September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನೆರಿಯ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

ನೆರಿಯ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಸೆ.7 ರಂದು ನಡೆದ ನೆರಿಯ ಶಕ್ತಿ ಕೇಂದ್ರ ಮಟ್ಟದ ಅಭ್ಯಾಸ ವರ್ಗ ಸಭೆ ಸೇವಾ ಸಹಕಾರಿ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಕಾರ್ಯಕರ್ತರಾದ ಲೋಕಯ್ಯ ಗೌಡ ಇಟ್ಯಾಡಿ, ಸೋಂಪ ಗೌಡ ಬಾಂದಡ್ಕ, ಶಾಂತಪ್ಪ ಮಲೆಕುಡಿಯ ದೀಪ ಬೆಳಗಿಸಿ ಉದ್ಘಾಟಿಸಿದರು. ಅಭ್ಯಾಸ ವರ್ಗದ ಸಂಚಾಲಕರಾದ ಕೊರಗಪ್ಪ ಗೌಡ ಚಾರ್ಮಾಡಿ ಉದ್ಘಾಟನಾ ಭಾಷಣ ಮಾಡಿದರು.

ವೇದಿಕೆಯಲ್ಲಿ ಬಾಬು ಗೌಡ ಪರ್ಪಲ ಉಪಸ್ಥಿತರಿದ್ದರು. ಈ ಮಹಾಬಲ ಗೌಡ, ರಾಜೇಶ್ ಪೆರ್ಮುಡ, ವೃಷಾಂಕ್ ಖಾಡಿಲ್ಕರ್, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಿರಂಜನ್ ಶೆಟ್ಟಿ ಇವರುಗಳು ಬೈಠಕ್ ನೀಡಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಮಾರೋಪ ಭಾಷಣ ಮಾಡಿ, ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ನೆರೆದ ಕಾರ್ಯಕರ್ತರಿಗೆ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಉಜಿರೆ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಯಶವಂತ ಪುದುವೆಟ್ಟು, ಪಂಚಾಯತ್ ಅಧ್ಯಕ್ಷ ಶ್ರಿಮತಿ ವಸಂತಿ, ಶಕ್ತಿ ಕೇಂದ್ರದ ಪ್ರಮುಖರಾದ ವಿಶ್ವನಾಥ ದ ಗೌಡ, ಸಿಎ ಅಧ್ಯಕ್ಷ ಪ್ರಕಾಶ್ ನಾರಾಯಣ, ನೆರಿಯ ಪಂಚಾಯತ್ ಸದಸ್ಯರುಗಳು, ಬೂತ್ ಅಧ್ಯಕ್ಷರುಗಳು, ಪದಾಧಿಕಾರಿಗಳು, ಹಾಗೂ ಅನನ್ಯ ಜವಾಬ್ದಾರಿಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಡಿ.ಕೆ.ಆರ್. ಡಿ.ಎಸ್ ಬೆಳ್ತಂಗಡಿ ನೇತೃತ್ವದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ, ಕ್ಯಾನ್ಸರ್ ಜನಜಾಗೃತಿ ಅಭಿಯಾನ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya

ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನ ಫಲಿತಾಂಶ: ಶ್ರೀಧ.ಮ. ಆಂ.ಮಾ. ಶಾಲೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya

ಮೂಡುಬಿದಿರೆ: ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಲ್ಲಿ ಹೂವಿನ ಪೂಜೆ

Suddi Udaya

ವೇಣೂರು: ಮನೆಗೆ ಮರ ಬಿದ್ದು ಹಾನಿ

Suddi Udaya

‘ಸರ್ಕಾರದ ನಡೆ ಕಾರ್ಯಕರ್ತರ ಕಡೆ’ ಕಾಂಗ್ರೆಸ್ ಸಮಾವೇಶದ ಬಗ್ಗೆ ಮಚ್ಚಿನ ಕಾಂಗ್ರೆಸ್ ಗ್ರಾಮ ಸಮಿತಿ ಸಭೆ

Suddi Udaya

ಸುವರ್ಣಮಹೋತ್ಸವ ಸಂಭ್ರಮದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ: ಧರ್ಮಸ್ಥಳದಲ್ಲಿ ಸುವರ್ಣ ಪರ್ವ ಉದ್ಘಾಟನೆ

Suddi Udaya
error: Content is protected !!