March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಚ್ಚಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ

ಮಚ್ಚಿನ : ಮಚ್ಚಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಇದರ ಸಹಯೋಗದೊಂದಿಗೆ ಪುಂಜಾಲಕಟ್ಟೆ ಮತ್ತು ಗುರುವಾಯನಕೆರೆ ವಲಯ ಮಟ್ಟದ 14 ರ ವಯೋಮಾನದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟವು ಮಚ್ಚಿನ ಶಾಲಾ ಕ್ರೀಡಾಂಗಣದಲ್ಲಿದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ದೀಪ ಬೆಳಗಿಸಿ ಉದ್ಘಾಟಿಸಿ ಮಕ್ಕಳ ಕ್ರೀಡೆಗೆ ಶಿಕ್ಷಕರೊಂದಿಗೆ ಮನೆಯಲ್ಲಿ ಪೋಷಕರ ತರಬೇತಿ ಇದ್ದಲ್ಲಿ ಮಕ್ಕಳು ಇನ್ನಷ್ಟು ಯಶಸ್ವಿ ಸಾಧಿಸಲು ಸಾಧ್ಯ ಎಂದು ಮಕ್ಕಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ , ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನಾರಾಯಣ ಪೂಜಾರಿ, ರಾಜ್ಯಸರಕಾರಿ ನೌಕರರ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷರು ಹಾಗೂ ಪುಂಜಾಲಕಟ್ಟೆ ಗುರುವಾಯನಕೆರೆ ಕ್ಲಸ್ಟರ್ ನೋಡಲ್ ಅಧಿಕಾರಿ ಜಯರಾಜ್, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ರವಿರಾಜ್ ಗೌಡ, ಮಚ್ಚಿನ ಪ್ರೌಢಶಾಲಾ ದೈಹಿಕ ಶಿಕ್ಷಕರಾದ ಸುಭಾಷ್, ಮಚ್ಚಿನ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹರೀಶ್, ಸಿ ಆರ್ ಪಿ ಚೇತನ, ನಿವೃತ್ತ ಶಿಕ್ಷಕರಾದ ರಘುಪತಿ ಭಟ್, ಶಾಲಾ ಮುಖ್ಯ ಶಿಕ್ಷಕಿ ಸುನಿತಾ. ಬಿ ಉಪಸ್ಥಿತರಿದ್ದರು.

ಅಂತರಾಷ್ಟ್ರೀಯ ಮಟ್ಟದ ತ್ರೋಬಲ್ ಪಂದ್ಯಾಟದಲ್ಲಿ ಸ್ಪರ್ಧಿಸಿದ ದೀಪಿಕಾ ಶೆಟ್ಟಿ ಮತ್ತು ರಾಜ್ಯ ಮಟ್ಟದ ಕಬ್ಬಡಿ ಆಟದಲ್ಲಿ ಸ್ಪರ್ಧಿಸಿದ ಶ್ರಾವ್ಯ ಕುಲಾಲ್ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಸುನೀತ ಬಿ ಸ್ವಾಗತಿಸಿದರು. ಶಾಲಾ ಶಿಕ್ಷಕಿ ವೀಣಾ ಧನ್ಯವಾದ ನೀಡಿದರು. ದಿವ್ಯ ಹೆಚ್.ಎ. ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ರುಕ್ಮಿಣಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ದಿನೇಶ್ ಎಂ. ಹರೀಶ್. ಅಶ್ರಫ್. ಕಿರಣ್ ಭಟ್. ವಿದ್ಯಾ ಹಾಗೂ ಪೋಷಕರು ಉಪಸ್ಥಿತರಿದ್ದರು. ನಂತರ ಕ್ರೀಡಾಕೂಟ ನಡೆಯಿತು. ಹುಡುಗರ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ, ಮಚ್ಚಿನ ಶಾಲೆ. ದ್ವಿತೀಯ ಗುರುವಾಯನಕೆರೆ ಶಾಲೆ ಹುಡುಗಿಯರ ವಿಭಾಗದಲ್ಲಿ ಪ್ರಥಮ ಕುವೆಟ್ಟು ಶಾಲೆ ದ್ವಿತೀಯ ಮಚ್ಚಿನ ಶಾಲೆ ವಿಜೇತರಾದರು ವಿಜೇತರಿಗೆ ಬಹುಮಾನ ವಿತರಿಸಲಾಯಿತು.

✍️ವರದಿ ಹರ್ಷ ಬಳ್ಳಮಂಜ

Related posts

ರಾಜ್ಯಮಟ್ಟದ ಕ್ರೀಡಾಕೂಟ: ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಪೂಜಾರಿ ಮರೋಡಿ ರವರಿಗೆ ಚಿನ್ನ ಹಾಗೂ ಬೆಳ್ಳಿಯ ಪದಕ

Suddi Udaya

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರಾರ್ಥನಾರಿಗೆ ಸನ್ಮಾನ

Suddi Udaya

ಕೊಕ್ಕಡ: ಮಜ್ದೂರ್ ಸಂಘದ ಕೊಕ್ಕಡ ವಲಯದ ನೂತನ ಕಛೇರಿಯ ಉದ್ಘಾಟನೆ

Suddi Udaya

ಸಾಂಸ್ಕೃತಿಕ ಸ್ಪರ್ಧೆ: ಎ ಎ ಅಕಾಡೆಮಿ ಸಹಯೋಗದ ಪ್ರಸನ್ನ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Suddi Udaya

ಕೊಕ್ಕಡ ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya
error: Content is protected !!