37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಂಸ್ಮರಣಾರ್ಥ ಗೊರೂರು ಕಂಡ ಗಾಂಧಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಬೆಳ್ತಂಗಡಿ : ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಚಕೋರ ಸಾಹಿತ್ಯ ವಿಚಾರ ವೇದಿಕೆ ದಕ್ಷಿಣ ಕನ್ನಡ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಗೊರೂರು ಕಂಡ ಗಾಂಧಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕ ಇಲ್ಲಿನ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಮಾತನಾಡಿ ಗಾಂಧಿ ಅವರ ಕುರಿತು ಮಾತನಾಡುತ್ತಾ ಯಾರು ಎಷ್ಟೇ ತಪ್ಪು ಮಾಡಿದರು, ಎದೆಗೆ ಒದ್ದರೂ ಅವರು ತಾಯಿಯಂತೆ ಎಲ್ಲರನ್ನು ಕ್ಷಮಿಸಿ ಬಿಡುತ್ತಿದ್ದರು. ಅವರನ್ನು ಎಷ್ಟೇ ದೂರವಿರಿಸಲು ಪ್ರಯತ್ನಿಸಿದರು ಎಲ್ಲರ ಹೃದಯದಲ್ಲಿ ನೆಲೆ ನಿಂತಿರುತ್ತಾರೆ ಎಂಬಿತ್ಯಾದಿ ಹಲವಾರು ವಿಚಾರಗಳನ್ನು ಉದಾಹರಣೆಗಳ ಸಹಿತ ವಿವರಿಸಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿನ ಉಪನ್ಯಾಸಕ ಡಾ. ರಾಜಶೇಖರ್ ಹಳೆಮನೆಯವರು ಗಾಂಧೀಜಿ ಹಾಗೂ ಧರ್ಮ, ಗಾಂಧಿ ಕಂಡ ಭಗವಂತ ಯಾರು? ಅಸ್ಪರ್ಶತೆ ಆಚರಣೆಯ ವಿರುದ್ಧ ಗಾಂಧಿಯ ನಡೆ, ಮಹಿಳಾ ಸ್ವಾವಲಂಬನೆಯಲ್ಲಿ ಗಾಂಧಿಯ ನಡೆ , ದೇಶಕ್ಕೆ ಗಾಂಧಿ ಹಾಗೂ ಅಂಬೇಡ್ಕರ್ ರವರು ಎರಡು ಕಣ್ಣುಗಳು, ಹೀಗೆ ಗಾಂಧಿಯ ಸರಳ ಜೀವನ ಶೈಲಿ ಹಾಗೂ ಮಾದರಿ ಜೀವನ ಶೈಲಿಯ ಕುರಿತಾಗಿ ಗೊರೂರು ಅವರ ದೃಷ್ಟಿ ಹೇಗಿತ್ತು ಎಂಬುದನ್ನು ಸವಿವರವಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯ ಪ್ರಾಂಶುಪಾಲ ಪ್ರೊ| ಸುರೇಶ್ ವಿ ಅಧ್ಯಕ್ಷೀಯ ನುಡಿಯಲ್ಲಿ ಮಾತನಾಡುತ್ತಾ ಯುವ ಪೀಳಿಗೆ ಗಾಂಧಿಯವರ ಉತ್ತಮ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು, ಈ ಕುರಿತಾಗಿ ಅನೇಕ ಸಂಶೋಧನಾ ಕೃತಿಗಳನ್ನು ರಚಿಸಲು ಪ್ರಯತ್ನಿಸಬೇಕು ಎಂಬಿತ್ಯಾದಿ ವಿಚಾರಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಕೋರಿ ಇದರ ಸಂಚಾಲಕ ಸುಜಿತ್ , ಕನ್ನಡ ಉಪನ್ಯಾಸಕ ಪ್ರೊ| ಮಾರುತಿ ಜಿ, ಪ್ರೊ| ಸುಧಾರಾಣಿ ಎನ್ ಉಪಸ್ಥಿತರಿದ್ದರು.

ಪ್ರೊ| ಮಾರುತಿ ಜಿ ಸ್ವಾಗತಿಸಿ , ಪ್ರೊ| ಸುಧಾರಾಣಿ ಎನ್ ಧನ್ಯವಾದವಿತ್ತರು.

Related posts

ಇಂದಬೆಟ್ಟು: ಅತಿಕ್ರಮಣ ತೆರವುಗೊಳಿಸಲು ತಹಶೀಲ್ದಾರ್ ಮಾಡಿದ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಹೈಕೋರ್ಟು

Suddi Udaya

ಮಂಗಳೂರು ವಿಭಾಗ ಸಹ ಪ್ರಭಾರಿಯಾಗಿ ಜಯಂತ್ ಕೋಟ್ಯಾನ್ ನೇಮಕ

Suddi Udaya

ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಮ್ಯಾನೇಜ್ ಮೆಂಟ್ ಫೆಸ್ಟ್ ನಲ್ಲಿ ಗುರುದೇವ ಕಾಲೇಜಿಗೆ ಪ್ರಶಸ್ತಿ

Suddi Udaya

ನ.26: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಬೆಳ್ತಂಗಡಿ ಶಾಖೆಯ ಉದ್ಘಾಟನೆ

Suddi Udaya

ಇಸ್ರೇಲ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

Suddi Udaya

ಇಂದಬೆಟ್ಟು: ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ: ಹಾನಿ

Suddi Udaya
error: Content is protected !!