September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೆರಿಯ: ಮನೆಗೆ ಬೆಂಕಿ ತಗುಲಿ ಹಾನಿಯಾದ ಕುಟುಂಬಕ್ಕೆ ಕಿರಣ್ ಚಂದ್ರ ಪುಷ್ಪಗಿರಿಯವರಿಂದ ಧನಸಹಾಯ ಹಸ್ತಾಂತರ

ನೆರಿಯ: ಗಂಡಿಬಾಗಿಲು ನಿವಾಸಿ ಹರೀಶ್ ವಿ. ನೆರಿಯ ಅವರ ಮನೆಯಲ್ಲಿ ಅ.6ರಂದು ರಾತ್ರಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಮನೆಗೆ ಸಂಪೂರ್ಣವಾಗಿ ಹಾನಿಯಾಗಿದ್ದು.ಕಿರಣ್ ಚಂದ್ರ ಡಿ ಪುಷ್ಪಗಿರಿರವರ ನೇತೃತ್ವದಲ್ಲಿ ಪುಷ್ಪಗಿರಿ ತಂಡದ ಸದಸ್ಯರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕಿರಣ್ ಚಂದ್ರ ರವರ ಸಲಹೆ ಮೇರೆಗೆ ಮನೆ ಪುನರ್ ನಿರ್ಮಾಣ ಕಾರ್ಯಕ್ಕೆ ರೂ.25 ಸಾವಿರ ಧನ ಸಹಾಯ ಮಾಡಿದರು.

ಈ ಸಂದಭದಲ್ಲಿ ಮಾತನಾಡಿದ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಮನೆಯ ದುರಸ್ತಿ ಕಾರ್ಯಕ್ಕೆ ಇನ್ನಷ್ಟು, ಆರ್ಥಿಕವಾಗಿ ಸಹಾಯ ಮಾಡುವುದಾಗಿ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಉಜಿರೆ ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಬಾಬು ಗೌಡ ನೆರಿಯ, ತೋಟತ್ತಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ಓಬಯ್ಯ ಗೌಡ ಚಿಬಿದ್ರೆ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪ್ರಮೋದ್ ದಿಡುಪೆ, ಭರತ್ ಹಾಗೂ ಊರಿನ ಹಲವಾರು ಗಣ್ಯರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ದಲಿತ ಮುಖಂಡ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ, ಚಂದು ಎಲ್. ನಿಧನ

Suddi Udaya

ಫೆ.8-12: ಕೊಯ್ಯೂರು ಬದಿನಡೆ ಶ್ರೀ ವನದುರ್ಗಾ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya

ಟೀಮ್ ನವ ಭಾರತ್ ಬೆಳ್ತಂಗಡಿ ಆಶ್ರಯದಲ್ಲಿ ದಿವಂಗತ ತುಷಾರ್ ಕೆ ಇವರ ಸ್ಮರಣಾರ್ಥ ತಾಲೂಕು ಮಟ್ಟದ ಹೊನಲ ಬೆಳಕಿನ ವಾಲಿಬಾಲ್ ಪಂದ್ಯಾಟ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಮೆಡಿಕಲ್ ಯೂನಿರ್ವಸಿಟಿ ಉಪಕುಲಪತಿ ಭೇಟಿ

Suddi Udaya

ಕೆರೆಯಲ್ಲಿ ಸ್ನಾನಕ್ಕಿಳಿದ ಯುವಕ ಸಾವು

Suddi Udaya

ಕಾರ್ಗಿಲ್ ವಿಜಯೋತ್ಸವಕ್ಕೆ ಬೆಳ್ತಂಗಡಿ ಟಿವಿಎಸ್ ಲೋಬೋ ಮೋಟಾರ್ಸ್ ನಿಂದ ದೇಶಭಕ್ತಿಯ ನಮನ: ಬೈಕ್ ರ್ಯಾಲಿ ಮೂಲಕ ವೀರ ಯೋಧರ ತ್ಯಾಗ-ಬಲಿದಾನಕ್ಕೆ ಗೌರವ

Suddi Udaya
error: Content is protected !!