March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ವಾಣಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ಸಮಾರಂಭ

‌‌ ಬೆಳ್ತಂಗಡಿ: ಯುವಜನರು ಜೀವನ ಕೌಶಲ್ಯಗಳನ್ನು ಕಲಿತುಕೊಂಡು ಉತ್ತಮ ಬದುಕನ್ನು ನಡೆಸುವುದರೊಂದಿಗೆ ರಾಷ್ಟ್ರ ಸೇವೆಯಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಶ್ರೀರಾಮ ಶಾಲೆ, ಸುಲ್ಕೇರಿ ಇದರ ಉಪಾಧ್ಯಕ್ಷ ಚಂದ್ರಕಾಂತ ಗೋರೆ ಹೇಳಿದರು.

ಅವರು ವಾಣಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಮಾರೋಪ ಭಾಷಣ ಮಾಡುತ್ತಾ, ಆಧುನಿಕ ಸಮಾಜದಲ್ಲಿ ತಂತ್ರಜ್ಞಾನದ ಹೆಚ್ಚಿನ ಬಳಕೆಯಿಂದ ಯುವ ಜನರು ಶ್ರಮ ಸಂಸ್ಕೃತಿಯನ್ನು ಮರೆತು ಎಲ್ಲವನ್ನು ಸುಲಭವಾಗಿ ಗಳಿಸಿಕೊಳ್ಳಲು ಪ್ರಯತ್ನಿಸುವುದು ವಿಪರ್ಯಾಸವಾಗಿದೆ. ಶಿಕ್ಷಣ ಅಂಕಧಾರಿತ ಮಾತ್ರವಾಗಿರದೆ ಜೀವನ ಮೌಲ್ಯಗಳನ್ನು ಗಳಿಸಿಕೊಳ್ಳುವಂತಿರಬೇಕು. ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಯಶಸ್ಸನ್ನು ಗಳಿಸಬಹುದು ಎಂದರು.

ವಾಣಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ನಾರಾಯಣಗೌಡ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಧರ್ನಪ್ಪ ಗೌಡ ಬಾನಡ್ಕ, ಕೋಶಾಧಿಕಾರಿ ಯುವರಾಜ್ ಅನಾರ್, ವಾಣಿ ಸೌಹಾರ್ದ ಬ್ಯಾಂಕ್ ನ ನಿರ್ದೇಶಕರಾದ ಪುರಂದರ ಗೌಡ ಮುಗೇರಡ್ಕ, ಸುಲ್ಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗಿರಿಜಾ, ಉಪಾಧ್ಯಕ್ಷರಾದ ಶುಭಕರ ಪೂಜಾರಿ, ಸದಸ್ಯರಾದ ರವಿ ಪೂಜಾರಿ, ಸುಲ್ಕೇರಿ ಶ್ರೀರಾಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ರಾಜು ಪೂಜಾರಿ, ಮುಖ್ಯೋಪಾಧ್ಯಾಯರಾದ ಪ್ರಮೋದ್, ನಾರಾವಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಸದಾನಂದ ಗೌಡ ಮಜ್ಜೋಡಿ, ನಾರಾವಿ ವಲಯ ಎಸ್ ಕೆ ಡಿ ಆರ್ ಡಿ ಪಿ ಮೇಲ್ವಿಚಾರಕರಾದ ಶ್ರೀಮತಿ ವಿಶಾಲ ಕೆ ಉಪಸಿತರಿದ್ದರು.

ಎನ್ಎಸ್ಎಸ್ ಸಹಕಾರ್ಯಕ್ರಮಾಧಿಕಾರಿ ಶ್ರಾವ್ಯ ವರದಿ ವಾಚಿಸಿದರು. ಘಟಕ ನಾಯಕ ತೀರ್ಥೇಶ್ ಹಾಗೂ ನಾಯಕಿ ಸುಶ್ಮಿತಾ ಅನಿಸಿಕೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ ಸ್ವಾಗತಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ದಿನೇಶ್ ಗೌಡ ಯು ಧನ್ಯವಾದವಿತ್ತರು. ಉಪನ್ಯಾಸಕ ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿದರು.

Related posts

ಮಾಚಾರಿನಲ್ಲಿ ಮಹಿಳೆಯೋರ್ವರ ಶವ ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ: ಸ್ಥಳಕ್ಕೆ ಪೊಲೀಸರ‌ ಆಗಮನ ಮುಂದುವರಿದ ತನಿಖೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ಮುಖ್ಯಕಾರ್ಯನಿರ್ವಹರ್ಣಾಧಿಕಾರಿಯಾಗಿ ಶಶಿಧರ ನೇಮಕ

Suddi Udaya

ತೋಟತ್ತಾಡಿ: ಹಾಡು ಹಗಲೇ ಮನೆಯ ಬಾಗಿಲ ಬೀಗವನ್ನು ಮುರಿದು ಗಾದ್ರೇಜ್‌ನ ಲಾಕರ್ ನಲ್ಲಿಟ್ಟಿದ್ದ ರೂ. 1.30 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಕೆನರಾ ಬ್ಯಾಂಕಿನ ಡಿಜಿಎಮ್ , ಮಂಗಳೂರು ರೀಜಿನಲ್ ಮೆನೇಜರ್ ಹಾಗೂ ರುಡ್ ಸೆಟ್ ಅಧಿಕಾರಿಗಳು ಭೇಟಿ: ದೇವರಿಗೆ ರಂಗಪೂಜೆ ಸೇವೆ

Suddi Udaya

ಮದ್ದಡ್ಕ ಪೇಟೆಯಲ್ಲಿ ಸರ್ವಿಸ್ ವಯಾರು ತೆಗೆಯುವಂತೆ ಸ್ಥಳೀಯರ ಒತ್ತಾಯ

Suddi Udaya

ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದಲ್ಲಿ ಧರ್ಮಸ್ಥಳದ ಡಾ.ಚಿರನ್ವಿ ಜೈನ್ ಗೆ ಪದವಿ

Suddi Udaya
error: Content is protected !!