September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕನ್ಯಾಡಿ ಸೇವಾಭಾರತಿಯಿಂದ 7 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

ಸೌತಡ್ಕ : ಬೆಂಗಳೂರು ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸಬಿಲಿಟಿಯ ಸಹಕಾರದೊಂದಿಗೆ ಸೇವಾಭಾರತಿಯ ಅಂಗಸಂಸ್ಥೆಯಾದ ಸೇವಾಧಾಮದಿಂದ ಗುರುತಿಸಲ್ಪಟ್ಟ ಬೆನ್ನುಹುರಿ ಅಪಘಾತಕ್ಕೊಳಗಾದ ಶಿಬಾಜೆಯ ಮೋಹನ್ ಪಿಬಿ, ಮಹೇಶ್ ಗುತ್ತಿಗಾರು, ನಿಡ್ಲೆಯ ಚಂದ್ರಶೇಖರ್ ಭಟ್, ಪುತ್ತೂರಿನ ಶ್ರೀಮತಿ ಜೈನಾಬಿ, ಬದಿಯಡ್ಕದ ಚಂದ್ರಶೇಖರ್, ಕಡಬದ ಧನಂಜಯ ಮತ್ತು ಯೋಗೀಶ್ ಎರ್ಮಲ್ ರವರಿಗೆ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮವನ್ನು ಅ. 20 ದೀಪಾವಳಿ ಹಬ್ಬದಂದು ಸೌತಡ್ಕ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೇವಾಧಾಮದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪುತ್ತೂರಿನ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಶ್ರೀಮತಿ ರೂಪಲೇಖರವರು ಗಾಲಿಕುರ್ಚಿಗಳನ್ನು ಹಸ್ತಾಂತರಿಸಿ ಫಲಾನುಭವಿಗಳಿಗೆ ವಿಶ್ವಾಸ ಬದುಕಿಗಾಗಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಸೇವಾಧಾಮ ಸಂಸ್ಥಾಪಕ ಕೆ ವಿನಾಯಕ ರಾವ್, ಬೆನ್ನು ಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು, ಆರೈಕೆದಾರರು, ಫಲಾನುಭವಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ಮಾನವನ ವರ್ತನೆಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಮತ್ತು ಭವಿಷ್ಯ: ಅಂತಾರಾಷ್ಟ್ರೀಯ ವಿಚಾರ ಸಂಕಿರಣ

Suddi Udaya

ಪುದುವೆಟ್ಟು ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿ ಸರ್ಕಾರದ ಪ್ರತಿಜ್ಞಾವಿಧಿ ಸ್ವೀಕಾರ

Suddi Udaya

ನೆರಿಯ ವಲಯದ ಭಜನಾ ಪರಿಷತ್ ಸಭೆ

Suddi Udaya

ಜೀವಿತಾವಧಿಯಲ್ಲಿ ಹೇಗೆ ಬದುಕಿದ್ದಾನೆ ಎಂಬುದು ಬಹಳ ಮುಖ್ಯ: ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲ – ತಾ.ಪಂ ವಿಶ್ರಾಂತ ಅಧೀಕ್ಷಕ‌ ಪ್ರಶಾಂತ್ ಬಳಂಜ ಅವರಿಂದ ವಿಶಿಷ್ಟ ರೀತಿಯ ಕೃತಜ್ಞತಾ ಕಾರ್ಯಕ್ರಮ

Suddi Udaya

ಶಾಸಕ ಹರೀಶ್ ಪೂಂಜಾ ಅಧ್ಯಕ್ಷತೆಯಲ್ಲಿ ಅಕ್ರಮ – ಸಕ್ರಮ ಸಮಿತಿ ಸಭೆ; ಅರ್ಹ 28  ಮಂದಿ  ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರ  ವಿತರಣೆ

Suddi Udaya

ಮೇಲಂತಬೆಟ್ಟು ಕೊಡ ಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆ

Suddi Udaya
error: Content is protected !!