ಬೆಳ್ತಂಗಡಿ: ಕಳೆದ ಹಲವಾರು ವರ್ಷಗಳಿಂದ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಶೀತಲ್ ಜೈನ್ ಅವರ ಮಾಲಕತ್ವದ ಪವರ್ ಆನ್ ಬ್ಯಾಟರಿ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದ್ದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬರುತ್ತಿದೆ.ನವರಾತ್ರಿಯ ವಿಜಯ ದಶಮಿ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಶ್ರೀ ಲಕ್ಕಿ ಪೂಜೆ, ಆಯುಧ ಪೂಜೆ, ವಾಹನ ಪೂಜೆಯನ್ನು ಅ.2 ರಂದು ನಡೆಸಲಾಯಿತು.

ಈ ಸಂದರ್ಭದಲ್ಲಿ ಪವರ್ ಆನ್ ಸಂಸ್ಥೆಯ ಮಾಲಕ ಶೀತಲ್ ಜೈನ್ ಅವರ ತಂದೆಯವರಾದ ಪಾರ್ಶ್ವನಾಥ ಜೈನ್ ಶಿರ್ಲಾಲು,ಕಾಂಪ್ಲೆಕ್ಸ್ ಮಾಲಕರಾದ ರಾಮ್ ದಾಸ್ ಪೈ,ಮಂಜುನಾಥ ಪೈ, ಕೆಡಿಪಿ ಸದಸ್ಯ ಸುನಿಲ್ ಕುಮಾರ್ ಜೈನ್ ಶಿರ್ಲಾಲು, ನ್ಯೂ ಆಯಾನ್ಸ್ ಮೊಬೈಲ್ ಸಂಸ್ಥೆಯ ಮಾಲಕ ಅರಿಹಂತ್ ಜೈನ್, ಸುದ್ದಿ ಉದಯ ಪತ್ರಿಕೆಯ ಮುಖ್ಯಸ್ಥರಾದ ಸಂತೋಷ್ ಪಿ ಕೋಟ್ಯಾನ್ ಬಳಂಜ,ಸುಧೀರ್ ಕುಮಾರ್ ಜೈನ್ ಮತ್ತು ಸಿಬ್ಬಂದಿ ವರ್ಗದವರು,ಬಂಧು-ಮಿತ್ರರು ಉಪಸ್ಥಿತರಿದ್ದರು.

ಆಗಮಿಸಿದ ಅತಿಥಿ ಗಣ್ಯರನ್ನು ಪವರ್ ಆನ್ ಸಂಸ್ಥೆಯ ಮಾಲಕ ಶೀತಲ್ ಜೈನ್-ಮಾನಸ ಶೀತಲ್ ಸ್ವಾಗತಿಸಿ, ಸತ್ಕರಿಸಿದರು.











