March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅ.19: ಉಜಿರೆ ಅನುಗ್ರಹದಲ್ಲಿ ಹಿರಿಯ ವಿದ್ಯಾರ್ಥಿಗಳ “ಅನುಗ್ರಹ ಸಮಾಗಮ”

ಬೆಳ್ತಂಗಡಿ ತಾಲೂಕಿನ ಜನಮಾನಸದಲ್ಲಿ ನೆಲೆಯಾಗಿರುವ ಅತ್ಯಂತ ಪ್ರಸಿದ್ಧ ಶಿಕ್ಷಣ ಸಂಸ್ಥೆ ಅದುವೇ ಅನುಗ್ರಹ ಶಿಕ್ಷಣ ಸಂಸ್ಥೆ. ದೇವರ ಅನುಗ್ರಹದಂತೆ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಧಾರೆ ಎರೆದ, ಅವರನ್ನು ಸಮಾಜದ ಉತ್ತಮ ವ್ಯಕ್ತಿಯಾಗಿ ಸಾಧಕನನ್ನಾಗಿ ಬದಲಿಸುತ್ತಿರುವ ಏಕೈಕ ಶಿಕ್ಷಣ ಸಂಸ್ಥೆ ಮತ್ತು ತಾಲೂಕಿನ ಪ್ರಪ್ರಥಮ ಆಂಗ್ಲ ಮಾಧ್ಯಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಕಳೆದ ವರ್ಷಗಳು ಜ್ಞಾನ ಮತ್ತು ಅನುಭವವನ್ನು ಸೇರಿಸುತ್ತವೆ ಅದೇ ರೀತಿ ಒಂದು ಸಂಸ್ಥೆಯಲ್ಲಿ ಕಳೆದಂತಹ ವರ್ಷಗಳು ಅದಕ್ಕೆ ಬೆಳವಣಿಗೆ ಮತ್ತು ಘನತೆಯನ್ನು ಸೇರಿಸಿಸುತ್ತದೆ ಕಳೆದ 46 ವರ್ಷಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ನಿರೂಪಿಸಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳು ಒಂದುಗೂಡುವುದಕ್ಕಾಗಿ “ಅನುಗ್ರಹ ಸಮಾಗಮ” ಸಮಾರಂಭವನ್ನು ಅ.19 ಆದಿತ್ಯವಾರದಂದು ಪೂರ್ವಾಹ್ನ 9.30 ಕ್ಕೆ ಸರಿಯಾಗಿ ಅನುಗ್ರಹ ಸಭಾಂಗಣದಲ್ಲಿ ಆಯೋಜಿಸಿದ್ದೇವೆ. ಕಾರ್ಯಕ್ರಮದ ಪ್ರಯುಕ್ತ ಹಿರಿಯ ವಿದ್ಯಾರ್ಥಿಗಳಿಗೆ ಲಕ್ಕಿ ಗೇಮ್ಸ್ ಸ್ಪರ್ಧೆಯನ್ನು ನಡೆಸುತ್ತಿದ್ದು ಆನಂತರ ಸಭಾ ಕಾರ್ಯಕ್ರಮ, ಮನೋರಂಜನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ. ಇದೇ ಸಂದರ್ಭದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಕೂಡ ನಡೆಯಲಿದೆ. ಬಳಿಕ ಊಟೋಪಚಾರದ ವ್ಯವಸ್ಥೆಯನ್ನು ಕೂಡ ಮಾಡಲಾಗಿದ್ದು ತಮ್ಮ ಹಳೆಯ ನೆನಪುಗಳನ್ನು ಮರುಕಳಿಸಲು ಪರಸ್ಪರ ಭೇಟಿ ಮಾಡಿ ಹೃದಯಂಗಮವಾಗಿ ಮಾತನಾಡಲು ಈ ಸಮಾಗಮವು ಒಂದು ಸುವರ್ಣಾವಕಾಶ. ನಿಮ್ಮ ಹಾಜರಾತಿಯು ನಮ್ಮ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡುತ್ತದೆ. ಆದ್ದರಿಂದ ಅನುಗ್ರಹ ವಿದ್ಯಾ ಸಂಸ್ಥೆಯ ಎಲ್ಲಾ ಹಿರಿಯ ವಿಧ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಹಾಜರಾಗಬೇಕೆಂದು ಪ್ರಾಂಶುಪಾಲರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ನಿಡ್ಲೆ ಪ್ರಾ.ಕೃ.ಪ.ಸ. ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಬೆಳ್ತಂಗಡಿ: ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ ನವಿಲು

Suddi Udaya

ಕೊಕ್ಕಡ ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya

ತಾಲೂಕು ಭಜನಾ ಪರಿಷತ್ ನ ಲಾಯಿಲ ವಲಯದ ಭಜನಾ ಮಂಡಳಿಗಳ ಪದಾದಿಕಾರಿಗಳ ಸಭೆ

Suddi Udaya

ಕೊಕ್ಕಡ ಗ್ರಾ.ಪಂ.ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂತೆಗೆತ: ಶಿಸ್ತು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ತಾ.ಪಂ. ವ್ಯವಸ್ಥಾಪಕ ಪ್ರಶಾಂತ್

Suddi Udaya

ಉಜಿರೆ: ಎಸ್.ಡಿ.ಎಂ.(ಸಿದ್ದವನ ಗುರುಕುಲ) ಡೈರಿಂಗ್ ಡಿಪ್ಲೋಮಾ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ

Suddi Udaya
error: Content is protected !!