September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಹಾಮಂಡಲೇಶ್ವರ ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಗೌರವಾರ್ಪಣೆ : 3ನೇ ವರ್ಷದ ಶ್ರೀ ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಧರ್ಮಸ್ಥಳ: ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿ,1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ವತಿಯಿಂದ ಕನ್ಯಾಡಿ ಕ್ಷೇತ್ರದಲ್ಲಿ ಸೆ.14 ರಂದು ಗೌರವಿಸಲಾಯಿತು.

ಬಳಿಕ ಸ್ವಾಮೀಜಿಯವರು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ವತಿಯಿಂದ ಸೆ. 28 ರಂದು ನಡೆಯುವ ಮೂರನೇ ವರ್ಷದ ವಿಜೃಂಭಣೆಯ ಶ್ರೀ ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮವು ಭಗವಂತನ ಅನುಗ್ರಹದಿಂದ ಸುಸೂತ್ರವಾಗಿ ನಡೆಯಲಿ ಎಂದು ಆಶೀರ್ವದಿಸಿದರು.

ಈ‌ ಸಂದರ್ಭದಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ, ಉಪಾಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಬೊಂಟ್ರೋಟ್ಟು,ಕಾರ್ಯದರ್ಶಿ ರಂಜಿತ್ ಪೂಜಾರಿ ಮಜಲಡ್ಡ,ಕೋಶಾಧಿಕಾರಿ ಪ್ರವೀಣ್ ಕುಮಾರ್ ಹೆಚ್.ಎಸ್, ಜೊತೆ ಕಾರ್ಯದರ್ಶಿ ದಿನೇಶ್ ಪೂಜಾರಿ ನಿಟ್ಟಡ್ಕ,ನಿರ್ದೇಶಕರಾದ ಸಂತೋಷ್ ಕುಮಾರ್ ಕಾಪಿನಡ್ಕ,ಜಗದೀಶ್ ಪೂಜಾರಿ ಬಳ್ಳಿದಡ್ಡ, ದಿನೇಶ್ ಪೂಜಾರಿ ಅಂತರ,ಮನೋಹರ್ ಬಳಂಜ,ಯತೀಶ್ ವೈ.ಎಲ್ ಬಳಂಜ,ದೀಪಕ್ ಹೆಚ್.ಡಿ ಸಂಧ್ಯಾದೀಪ, ಸಂತೋಷ್ ಕುಮಾರ್ ಹಿಮರಡ್ಡ,ವಿಜಯ್ ಪೂಜಾರಿ ಯೈಕುರಿ, ರತ್ನಾಕರ ಪೂಜಾರಿ ಕೆಂಪುಂರ್ಜ, ಪ್ರದೀಪ್ ಕಾಪಿನಡ್ಕ, ಯೋಗೀಶ್ ಕೊಂಗುಳ, ಪ್ರವೀಣ್ ಡಿ ಕೋಟ್ಯಾನ್ ದರ್ಖಾಸು, ಸಂತೋಷ್ ಕಡೆಂಗಾಲು, ಸಂಘದ ಮಾಜಿ ಕಾರ್ಯದರ್ಶಿ ಸದಾನಂದ ಸಾಲಿಯಾನ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್ ಬಾಕ್ಯರಡ್ಡ ಉಪಸ್ಥಿತರಿದ್ದರು.

Related posts

ಅಭಿನಂದನ್ ಹರೀಶ್ ಕುಮಾರ್ ಮತ್ತಿತರರ ವಿರುದ್ಧದ ಸಮನ್ಸ್ ಗೆ ಜಿಲ್ಲಾ ನ್ಯಾಯಾಲಯದಿಂದ ತಡೆ

Suddi Udaya

ಬೆಳ್ತಂಗಡಿ ಸಂಜಯ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಮಳೆಲ್ ಓರ್ ನಾಲ್ ಕ್ರೀಡಾಕೂಟ

Suddi Udaya

ಬೆಳ್ತಂಗಡಿ: ಲೋಬೋ ಮೋಟಾರ್ಸ್ ನಲ್ಲಿ ಯುಗಾದಿ – ರಂಜಾನ್ ಹಬ್ಬದ ಪ್ರಯುಕ್ತ ಸ್ಪೆಷಲ್ ಆಫರ್

Suddi Udaya

ಬಳಂಜ: ಸನಾತನ ಸಂಸ್ಥೆಯಿಂದ ವಿಶೇಷ ಪ್ರವಚನ

Suddi Udaya

ಉಜಿರೆ :ಎಸ್ .ಡಿ.ಎಂ.ಶಿಕ್ಷಣ ಸಂಸ್ಥೆಯಿಂದ ರೂ 15.15 ಲಕ್ಷ ವಿದ್ಯಾರ್ಥಿ ವೇತನ ವಿತರಣೆ

Suddi Udaya

ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಂದಾರು ಗ್ರಾಮ

Suddi Udaya
error: Content is protected !!