March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತೆಕ್ಕಾರು ಇಬ್ಬನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಹಾಸಭೆ

ತೆಕ್ಕಾರು : ಇಬ್ಬನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ತೆಕ್ಕಾರು ಇದರ ಮಹಾಸಭೆ ಸೆ. 15 ರಂದು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಯಿತು.

ಮಹಾಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ ವಹಿಸಿದ್ದರು. ಒಕ್ಕೂಟದ ಅಧ್ಯಕ್ಷೆ ಹರಿಣಾಕ್ಷಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎಮ್.ಬಿ.ಕೆ ಪವಿತ್ರ ಒಂದು ವರ್ಷದ ವರದಿ ಹಾಗೂ ಜಮಾ ಖರ್ಚಿನ ವರದಿಯನ್ನು ಮಂಡಿಸಿದರು. ಅದರ ಅನುಮೋದನೆ ಪಡೆಯಲಾಯಿತು.

ಕೃಷಿ ಪತ್ತಿನ ಅಧ್ಯಕ್ಷ ಅಬ್ದುಲ್ ರಜಾಕ್ ವಲಯ ಮೇಲ್ವಿಚಾರಕರು ಸ್ವಸ್ತಿಕ್ ಜೈನ್ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕರು ಸಂಜೀವಿನಿ ಯೋಜನೆ ಬಗ್ಗೆ, ಅದರ ದೇಯೋದ್ದೇಶ ಬಗ್ಗೆ ಜೀವನೋಪಾಯ ಚಟುವಟಿಕೆ, ಒಕ್ಕೂಟದ ಬಗ್ಗೆ, ಬ್ಯಾಂಕ್ ಲೋನಿನ ಬಗ್ಗೆ, ಇತರ ಹಲವು ವಿಷಯದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು ಹಾಗೂ ಮಾದಕ ಪದಾರ್ಥಗಳ ವ್ಯಸನ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮದ ಕುರಿತು ಪ್ರತಿಜ್ಞೆಯನ್ನು ಮಾಡಿಸಿದರು. ಲಿಂಗತ್ವದ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದರು.

ಸಹಕಾರಿ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಸಂಜೀವಿನಿ ಸಂಘ ರಚನೆ ಮಾಡುವ ಹಾಗೂ ಸಹಕಾರಿ ಬ್ಯಾಂಕಿನಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಅಧಿಕಾರ ಹಸ್ತಾಂತರ ಮಾಡಲಾಯಿತು. ನಿರ್ಗಮಿತ ಪದಾಧಿಕಾರಿಗಳಿಗೆ ಸ್ಮರಣೆಗೆ ನೀಡಿ ಗೌರವಿಸಲಾಯಿತು.

ಗುರು ಕೃಪಾ ಸಂಘದ ಸದಸ್ಯೆ ಮಮತಾ ಇವರ ಪ್ರಾರ್ಥಿಸಿ, ಕೃಷಿ ಸಖಿ ದಿವ್ಯ ಸ್ವಾಗತಿಸಿದರು. ಎಲ್ ಸಿ ಆರ್ ಪಿ ಉಷಾ ಮತ್ತು ಲೀಲಾವತಿ ಕಾರ್ಯಕ್ರಮ ನಿರೂಪಿಸಿದರು. ಪಶು ಸಖಿ ವಸಂತಿ ಬಿ ಧನ್ಯವಾದವಿತ್ತರು.

Related posts

‘ಭರತನಾಟ್ಯಂ’ ಜೂನಿಯರ್ ಗ್ರೇಡ್ ಪರೀಕ್ಷೆ : ಪುತ್ತೂರು ಮೂಕಾಂಬಿಕ ಕಲ್ಚರಲ್ ಅಕಾಡೆಮಿಯ ವಿದ್ಯಾರ್ಥಿ ಧೃತಿ ಎಂ. ಪಟ್ಟೂರು ಡಿಸ್ಟಿಂಕ್ಷನ್

Suddi Udaya

ನಿಡ್ಲೆ : ಸ. ಪ್ರೌ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ- ಮದುಮಗಳ ಶೃಂಗಾರ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಮೂಡುಕೋಡಿಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿರುವ ಮತದಾನ : ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ಜನವೋ ಜನ

Suddi Udaya

ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಗೆ ಮುಖ್ಯಮಂತ್ರಿಗಳ ಸೇವಾ ಪ್ರಶಸ್ತಿ – ಎಸ್ರ ಫೌಂಡೇಶನ್ ವತಿಯಿಂದ ಸನ್ಮಾನ

Suddi Udaya

ನೇಲ್ಯಡ್ಕ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya
error: Content is protected !!