September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಪಡ್ಡಂದಡ್ಕ: ಮಂಜನಬೆಟ್ಟು ಶ್ರೀ ನಾಗಬ್ರಹ್ಮ ಪರಿವಾರ ಸಾನಿಧ್ಯಗಳ ಪುನರ್ ಪ್ರತಿಷ್ಠೆ-ಎ.5 ನೂತನ ಶಿಲಾಮಯ ಶ್ರೀ ನಾಗದೇವರ ಬಿಂಬಗಳ ಜಲಾಧಿವಾಸ

ವೇಣೂರು: ಕರಿಮಣೇಲು ಗ್ರಾಮದ ಮಂಜನಬೆಟ್ಟು ಶ್ರೀ ನಾಗಬ್ರಹ್ಮ ಪರಿವಾರ ಸಾನಿಧ್ಯವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಸಾನಿಧ್ಯಗಳ ಪುನರ್ ಪ್ರತಿಷ್ಠಾಪನೆಯ ಪೂರ್ವಭಾವಿಯಾಗಿ ಎ. 5ರಂದು ನೂತನ ಶಿಲಾಮಯ ಶ್ರೀ ನಾಗದೇವರ 19 ಬಿಂಬಗಳನ್ನು ಜಲಾಧಿವಾಸ ಮಾಡುವ ಕಾರ್ಯಕ್ರಮವು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಬಹುಪ್ರಾಚೀನವಾದ ಶ್ರೀ ನಾಗಬ್ರಹ್ಮ ದೇವರ ಹಾಗೂ ಪರಿವಾರ ಸಾನಿಧ್ಯಗಳ ಆರೂಢವು ಜೀರ್ಣೋದ್ಧಾರಗೊಂಡು ಮೇ 24ರಂದು ಪ್ರತಿಷ್ಠಾಪನೆ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಇದೀಗ ಶ್ರೀ ನಾಗದೇವರ ಬಿಂಬಗಳನ್ನು ಎ.5ರಂದು ಜಲಾಧಿವಾಸ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ಪಡ್ಡಂದಡ್ಕ ಪೇಟೆಯಿಂದ ಭವ್ಯಮೆರವಣಿಗೆ ಮೂಲಕ ಕುಣಿತ ಭಜನೆ ತಂಡಗಳೊಂದಿಗೆ ಮಂಜನಬೆಟ್ಟು ಸಾನಿಧ್ಯಕ್ಕೆ ಆಹ್ವಾನಿಸಿ, 11 ಗಂಟೆಗೆ ಬಿಂಬಗಳ ಜಲಾಧಿವಾಸ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜಿನರಾಜ್ ಜೈನ್ ಪದ್ಮಾಂಬ ತಿಳಿಸಿದ್ದಾರೆ.

Related posts

ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವು: ವಾರೀಸುದಾರರ ಪತ್ತೆಗೆ ಧರ್ಮಸ್ಥಳ ಪೊಲೀಸರ ಮನವಿ

Suddi Udaya

ಜ.6: ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ. ಬೆಳ್ತಂಗಡಿಗೆ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ವಿ.ಪ. ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಭೇಟಿ

Suddi Udaya

ವೇಣೂರು ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಮಲ್ಲಿಕಾ ಕಾಶಿನಾಥ್ ಹೆಗ್ಡೆ ಉಪಾಧ್ಯಕ್ಷರಾಗಿ ಉಮೇಶ್ ಎನ್.

Suddi Udaya

ಪೆರಿಂಜೆಯಲ್ಲಿ ಎನ್ನೆಸ್ಸೆಸ್ ವತಿಯಿಂದ ಅಮೃತ ಕಲಶ ಯಾತ್ರೆಯೊಂದಿಗೆ ಸ್ವಚ್ಛತಾ ಅಭಿಯಾನ

Suddi Udaya
error: Content is protected !!