September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪೆರ್ಲ-ಬೈಪಾಡಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಮಿತಿಯ ಸಮಾಲೋಚನಾ ಸಭೆ

ಬಂದಾರು : ಡಿ.2.ರಂದು ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ಬ್ರಹ್ಮಕಲಶೋತ್ಸವದ ಸಮಾಲೋಚನಾ ಸಭೆ ನಡೆಯಿತು.

ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಗೌಡ ನಾಗಂದೋಡಿ ಅಧ್ಯಕ್ಷತೆ ವಹಿಸಿದರು.
ಬಾಲಕೃಷ್ಣ ಪೂಜಾರಿ ಬಜಗುತ್ತು ಕೊಯ್ಯೂರು ಮಾತನಾಡುತ್ತಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ವಿವಿಧ ವಿಭಾಗದ ಸಮಿತಿ ಪದಾಧಿಕಾರಿಗಳು, ಸ್ವಯಂ ಸೇವಕರು ಮನಃಪೂರ್ವಕವಾಗಿ ತೊಡಗಿಸಿಕೊಂಡು ತಮ್ಮ ಕರ್ತವ್ಯವನ್ನು ಸೇವೆ ಎಂದು ತಿಳಿದು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.


ಶ್ರೀ ಕ್ಷೇತ್ರ ಆರಿಕೋಡಿ ಧರ್ಮದರ್ಶಿಗಳಾದ ಹರೀಶ್ ಅವರು ಮಾರ್ಗದರ್ಶನ ನೀಡಿ ಅರಿಕೋಡಿ ಶ್ರೀ ಕ್ಷೇತ್ರದ ಮೂಲಕ ಬ್ರಹ್ಮ ಕಲಶೋತ್ಸವ ಪುಣ್ಯ ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಹೇಳಿದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತರಾಮ ಶಬರಾಯ, ಅಭಿವೃದ್ಧಿ ಸಮಿತಿ, ಬ್ರಹ್ಮ ಕಲಶೋತ್ಸವ ಸಮಿತಿ, ಮಹಿಳಾ ಸಮಿತಿ ಹಾಗೂ ವಿವಿಧ ಸಮಿತಿ ಸಂಚಾಲಕ-ಸಹಸಂಚಾಲಕರು ಉಪಸ್ಥಿತರಿದ್ದರು.


ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾಜೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಅನುವಂಶಿಕ ಮೊಕ್ತೇಸರು ಕುಕ್ಕುಪ್ಪ ಗೌಡ, ತಿಮ್ಮಪ್ಪ ಗೌಡ ಸೋಣಕುಮೇರು ,ಅಡಳಿತ ಮಂಡಳಿ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು ಉಪಸ್ಥಿತರಿದ್ದರು.

Related posts

ಅರಸಿನಮಕ್ಕಿ: ಉಡ್ಯೆರೆ ನಿವಾಸಿ ಪೂವಪ್ಪ ಗೌಡ ಹೃದಯಾಘಾತದಿಂದ ನಿಧನ

Suddi Udaya

ಲೋಕಸಭಾ ಚುನಾವಣೆಯಲ್ಲಿ ಕೆ. ಆರ್.ಎಸ್. ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಮಹೇಶ್ ಶೆಟ್ಟಿ ತಿಮರೋಡಿ ರವರಿಗೆ ಮನವಿ

Suddi Udaya

ಉಜಿರೆ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಯುಗಾದಿ ಹಾಗೂ ರಂಝಾನ್ ಹಬ್ಬದ ಪ್ರಯುಕ್ತ ವಿಶೇಷ ಆಫರ್: ಪ್ರತಿ ಖರೀದಿ ಮೇಲೆ ಶಾಪಿಂಗ್ ವೊಚರ್

Suddi Udaya

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 8 ನಿರ್ದೇಶಕರ ಸ್ಥಾನಗಳಿಗೂ ಅವಿರೋಧ ಆಯ್ಕೆ

Suddi Udaya

ವಿಧಾನಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್

Suddi Udaya

ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್‌ ಮತ್ತು ರೇಂಜರ್ಸ್‌ ದಳದಿಂದ ಚಾರಣ, ಸ್ವಚ್ಚತಾ ಆಂದೋಲನ ಮತ್ತು ಯುವ ದಿನಾಚರಣೆ

Suddi Udaya
error: Content is protected !!