March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಎಕ್ಸೆಲ್ ಬೆಳಕು ಯೋಜನೆಯಡಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗುರುವಾಯನಕೆರೆ: ಪಿಯು ಶಿಕ್ಷಣ ಹಾಗೂ ನೀಟ್ , ಜೆಇಇ, ಸಿಇಟಿ, ಎನ್ ಡಿ ಎ, ನಾಟಾ, ಬಿಎಸ್ಸಿ ಅಗ್ರಿ, ವಾಣಿಜ್ಯ ವಿಭಾಗದಲ್ಲಿ ಸಿಎ,ಸಿ ಎಸ್, ಕ್ಲಾಟ್ ಮೊದಲಾದ ಪರೀಕ್ಷೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರಾಗಿರುವ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಕಳೆದ ಬಾರಿಯಂತೆ, ಈ ವರ್ಷವೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಅರ್ಜಿ ಆಹ್ವಾನಿಸುತ್ತಿದೆ ಎಂದು ಎಕ್ಸೆಲ್ ಶಿಕ್ಷಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯ ಪಠ್ಯ ಕ್ರಮದ ಒಂಬತ್ತನೆಯ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 98 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದವರು ಹಾಗೂ ಸಿ ಬಿ ಎಸ್ ಇ/ಐ ಸಿ ಎಸ್ ಇ ಯ ವಿದ್ಯಾರ್ಥಿಗಳು ಶೇಕಡಾ 95 ಮತ್ತು ಹೆಚ್ಚುಅಂಕ ಪಡೆದವರು ಈ ಯೋಜನೆಗೆ ಅರ್ಹರು. ಹತ್ತನೇ ತರಗತಿಯ ಮಧ್ಯಾವಧಿ ಪರೀಕ್ಷೆಯಲ್ಲಿ ಕ್ರಮವಾಗಿ 98 ಶೇಕಡಾ ಹಾಗೂ 95 ಶೇಕಡಾಕ್ಕಿಂತ ಅಧಿಕ ಪಡೆದವರಿಗೆ ಕೂಡಾ ಈ ಯೋಜನೆಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ.

ಎಕ್ಸೆಲ್ ಬೆಳಕು ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಪದವಿ ಪೂರ್ವ ಶಿಕ್ಷಣ ಹಾಗೂ ಅವರ ಆಯ್ಕೆಯ ಕೋಚಿಂಗ್ ನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಅಥವಾ ಪಾಲಕರು ಕಾಲೇಜು ಕಚೇರಿಗೆ ನೇರವಾಗಿ ಭೇಟಿ ನೀಡಬಹುದು. ಅಥವಾ +918867242769 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Related posts

ನಗರಗಳಲ್ಲಿ ಬಿ -ಖಾತಾ ಆಂದೋಲನ: ಜನರ ಕಣ್ಣೊರೆಸುವ ತಂತ್ರ, ಖಜಾನೆ ತುಂಬಿಸುವ ಒಳತಂತ್ರ: ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಟೀಕೆ

Suddi Udaya

ಬ್ಯಾನರ್ ಕಟ್ಟುವ ವೇಳೆ ತೆರೆದ ಚರಂಡಿಗೆ ಬಿದ್ದ ಶಿಕ್ಷಕನಿಗೆ ಗಾಯ

Suddi Udaya

ಅ.10-11: ಬಾಲಕರ ಹಾಗೂ ಬಾಲಕಿಯರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

Suddi Udaya

ಮಾಲಾಡಿ: ಅಮೃತ ಸಂಜೀವಿನಿ ಒಕ್ಕೂಟದ ಮಹಾಸಭೆ

Suddi Udaya

ಶಾಸಕ ಹರೀಶ್ ಪೂಂಜರವರನ್ನು ಭೇಟಿ ಮಾಡಿದ ಸ್ಪಂದನ ಆಟೋ ಚಾಲಕ- ಮಾಲಕ ಸಂಘದ ಸದಸ್ಯರು: ರಸ್ತೆ ದುರಸ್ತಿ ಬಗ್ಗೆ ಮನವಿ, ಶಾಸಕರಿಂದ ಶೀಘ್ರ ಸರಿಪಡಿಸುವ ಭರವಸೆ

Suddi Udaya

ಮದ್ದಡ್ಕತಾಯಿ ರಕ್ತೇಶ್ವರಿ ದೈವ ಮತ್ತು ಪಿಲಿಚಾಮುಂಡಿ ದೈವಸ್ಥಾನದ ಜೀರ್ಣೋದ್ಧಾರ: ಊರ ಭಕ್ತಾದಿಗಳಿಂದ ಶ್ರಮದಾನ

Suddi Udaya
error: Content is protected !!