March 7, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ “ಕಾಂಟ್ರಾಪ್ಷನ್ ಗೇಮಿಂಗ್ ಸ್ಪರ್ಧೆ”

ಉಜಿರೆ : ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ . ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಗ್ರಾಮೀಣ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ್ಯ ಒದಗಿಸುವ ಉದ್ದೇಶದಿಂದ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂಜಿನೀಯರ್ಸ್ ಡೇ ಪ್ರಯುಕ್ತ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಗೆ ಕಾಲೇಜಿನ ಸಭಾಂಗಣದಲ್ಲಿ ಕಾಂಟ್ರಾಪ್ಷನ್ ಗೇಮಿಂಗ್ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ವಹಿಸಿದ್ದರು . ವೇದಿಕೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಶ್ರೇಯಾಂಕ್ ಜೈನ್ ಉಪಸ್ಥಿತರಿದ್ದರು.

ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಕ್ರಿಸ್ಟನ್ ಡಿಸೋಜಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ನವೀನ ಯಾಂತ್ರಿಕ ಸಾಧನಗಳನ್ನು ವಿನ್ಯಾಸಗೊಳಿಸುವುದು, ನಿರ್ಮಿಸುವುದು ಮತ್ತು ಪ್ರದರ್ಶಿಸುವಲ್ಲಿ ಭಾಗವಹಿಸಿದರು, ಸ್ಪರ್ಧಾತ್ಮಕ ಮತ್ತು ಮೋಜಿನ ವಾತಾವರಣದಲ್ಲಿ ತಮ್ಮ ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಪ್ರದರ್ಶಿಸಿದರು.

ಕಾಲೇಜಿನಿಂದ ಸುಮಾರು 15 ತಂಡಗಳು ಭಾಗವಸಿದ್ದವು . ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಭರತ್ ವಂದಿಸಿದರು.

Related posts

ಮುಳಿಯ – ಹೊಸ ಲೋಗೋ- ಅನಾವರಣ : ಮುಳಿಯ ಜುವೆಲ್ಸ್ – ಇನ್ನು ಮುಂದೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್

Suddi Udaya

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿ; ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜು.21 ರಂದು ಕೆ.ಎಸ್.ಎಂ.ಸಿ.ಎ ವತಿಯಿಂದ ಬೆಳ್ತಂಗಡಿಯಲ್ಲಿ ಮೆರವಣಿಗೆ

Suddi Udaya

ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಮಹಿಳಾ ವೇದಿಕೆಯ ಪದಾಧಿಕಾರಿಗಳ ಆಯ್ಕೆ

Suddi Udaya

ರಾಷ್ಟ್ರಪತಿ ದ್ರೌಪದಿ ಮುರ್ಮು , ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಅವರಿಂದ ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯಗಳು

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯಲ್ಲಿ ಭಾವೈಕ್ಯತೆಯ ಸಂಗಮ ಕಾರ್ಯಕ್ರಮ

Suddi Udaya

ನೀರಿನಲ್ಲಿ ಕೊಚ್ಚಿ ಹೋದ ಬೈಕ್ ಪ್ರಕರಣ: ಕೂಡುಜಾಲು ಪ್ರದೇಶದಲ್ಲಿ ಅಪಾಯಕಾರಿ ಫಲಕ ಅಳವಡಿಸಿದ ಮೇಲಂತಬೆಟ್ಟು ಗ್ರಾ.ಪಂ.

Suddi Udaya
error: Content is protected !!