September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಐ ಬೆಳ್ತಂಗಡಿ ಜೆಸಿ ಸಪ್ತಾಹ ಅಂಗವಾಗಿ ಗಣೇಶ್ ಆಸ್ಪತ್ರೆ ಇದರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಇದರ ಜೇಸಿ ಸಪ್ತಾಹದ ಅಂಗವಾಗಿ ಶ್ರೀ ಗಣೇಶ್ ವೈದ್ಯಕೀಯ ಮತ್ತು ಅಪಘಾತ ಚಿಕಿತ್ಸಾ ಕೇಂದ್ರ ಇದರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಬೆಳ್ತಂಗಡಿಯ ಬಸ್ ನಿಲ್ದಾಣದಲ್ಲಿ ನಡೆಯಿತು.

ತಾಲೂಕಿನ ಹಿರಿಯ ವೈದ್ಯ ಡಾ.ಕೆ ಶ್ರೀನಿವಾಸ್ ಡೊಂಗ್ರೆಯವರು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು. ಜೆಸಿಐ ಬೆಳ್ತಂಗಡಿಯ ಅಧ್ಯಕ್ಷೆ ಜೆಸಿ ಆಶಾಲತಾ ಪ್ರಶಾಂತ್ ಸ್ವಾಗತಿಸಿದರು ಗಣೇಶ್ ಕ್ಲಿನಿಕ್ ಇದರ ವೈದ್ಯರು ಸಿಬ್ಬಂದಿಗಳು ಸಾರ್ವಜನಿಕರ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ತಪಾಸಣೆ ಮತ್ತು ಸಲಹೆ ನೀಡಿದರು ಸುಮಾರು ನೂರಕ್ಕೂ ಹೆಚ್ಚು ಸಾರ್ವಜನಿಕರು ರಿಕ್ಷಾ ಚಾಲಕರು ಈ ಶಿಬಿರದ ಪ್ರಯೋಜನ ಪಡೆದರು. ಈ ಸಂದರ್ಭದಲ್ಲಿ ಸಪ್ತಾಹ ನಿರ್ದೇಶಕ ರಕ್ಷಿತ್ ಅಂಡಿಂಜೆ ಜೆಸಿಐ ಬೆಳ್ತಂಗಡಿಯ ಪೂರ್ವ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.

Related posts

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ

Suddi Udaya

ಮನೆಯಂಗಳದಲ್ಲಿ ನಿಂತಿದ್ದ ಕನ್ಯಾಡಿ ಅಂಡಿರ್‌ಮಾರ್ ನಿವಾಸಿ ಮಂಜಪ್ಪ ನಾಯ್ಕರ ಮೇಲೆ ಚಿರತೆ ದಾಳಿ: ಕಾಲಿಗೆ ಕಚ್ಚಿ ಗಂಭೀರ ಗಾಯ- ಬೆಳ್ತಂಗಡಿ ಆಸ್ಪತ್ರೆಗೆ ದಾಖಲು

Suddi Udaya

ಹೊಸಂಗಡಿ: ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

Suddi Udaya

ಬೆಳ್ತಂಗಡಿ ವಿಧಾನಸಭಾ ಚುನಾವಣೆ ಉಜಿರೆ ಧ.ಮಂ.ಪ.ಪೂ.ಕಾಲೇಜಿನಲ್ಲಿ ಮಸ್ಟರಿಂಗ್

Suddi Udaya

ಬೆಳ್ತಂಗಡಿ ಸಿಎ ಬ್ಯಾಂಕ್ ನ ನೂತನ ಮೀಟಿಂಗ್ ಹಾಲ್ ನವೀಕರಿಸಿ ಉದ್ಘಾಟನೆ; ಮಾಸಿಕ ಸಭೆ

Suddi Udaya

ಕಾಯರ್ತಡ್ಕ: ಇತ್ತೀಚೆಗೆ ನಿಧನರಾದ ಕುಶಾಲಪ್ಪ ನಾಯ್ಕ ರವರ ಮನೆಗೆ ಕಿರಣ್ ಚಂದ್ರ ಡಿ. ಪುಷ್ಪಗಿರಿ ಭೇಟಿ

Suddi Udaya
error: Content is protected !!