರೀ ದುರ್ಗಾ ಕಪ್ ಹಿರಿಯರ ಕ್ರಿಕೆಟ್ ಪಂದ್ಯಾಟ

Suddi Udaya

ಎಸ್.ಡಿ.ಎಂ ಸ್ವಾಯತ್ತ ಕಾಲೇಜು : ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!