September 6, 2026
ಧಾರ್ಮಿಕ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಚಂಡಿಕಾಯಾಗ-ಸತ್ಯದರ್ಶನ ಸಮಾವೇಶ: ಬೆಳ್ತಂಗಡಿ ತಾಲೂಕಿನಾದ್ಯಂತದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗಿ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕ್ಷೇತ್ರದ
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಕಳೆದ ಕೆಲವಾರು ವರ್ಷಗಳಿಂದ ನಡೆಯುತ್ತಾ ಬಂದಿರುವ ಷಡ್ಯಂತ್ರದ ಪೊರೆ ಕಳಚುತ್ತಿದ್ದು, ಇಡೀ ದೇಶಕ್ಕೆ ಸತ್ಯದ ಅನಾವರಣ ಆಗುತ್ತಿದೆ. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪಾವಿತ್ರತೆ ಹಾಗೂ ಪೂಜ್ಯ ಹೆಗ್ಗಡೆಯವರ ನಿಷ್ಕಲ್ಮಷ ವ್ಯಕ್ತಿತ್ವದ ಶ್ರೇಷ್ಠತೆಯನ್ನು ಹಿಂದಿನಿಂದಲೂ ಒಪ್ಪಿಕೊಂಡು ಬಂದ ಬೆಳ್ತಂಗಡಿ ತಾಲೂಕಿನ ಸಮಸ್ತ ಭಕ್ತಾದಿಗಳು ಒಟ್ಟಾಗಿ ದೈವ-ದೇವರುಗಳಿಗೆ ತಮ್ಮ ಕೃತಜ್ಞತೆಯನ್ನು ಅರ್ಪಿಸುವ ಮತ್ತು ಸತ್ಯ, ನ್ಯಾಯದ ಜೊತೆಗೆ ನಾವು ಎಂದಿಗೂ ಇರುತ್ತೇವೆ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಸೆ.28ರಂದು ಅಮೃತವರ್ಷಿಣಿ ಸಭಾಂಗಣದಲ್ಲಿ ಒಂದಾಗಿ
ಪವಿತ್ರವಾದ ಚಂಡಿಕಾ ಯಾಗ ಮತ್ತು ಸತ್ಯ ದರ್ಶನ ಸಮಾವೇಶವನ್ನು ಭಕ್ತಿ ಭಾವದಿಂದ ನಡೆಸಿದರು.

