March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮುಂಡಾಜೆಯಲ್ಲಿ ಯುವವಾಹಿನಿ ಬಿರುವೆರೆ ಗೊಬ್ಬು ಕೆಸರ್ ದ ಕಂಡಡ್ ಕಾರ್ಯಕ್ರಮ

ಮುಂಡಾಜೆ : ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಯುವವಾಹಿನಿ ಸಂಚಾಲನ ಸಮಿತಿ ಮುಂಡಾಜೆ ಇದರ ಆತಿಥ್ಯದಲ್ಲಿ ಬಿರುವೆರೆ ಗೊಬ್ಬು ಕೆಸರ್ ದ ಕಂಡಡ್ ಕಾರ್ಯಕ್ರಮ ಸೆ14 ರಂದು ಮುಂಡಾಜೆಯ ಪಿಲತಡ್ಕದ ಪೂವಪ್ಪ ಪೂಜಾರಿಯವರ ಗದ್ದೆಯಲ್ಲಿ ನಡೆಯಿತು.

ಕುದ್ರೋಳಿ ದೇವಸ್ಥಾನದ ಅರ್ಚಕರಾದ ರೂಪೇಶ್ ಶಾಂತಿ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು, ಪ್ರಚಾರ ನಿರ್ದೇಶಕರಾದ ಭಾಸ್ಕರ್ ಕೋಟ್ಯಾನ್ ಸಸಿಹಿತ್ಲು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಆಗಮಿಸಿ ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಯುವವಾಹಿನಿ ಬೆಳ್ತಂಗಡಿ ಘಟಕದ ಮಾಜಿ ಅಧ್ಯಕ್ಷ ಎಂ.ಕೆ. ಪ್ರಸಾದ್, ಅಶ್ವತ್ ಕುಮಾರ್, ಹರೀಶ್ ಸುವರ್ಣ, ಸುಜಾತ ಅಣ್ಣಿ ಪೂಜಾರಿ, ಸದಾಶಿವ ಊರ, ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿಯ ನಿರ್ದೇಶಕರುಗಳಾದ ಸಂತೋಷ್ ಕೆಸಿ, ರವೀಂದ್ರ ಬಿ ಅಮೀನ್, ಜಯ ಕುಮಾರ್ ನಡ, ಸುನಿಲ್ ಕನ್ಯಾಡಿ, ನಮಿತಾ ಪೂಜಾರಿ, ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಸದಾನಂದ ಬಿ ಮುಂಡಾಜೆ ಹಾಗೂ ಬಾಬು ಪೂಜಾರಿ ಕೂಳೂರು ಇವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ವಿಠಲ್ ಸಿ ಪೂಜಾರಿ ಹೊಸಂಗಡಿ, ಅಣ್ಣಿ ಪೂಜಾರಿ ಉಜಿರೆ, ಕಿಶೋರ್ ಕುರುಡ್ಯ, ನಾರಾಯಣ ಪೂಜಾರಿ, ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಮುಂಡಾಜೆ ಗ್ರಾಮದ ಬಿಲ್ಲವರು ಹಾಗೂ ಬೆಳ್ತಂಗಡಿ ಘಟಕದ ಎಲ್ಲಾ ಸದಸ್ಯರೂ ಭಾಗವಹಿಸಿ ಕೆಸರ್ ದ ಗೊಬ್ಬು ಕಾರ್ಯಕ್ರಮದ ಸಂಭ್ರಮದಲ್ಲಿ ಪಾಲ್ಗೊಂಡರು.

ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಯುವವಾಹಿನಿ ಸಂಚಾಲನ ಸಮಿತಿ ಮುಂಡಾಜೆ ಅಧ್ಯಕ್ಷ ಕೇಶವ ಮುಂಡಾಜೆ ಸ್ವಾಗತಿಸಿದರು. ಘಟಕದ ಉಪಾಧ್ಯಕ್ಷ ಸಂತೋಷ್ ಅರಳಿ, ಕಾರ್ಯದರ್ಶಿ ಮಧುರ ರಾಘವ್, ಕೋಶಾಧಿಕಾರಿ ನಾಗೇಶ್ ಅದೆಲು, ನಿರ್ದೇಶಕರು ಹಾಗೂ ಸಂಘಟನಾ ಕಾರ್ಯದರ್ಶಿ ಪದಾಧಿಕಾರಿಗಳು ಮಹಿಳಾ ಸಂಚಾಲನ ಸಮಿತಿ ಪ್ರ. ಸಂಚಾಲಕರಾದ ಲೀಲಾವತಿ ಪನಕಜೆ ಹಾಗೂ ಪದಾಧಿಕಾರಿಗಳು, ಯುವವಾಹಿನಿ ಸಂಚಾಲನ ಸಮಿತಿ ಮುಂಡಾಜೆ ಕಾರ್ಯದರ್ಶಿ ಕು. ಜಿತೀಕ್ಷ, ಕ್ರೀಡಾ ಸಂಚಾಲಕ ಸಂತೋಷ್, ಯಶೋಧರ ಮುಂಡಾಜೆ ಹಾಗೂ ಪದಾಧಿಕಾರಿಗಳು ಸಲಹೆಗಾರರು ಉಪಸ್ಥಿತರಿದ್ದರು.

ಶಾಲಾ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲಾರೂ ಒಟ್ಟಾಗಿ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡದ್ದು ಬಹಳ ವಿಶೇಷವಾಗಿತ್ತು.

Related posts

ಪುದುವೆಟ್ಟು ಪಂಚಾಯತ್ ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿಂಧೂ ಕೆ.ಎಸ್ ಯವರಿಂದ ನಾಮಪತ್ರ ಸಲ್ಲಿಕೆ

Suddi Udaya

ಕಣಿಯೂರು ಜಿ. ಪಂ. ವ್ಯಾಪ್ತಿಯ ಮತದಾನ ಕೇಂದ್ರಕ್ಕೆ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಭೇಟಿ

Suddi Udaya

ಕಾಲು ಸೇತುವೆ ಬಿರುಕು ಸಂಪರ್ಕ ಕಡಿತ ಭೀತಿ

Suddi Udaya

ವೇಣೂರು: ನಿವೃತ್ತ ಶಿಕ್ಷಕರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಗೌರವಾರ್ಪಣೆ

Suddi Udaya

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ 17ನೇ ವರ್ಷದ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ

Suddi Udaya

ಸೆ.3: ಶ್ರೀ ರಾಮ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ರವರ ಪಟ್ಟಾಭಿಷೇಕ ವರ್ಧಂತಿ

Suddi Udaya
error: Content is protected !!