March 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಮೇಲಂತಬೆಟ್ಟು: ಅಕ್ರಮ ಕೋಳಿ ಅಂಕದ ಅಡ್ಡಕ್ಕೆ ಪೊಲೀಸರ ದಾಳಿ

ಬೆಳ್ತಂಗಡಿ; ಮೇಲಂತಬೆಟ್ಟುವಿನಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿಅಂಕಕ್ಕೆ ಪೊಲೀಸರು ದಾಳಿ ನಡೆಸಿದ್ದು ಮೂವರನ್ನು ಬಂಧಿಸಿ ಕೋಳಿಗಳು ಹಾಗೂ ಹಣ ವಶಪಡಿಸಿಕೊಂಡಿದ್ದು ಪ್ರಕರಣ‌ ದಾಖಲಿಸಿದ್ದಾರೆ.ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ‌ ಖಾಸಗಿ ಜಾಗದಲ್ಲಿ ಅಕ್ರಮ ಕೋಳಿ ಅಂಕ ಹಾಗೂ ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ಬೆಳ್ತಂಗಡಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಕುಲಜ್ಯೀತಿ ತಿಲಕ್ ಹಾಗೂ ತಂಡ ಅ.17 ರಂದು ದಾಳಿ ನಡೆಸಿದ್ದು ಈ ವೇಳೆ ಅಲ್ಲಿದ್ದವರು ಓಡಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದರು.

ಆದರೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ಶೇಖರ ಹೆಗ್ಡೆ, ಪುನೀತ್, ಜಗದೀಶ್ ಎಂಬವರಾಗಿದ್ದಾರೆ. ಓಡಿ ತಪ್ಪಿಸಿಕೊಂಡ ಆರೋಪಿಗಳಾದ ಉದಯ್, ಜನಾರ್ಧನ ಗೌಡ ಮಲ್ಲೊಟ್ಟು ಎಂಬವರಾಗಿದ್ದಾರೆ.ಸ್ಥಳದಿಂದ ಐದು ಕೋಳಿಗಳನ್ನು ವಶಪಡಿಸಿಕೊಂಡಿದ್ದು 500ರೂ ನಗದನ್ನು ಹಾಗೂ ದ್ವಿಚಕ್ರ ವಾಹನವೊಂದನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಐದು ಜನ ಆರೋಪಿಗಳ ವಿರುದ್ಧ ಅ.17 ರಂದು ಕಲಂ 87 KP Act ಜೊತೆಗೆ ಕಲಂ 11(1)(a),11(1)(n) PREVEBTION OF CRUELTY TO ANIMAL ACT 1960 ಯಂತೆ ಪ್ರಕರಣ ದಾಖಲಾಗಿದೆ.

Related posts

ರಕ್ಷಿತ್ ಶಿವರಾಂ ಮನವಿಗೆ ಸ್ಪಂದನೆ: ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯಲ್ಲಿ ಆಂಗ್ಲ ಮಾದ್ಯಮ (ದ್ವಿಭಾಷಾ ಮಾದ್ಯಮ ) ತರಗತಿಗಳನ್ನು ಪ್ರಾರಂಭಿಸಲು ಸರ್ಕಾರದಿಂದ ಅನುಮತಿ

Suddi Udaya

ಸೌತಡ್ಕ ಬಯಲು ಗಣಪನಿಗೆ ವಾರ್ಷಿಕ ಮೂಡಪ್ಪ ಸೇವೆಯ ಸಂಭ್ರಮ   

Suddi Udaya

ಎಸ್.ಎಸ್.ಎಫ್ ಬೆಳ್ತಂಗಡಿ ಡಿವಿಷನ್ ನಾಯಕರ ಸೆಕ್ಟರ್ ಭೇಟಿ

Suddi Udaya

ಎಸ್.ಎಸ್.ಎಲ್.ಸಿ ಮರು ಮೌಲ್ಯ ಮಾಪನ: ಲಾಯಿಲ ವಿದ್ಯಾರ್ಥಿನಿ ತನ್ವಿ ಭಟ್ ಎಂ ಅವರಿಗೆ 624 ಅಂಕ, ರಾಜ್ಯಕ್ಕೆ 2 ನೇ ಸ್ಥಾನ, ಬೆಳ್ತಂಗಡಿ ತಾಲೂಕಿಗೆ ಪ್ರಥಮ

Suddi Udaya

ಕುತ್ಲೂರು ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರಾಗಿ ಪ್ರಜ್ಞೇಶ್ ಆಯ್ಕೆ

Suddi Udaya

ಲೋಕಸಭೆ ಚುನಾವಣೆ: ಬೀದರ್ ನಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಂದ ಮತ ಪ್ರಚಾರ

Suddi Udaya
error: Content is protected !!