September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತಣ್ಣೀರುಪಂತ ಗ್ರಾ.ಪಂ. ನಲ್ಲಿ ಅರಿವು ಕಾರ್ಯಕ್ರಮ

ತಣ್ಣೀರುಪಂತ : ಸುಗಮ ಸಂಜೀವಿನಿ ಮಹಿಳಾ ಒಕ್ಕೂಟ ಗ್ರಾಮ ಪಂಚಾಯತ್ ತಣ್ಣೀರುಪಂತ , ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು ಇವರ ಕಾರ್ಯನ್ವಯ ಅನ್ನಪೂರ್ಣೇಶ್ವರಿ ಚಾರಿಟಿ ಪೌಂಡೇಶನ್ ಚಿಕ್ಕಮಗಳೂರು ಸಂಯುಕ್ತ ಆಶ್ರಯದಲ್ಲಿ ನವೀಕರಿಸಬಹುದಾದ ಇಂಧನ ಘನತ್ಯಾಜ್ಯ ನಿರ್ವಹಣೆ ಹಾಗೂ ಮಳೆ ನೀರು ಕೊಯ್ಲು” ವಿಷಯದ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.

ಪಂಚಾಯತ್ ಅಧ್ಯಕ್ಷೆ ಹೇಮಾವತಿ , ಉಪಾಧ್ಯಕ್ಷೆ ಪ್ರಿಯ ಮತ್ತು ಪಂಚಾಯತ್ ಮಾಜಿ ಉಪಾಧ್ಯಕ್ಷ ಆಯ್ಯಬ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರವಣ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಅನ್ನಪೂರ್ಣೇಶ್ವರಿ ಚಾರಿಟಿ ಪೌಂಡೇಶನ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿನಾಯಕ ಇವರು ಘನತ್ಯಾಜ್ಯ ನಿರ್ವಹಣೆ ಹಾಗೂ ಮಳೆ ನೀರು ಕೊಯ್ಲು ವಿಷಯದ ಕುರಿತು ಮಾಹಿತಿ ನೀಡಿದರು. ಹಾಗೂ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಆಗಮಿಸಿದ ವಿಕ್ರಂ ರವರು ಸೌರಶಕ್ತಿಯ ಬಗ್ಗೆ ವಿವರಿಸಿದರು. ಅನ್ನಪೂರ್ಣೇಶ್ವರಿ ಸಂಸ್ಥೆಯ ಮುಖ್ಯಸ್ಥೆ ಯಾದ ಸುಷ್ಮಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಪಂಚಾಯತ್ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು, ಒಕ್ಕೂಟದ ಸಿಬ್ಬಂದಿಗಳು ಉಪಸ್ಥಿತರಿದ್ದರು

Related posts

ನಾಳ ಶ್ರೀ ಕ್ಷೇತ್ರದಲ್ಲಿ ತೆನೆ ವಿತರಣೆ ಹಾಗೂ ಹೊಸ ಅಕ್ಕಿ ಊಟ

Suddi Udaya

ಮೂಡುಕೋಡಿ ನಿವಾಸಿ ಜಿನ್ನಮ್ಮ ನಿಧನ

Suddi Udaya

ಗುರುವಾಯನಕೆರೆಯಲ್ಲಿ ಸುಸಜ್ಜಿತ ವ್ಯವಸ್ಥೆಗಳನ್ನೊಳಗೊಂಡು ಆರಂಭಗೊಂಡ ಹೋಟೇಲ್ ಮಥುರಾ ಉದ್ಘಾಟನೆ

Suddi Udaya

ಸುಭಾಷ್ ಚಂದ್ರ ಬೋಸ್ ಐಕಾನ್ ಅವಾರ್ಡ್ 2025ರ ಪ್ರಶಸ್ತಿಗೆ ಭಾಜನರಾದ ರಾಜಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ

Suddi Udaya

ಅನೀಶ್ ಪೂಜಾರಿ ವೇಣೂರು ನಿರ್ದೇಶನದ ಕೊಳಂಬೆ ಕಿರುಚಿತ್ರ “ರೆಡ್ ಇನ್ಕಾರ್ನೇಷನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ-2025” ಪ್ರಶಸ್ತಿಗೆ ಆಯ್ಕೆ

Suddi Udaya

ತಮಿಳುನಾಡು ಚುನಾವಣೆ ಕರ್ತವ್ಯಕ್ಕೆ ತೆರಳಿದ ಬೆಳ್ತಂಗಡಿ ಘಟಕದ ಗೃಹರಕ್ಷಕರು

Suddi Udaya
error: Content is protected !!