ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸವಣಾಲು ಅ.ಹಿ.ಪ್ರಾ. ಶಾಲೆಗೆ ಮೇಲಂತಬೆಟ್ಟು ಗ್ರಾ.ಪಂ. ವತಿಯಿಂದ ಪುಸ್ತಕ ಹಾಗೂ ಪೀಠೋಪಕರಣಗಳ ಉದ್ಘಾಟನೆ

ಸವಣಾಲು: ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸವಣಾಲು ಇಲ್ಲಿಗೆ ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ವತಿಯಿಂದ ಗ್ರಂಥಾಲಯಕ್ಕೆ ನೀಡಲಾದ ಪುಸ್ತಕಗಳು ಹಾಗೂ ಪೀಠೋಪಕರಣಗಳನ್ನು ಸ್ವೀಕರಿಸಿ ಅ.01ರಂದು ಉದ್ಘಾಟನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಮೇಲಂತಬೆಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷೆ ಸವಿತಾ ವಹಿಸಿದರು.
ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಪ್ರಭಾಕರ ಆಚಾರ್ಯ , ವಿಜಯಲಕ್ಷ್ಮೀ., ಸ್ಥಳೀಯರಾದ ರಘುರಾಮ ಗಾಂಭೀರ, ಕೃಷ್ಣಪ್ಪ ಗೌಡ ಪ್ರಗತಿಪರ ಕೃಷಿಕರು, ದಯಾನಂದ ರೈ ಅಧ್ಯಕ್ಷರು ಶಾಲಾಡಳಿತ ಸಮಿತಿ, ಲಿಯೋ ಅಧ್ಯಕ್ಷೆ ಡಾ.ಭಾಷಿಣಿ, ಮುಖ್ಯೋಪಾಧ್ಯಾಯ ಜಿ ಮಂಜುನಾಥ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲಾಡಳಿತ ಸಮಿತಿಯ ಪದಾಧಿಕಾರಿಗಳು, ಶಾಲಾಭಿವೃದ್ಧಿ , ಸಮಿತಿಯ ಪದಾಧಿಕಾರಿಗಳು, ಶಾಲೆಯ ವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಸವಣಾಲು ಫಲ್ಗುಣಿ ಮಹಿಳಾ ಭಜನಾ ಮಂಡಳಿಯ ಪದಾಧಿಕಾರಿಗಳು ,
ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯೋಪಾಧ್ಯಯರು ಸ್ವಾಗತಿಸಿದರು. ರಾಜೇಶ್ ಕೆ ಕಾರ್ಯಕ್ರಮ ನಿರೂಪಿಸಿದರು

Related posts

ಯುವ ಕಾಂಗ್ರೆಸ್ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಪವನ್ ಸಾಲ್ಯಾನ್ ಆಯ್ಕೆ

Suddi Udaya

ಉಜಿರೆಯಲ್ಲಿ ಅಣಬೆ ಕೃಷಿ ಹಾಗೂ ಸಾವಯವ ಕೃಷಿ ಬಗ್ಗೆ ತರಬೇತಿ

Suddi Udaya

ಕೊಕ್ಕಡ ಕೇಸರಿ ಟೈಗರ್ಸ್ ವತಿಯಿಂದ ನಗರ ಭಜನಾ ಸಪ್ತಾಹ ಅಂಗವಾಗಿ 3ನೇ ವರ್ಷದ ಪಿಲಿ ನಲಿಕೆ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಡ ಪ್ರೌಢ ಶಾಲೆ ಹಾಗೂ ಕಾಲೇಜಿಗೆ ನುಗ್ಗಿದ ಕಳ್ಳರು: ಸಿಸಿ ಕ್ಯಾಮರ ಹಾಗೂ ದಾಖಲೆ ಪತ್ರಗಳಿಗೆ ಹಾನಿ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ ಮತ್ತು ಅಧಿಕಾರಿಗಳಿಗೆ ಬೆದರಿಕೆ ವಿರುದ್ಧ ಬೆಳ್ತಂಗಡಿಯಲ್ಲಿ ಎಸ್‌ಡಿಪಿಐ ಪ್ರತಿಭಟನೆ

Suddi Udaya
error: Content is protected !!