ಬೆಳ್ತಂಗಡಿ: ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ 2025ನೇ ಸಾಲಿನಲ್ಲಿ ನಡೆಸಿದ ಭರತನಾಟ್ಯ ಶಾಸ್ತ್ರೀಯ ನೃತ್ಯದ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಪಿಲ್ಯ ಸರಕಾರಿ ಶಾಲೆಯ ವಿದ್ಯಾರ್ಥಿ ಪ್ರಣೀತಾ ರವರು ಶೇ. 95.25 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ಪಿಲ್ಯ ಹೆನ್ಕಲ ಹೊಸಮನೆ ನಿವಾಸಿ ಶ್ರೀಮತಿ ಪ್ರತಿಮಾ ಮತ್ತು ಪ್ರವೀಣ್ ಪೂಜಾರಿ ದಂಪತಿಯ ಪುತ್ರಿ. ನಿಯತಿ ನೃತ್ಯ ನಿಕೇತನದ ನಿರ್ದೇಶಕಿ ವಿದುಷಿ ನಿಶಾ ಪ್ರಸಾದ್ ಮಾಣೂರು ಇವರ ಶಿಷ್ಯೆ.