ಶ್ರೀ ಚಂಡಿಕಾಯಾಗಕ್ಕೆ ತಾಲೂಕಿನ ಎಲ್ಲಾ ಗ್ರಾಮಗಳ ವತಿಯಿಂದ ಸಮರ್ಪಿಸಲ್ಪಡುವ ಫಲ-ಪುಷ್ಪಗಳ ಸಮರ್ಪಣೆಯನ್ನು ಪೂರ್ವಾಹ್ನ ಶ್ರೀ ಕ್ಷೇತ್ರದ ಮಹಾದ್ವಾರದಿಂದ, ಅಮೃತವರ್ಷಿಣಿ ಸಭಾಂಗಣದ
ಯಾಗ ಮಂಟಪಕ್ಕೆ ಮೆರವಣಿಗೆ‌ಮೂಲಕ ತರಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಕುಟುಂಬಸ್ಥರು, ಗಣ್ಯರ ಉಪಸ್ಥಿತಿಯಲ್ಲಿ ಯಾಗದ ಪೂರ್ಣಾಹುತಿಯು ವೇದ ವಿದ್ವಜ್ಜನರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರ ಪಾಲ್ಗೊಂವಿಕೆಯಲ್ಲಿ ನಡೆಯಿತು .
ನಂತರ ನಡೆದ ಸತ್ಯ ದರ್ಶನ ಸಮಾವೇಶದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡಿದರು.
ಶ್ರೀಮತಿ ಡಾ.ಡಿ. ಹೇಮಾವತಿ ವಿ. ಹೆಗ್ಗಡೆ,ಎಸ್ ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಸುರೇಂದ್ರ ಕುಮಾರ್, ಎಸ್ ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶ ಡಿ. ಹರ್ಷೇಂದ್ರಕುಮಾರ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ,ಉಜಿರೆ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ವಸಂತ ಸಾಲ್ಯಾನ್,ಸುರೇಂದ್ರ ಕುಮಾರ್ , ಶ್ರೀ ಚಂಡಿಕಾಯಾಗ ಮತ್ತು ಸತ್ಯದರ್ಶನ ಸಮಾವೇಶ ಸಂಚಾಲನಾ ಸಮಿತಿಯ ಸಂಚಾಲಕರುಗಳಾದ ಉದ್ಯಮಿ ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಉಜಿರೆ, ಉದ್ಯಮಿ ರಾಜೇಶ್ ಪೈ ಉಜಿರೆ, ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ , ಸುಪ್ರಿಯಾ ಹರ್ಷೇಂದ್ರ ಕುಮಾರ್, , ಶ್ರದ್ಧಾ ಅಮಿತ್ ವೀರೂ ಶೆಟ್ಟಿ, ಪೂರನ್ ವಮ೯ ಮೊದಲಾದವರು ಉಪಸ್ಥಿತರಿದ್ದರು. ಪೂಜ್ಯ ಖಾವಂದರಿಗೆ ಗೌರವಾರ್ಪಣೆ ನೆರವೇರಿಸಲಾಯಿತು.
ಸತ್ಯ ದರ್ಶನ ಸಮಾವೇಶದ ಕುರಿತು ಡಾ. ಪ್ರದೀಪ್ ನಾವೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್ ಡಿ.ಎಂ ವಿದ್ಯಾರ್ಥಿಗಳ ಪ್ರಾರ್ಥನೆ ಬಳಿಕ ತಾಲೂಕು ಸಂಚಾಲಕ ಸುಬ್ರಹ್ಮಣ್ಯ ಅಗರ್ತ ಸ್ವಾಗತಿಸಿದರು.ಪ್ರಸಾದ್ ಬಿ.ಎಸ್ ಧನ್ಯವಾದ ಸಮರ್ಪಿಸಿದರು. ಡಾ. ಸುವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಕಾಯ೯ಕ್ರಮದಲ್ಲಿ ತಾಲೂಕಿನಾದ್ಯಂತದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

Related posts

ಫೆ.1-5: ನಿಟ್ಟಡೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರ ಬರ್ಕಜೆಯಲ್ಲಿ 9ನೇ ವರ್ಷದ ಜಾತ್ರಾ ಮಹೋತ್ಸವ

Suddi Udaya

ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ 15ನೇ ವರ್ಷದ ಸಾಮೂಹಿಕ ವಿವಾಹವಧು-ವರರ ವೈಭವದ ದಿಬ್ಬಣ ಮೆರವಣಿಗೆಗೆ ಚಾಲನೆ,

Suddi Udaya

ಪಡಂಗಡಿ: ಶ್ರೀ ಕ್ಷೇತ್ರ. ಓಡೀಲು ಶ್ರೀ ಮಾಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧoತ್ಯುತ್ಸವ

Suddi Udaya

ಫೆ.12-13: ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ಮಾಚಾರು: ಬದನಾಜೆ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯ 45ನೇ ವರ್ಷದ ಶಾರದಾ ಪೂಜೆ

Suddi Udaya

ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇಪಾಳದ ಬುದ್ಧ ಭಗವಾನ್ ರವರ ಪರಮ ಪವಿತ್ರ ಕ್ಷೇತ್ರವಾದ ಲುಂಬಿನಿ ಮತ್ತು ಕಪಿಲವಸ್ತು ಕ್ಷೇತ್ರಗಳಿಗೆ ಭೇಟಿ

Suddi Udaya
error: Content is protected !!