September 6, 2026
ಬೆಳ್ತಂಗಡಿ

ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನ ಮತ್ತು ಓಣಂ ಆಚರಣೆ

ಉಜಿರೆ: ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಭಾರತೀಯ ಆಚರಣೆಗಳನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಘದ ವತಿಯಿಂದ ಸಾಂಪ್ರದಾಯಿಕ ದಿನ ಮತ್ತು ಓಣಂ ಆಚರಣೆಯನ್ನು ಆಯೋಜಿಸಲಾಗಿತ್ತು.

ಪ್ರಾಂಶುಪಾಲರಾದ ಸಂತೋಷ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಓಣಂ ನೃತ್ಯಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಿಗಾಗಿ ಪೂಕಳಂ ಸ್ಪರ್ಧೆ, ರಾಂಪ್ ವಾಕ್ ಮತ್ತು ಸಂಗೀತ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆಚರಣೆಯ ವಿಶೇಷ ಆಕರ್ಷಣೆಯಾಗಿ ಪೂಕಳಂ ಸ್ಪರ್ಧೆ ನಡೆಯಿತು. ಇದರಲ್ಲಿ ವಿದ್ಯಾರ್ಥಿಗಳು ಓಣಂ ಹಬ್ಬದ ಸಾರವನ್ನು ಪ್ರತಿಬಿಂಬಿಸುವ ಸುಂದರ ಹೂವಿನ ವಿನ್ಯಾಸಗಳನ್ನು ಪ್ರದರ್ಶಿಸಿದರು.

ಈ ಕಾರ್ಯಕ್ರಮವು ಕ್ಯಾಂಪಸ್‌ನಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿತು.ಕಾರ್ಯಕ್ರಮದ ಸಂಯೋಜಕ ಈಶ್ವರ್ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ ಜೈನ್, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ವಿಶ್ವ ಮಹಿಳಾ ದಿನದ ಅಂಗವಾಗಿ ಆರ್ಥಿಕ ನೆರವು

Suddi Udaya

ಜನರ ಬಳಿಗೆ ತಾಲೂಕು ಆಡಳಿತ : ನಾರಾವಿಯಲ್ಲಿ ಶಾಸಕರ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ ಆರಂಭ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಸವ: 13ನೇ ವರ್ಷದ ಪಾದಯಾತ್ರೆಗೆ ಚಾಲನೆ: ಬೃಹತ್ ಸಂಖ್ಯೆಯಲ್ಲಿ ಭಕ್ತರು ಭಾಗಿ : ಭಜನಾ ತಂಡಗಳಿಂದ ವಿಶೇಷ ಕುಣಿತ ಭಜನೆ

Suddi Udaya

ಅ ಭಾ ಸಾ ಪ ಬೆಳ್ತಂಗಡಿ ತಾ| ಸಮಿತಿ ಪ್ರಥಮ ಅಧಿವೇಶನ “ತೆಂಕಣದಲ್ಲಿ ನುಡಿದಿಬ್ಬಣ “

Suddi Udaya

ಲಾಯಿಲ: ಗಾಂಧಿನಗರದಲ್ಲಿ ರಸ್ತೆಕಾಮಗಾರಿ ಲೋಕಾರ್ಪಣೆ

Suddi Udaya

ಬೆಳ್ತಂಗಡಿ: ಕಟ್ಟಡ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಶಾಸಕರಿಗೆ ಮನವಿ

Suddi Udaya
error: Content is protected !!