July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಮೊದಲ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಉಜಿರೆ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಭವಿಷ್ಯವನ್ನು ಪ್ರಜ್ವಲಿಸುವಂತೆ ಮಾಡುತ್ತದೆ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಎಲ್ಲರಿಗೂ ಪ್ರೇರಣಾದಾಯಕರಾಗಿದ್ದು, ಬದುಕಿನಲ್ಲಿ ಸರಿಯಾದ ಅನುಕರಣೀಯ ವ್ಯಕ್ತಿಗಳನ್ನು ಆಯ್ದುಕೊಳ್ಳಿ. ನಾಲ್ಕು ವರ್ಷದ ಶೈಕ್ಷಣಿಕ ಜೀವನವನ್ನು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ತಮಿಳುನಾಡಿನ ಇಸ್ಕಾನ್ ದೇವಾಲಯದ ನಿರ್ದೇಶಕರಾದ ಶ್ರೀರಾಮ್ ಚರಣ್ ಅರವಿಂದ ದಾಸ ಸ್ವಾಮಿಗಳು ನುಡಿದರು.

ಅವರು ಅ.25ರಂದು ಉಜಿರೆ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಜರುಗಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಮೊದಲ ವರ್ಷದ ಬಿಇ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಎಸ್. ಮಾತನಾಡಿ, ಪೋಷಕರ ಕನಸನ್ನು ಈಡೇರಿಸುವ ಜವಾಬ್ದಾರಿ ವಿದ್ಯಾರ್ಥಿಗಳದ್ದಾಗಿದ್ದು, ಶೈಕ್ಷಣಿಕ ವರ್ಷವನ್ನು ಹಾಳುಗೆಡದೆ ಸದುಪಯೋಗ ಪಡಿಸಿಕೊಳ್ಳಿ. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಶಿಕ್ಷಣದ ಕೌಶಲ್ಯ ಮಾತ್ರವಲ್ಲದೆ, ಜೀವನ ಮೌಲ್ಯವನ್ನು ಕೂಡ ಕಲಿಸುತ್ತದೆ ಎಂದರು.

ವೇದಿಕೆಯಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಆಪ್ತರಾದ ಡಾ.ಹರೀಶ್, ಕಾಲೇಜು ಪ್ರಾಂಶುಪಾಲರಾದ ಅಶೋಕ್ ಕುಮಾರ್ ಟಿ., ಉಪನ್ಯಾಸಕರಾದ ಡಾ.ರವೀಶ್ ಪಡುಮಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಯುವರಾಜ ಪೂವಣಿ, ಎಸ್.ಡಿ.ಎಂ ಡಿಪ್ಲೊಮಾ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಕುಮಾರ್, ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ, ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ್, ಎಸ್.ಡಿ.ಎಂ ಪಿಜಿ ಕಾಲೇಜಿನ ಡೀನ್ ಡಾ. ಸೌಮ್ಯ, ಎಸ್.ಎನ್. ಕಾಕತ್ಕರ್, ಉಪನ್ಯಾಸಕರಾದ ಡಾ.ಮಧುಸೂಧನ್, ಡಾ.ಸತ್ಯನಾರಾಯಣ ಭಟ್, ಡಾ.ತ್ಯಾಗರಾಜ್, ಡಾ.ಬಸವ, ಡಾ. ಸಂದೀಪ್, ಸಹ ಉಪನ್ಯಾಸಕರು, ನೂತನ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಪ್ರಾಂಶುಪಾಲರಾದ ಅಶೋಕ್ ಕುಮಾರ್ ಟಿ. ಪ್ರಸ್ತಾವಿಸಿ ಸ್ವಾಗತಿಸಿದರು. ಡಾ. ವಿದ್ಯಾ ಹಾಗೂ ರಕ್ಷಿತ್ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ಡಾ. ರವೀಶ್ ಪಡುಮಲೆ ವಂದಿಸಿದರು.

Related posts

ಕಲ್ಮಂಜ ಗ್ರಾಮಸಭೆ: ಪೈಪುಗಳು ಒಡೆದು 4 ದಿವಸದಿಂದ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ.

Suddi Udaya

ಧರ್ಮಸ್ಥಳ: ಶ್ರೀ ಮಂ.ಅ. ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಭಿಯಾನ ಹಾಗೂ ಕನಕದಾಸ ಜಯಂತಿ ಕಾರ್ಯಕ್ರಮ

Suddi Udaya

ಶಿಬಾಜೆ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕೈರಂಡ ಶ್ರೀಮತಿ ಸಂಗೀತಾ ಮತ್ತು ಸನತ್ ಕುಮಾರ್ ದಂಪತಿ ಹಾಗೂ ಮನೆಯವರಿಂದ ಬೆಳ್ಳಿಯ ಮಂಟಪ ಸಮರ್ಪಣೆ

Suddi Udaya

ಬಿರುವೆರ್ ಕುಡ್ಲ ತಂಡದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಗೆ ಭೇಟಿ: ಉದ್ಯಮಿ ಮೋಹನ್ ಕುಮಾರ್ ರವರಿಂದ ಗೌರವ,

Suddi Udaya

ಕಳೆoಜ ಗ್ರಾಮಸ್ಥರ ಮನವಿಗೆ ಶಾಸಕ ಹರೀಶ್ ಪೂಂಜರಿಂದ ತಕ್ಷಣ ಸ್ಪಂದನೆ : ಕುದ್ರಾಯ ಕಕ್ಕಿಂಜೆ ಮುಖ್ಯ ರಸ್ತೆಯ ಮರಕ್ಕಡದಿಂದ ಮಿಯ್ಯಾರು ತನಕ ರಸ್ತೆ ಕಾಮಗಾರಿಗೆ ಚಾಲನೆ

Suddi Udaya

ಉಜಿರೆಯಲ್ಲಿ ಗ್ರಾಮೀಣ ಉದ್ಯಮಶೀಲತೆಯ ಕುರಿತು ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ

Suddi Udaya
error: Content is protected !!